ಪಾವಗಡ ಜೂನ್ ೧೬ : ಕೊರೊನಾ ಅನ್ನುವ ಪೆಡಂಭೂತ ನಮ್ಮ ರಾಜ್ಯದ್ದಲ್ಲಿ ಹರಡಿದ್ದಲ್ಲ ಅದು ಅನ್ಯ ರಾಷ್ಟ್ರ , ರಾಜ್ಯಗಳಿಂದ ಹರಡಿರೋ ವೈರಸ್ ಅದನ್ನು ಓಡಿಸುವ ಮನಸ್ಥೈರ್ಯ ವೃದ್ದಿಸಿಕೊಳ್ಳಿ ಎಂದು ಶಾಸಕ ವೆಂಕಟರವಣಪ್ಪ ತಿಳಿಸಿದರು.
ಪಾವಗಡ ಪಟ್ಟಣದ ಎಸ್.ಎಸ್ಕೆ ರಂಗಮಂದಿರದಲ್ಲಿ ಎಚ್.ವಿ ವೆಂಕಟೇಶ್ ಅಭಿಮಾನಿ ಬಳಗದ ವತಿಯಿಂದ ಆಯೋಜಿಸಿದ್ದ ಕೊರೊನಾ ವಾರಿಯರ್ಸ್ಗಳಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಕೊರೊನಾ ನಮ್ಮ ರಾಜ್ಯದಲ್ಲಿಲ್ಲ ಅದು ಅನ್ಯರಾಜ್ಯಗಳಿಂದ ಹರಡಿದ ವೈರಸ್. ಹೆದರುವ ಅವಶ್ಯವಿಲ್ಲ ಧೈರ್ಯವಾಗಿ ಎದುರಿಸುವ ಮನಶಕ್ತಿ ವೃದ್ದಿಸಿಕೊಳ್ಳಬೇಕು ಇದನ್ನು ತಡೆಗಟ್ಟುವ ಕ್ರಮ ಅನುಸರಿಸುವಂತೆ ಜಾಗೃತಿ ಮೂಡಿಸಿದವರಲ್ಲಿ ನಮ್ಮ ತಾಲ್ಲೂಕಿನ ಆಶಾ, ಅಂಗನವಾಡಿ ಕಾರ್ಯಕರ್ತೆಯರ ಸೇವಾ ಭಾವನೆ ಅನನ್ಯವಾಗಿದೆ ಎಂದರು.
ಪಾವಗಡದಲ್ಲಿನ ಆರೋಗ್ಯ ,ತಾಲ್ಲೂಕು ಆಡಳಿತ, ಪೊಲೀಸ್ ಇಲಾಖೆ, ಅರಣ್ಯ, ಹೀಗೆ ಎಲ್ಲಾ ಇಲಾಖೆಗಳ ಸೇವಾ ಕಾರ್ಯ ಶ್ಲಾಘನೀಯ ಎಂದು ಸ್ಮರಿಸಿ ಮುಂದಿನ ಹಂತದಲ್ಲಿ ಪಾವಗಡದ ಜನತೆಗೆ ಅವಶ್ಯ ಮೂಲಭೂತ ಸೌಕರ್ಯಗಳನ್ನು ಇನ್ನು ಹೆಚ್ಚು ಕಲ್ಪಿಸುವ ಪ್ರಯತ್ನ ಮಾಡುತ್ತೇನೆ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಎಚ್. ವಿ .ವೆಂಕಟೇಶ್ ಮಾತನಾಡಿ ಕೊರೊನಾ ಕಳೆದ ಹಿನ್ನೆಲೆ ಮೂರು ತಿಂಗಳಿಂದ ಹಗಲು ರಾತ್ರಿಯೆನ್ನದೆ ಶ್ರಮಿಸಿದ ಎಲ್ಲಾ ಇಲಾಖೆಗಳ ಸಿಬ್ಬಂದಿಗಳನ್ನು ಹಾಡಿ ಹೊಗಳಿದರು. ಮತ್ತೊಂದು ವಿಶೇಷವೆಂದರೆ ತಮ್ಮ ಹುಟ್ಟು ಹಬ್ಬದ ಹಿನ್ನೆಲೆ ನೂರಾರು ಸಂಖ್ಯೆಯಲ್ಲಿ ನಿರ್ಗತಿಕರಿಗೆ, ಅನಾಥರಿಗೆ ,ವೃದ್ದರಿಗೆ ಬಟ್ಟೆ ಆಹಾರ ಇನ್ನೀತರೆ ಅವಶ್ಯ ವಸ್ತುಗಳನ್ನು ನೀಡುತ್ತಾ ಬಂದಿದ್ದಾರೆ. ಆ ಪದ್ದತಿಯನ್ನು ಇಂದು ಸ್ಮರಿಸಬಹುದಾಗಿದೆ.
ದಂಡಾಧಿಕಾರಿ ವರದರಾಜು ಮಾತನಾಡಿ ಕೋರೊನಾ ಮಹಾಮಾರಿಯನ್ನ ತಡೆಗಟ್ಟುವ ಕ್ರಮಗಳನ್ನು ಅನುಸರಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ವಿ ವೆಂಕಟೇಶ್ ಅವರ ಜನ್ಮ ದಿನದ ಪ್ರಯುಕ್ತ ಬಡವರಿಗೆ ಆಸರೆಯಾಗಲೆಂದು ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ನೂರಾರು ಸಂಖ್ಯೆಯಲ್ಲಿ ರಕ್ತ ದಾನಿಗಳು ಭಾಗವಹಿಸಿದ್ದು ಗಮನಸೆಳೆಯಿತು.
ಕಾರ್ಯಕ್ರಮದಲ್ಲಿ ಪೊಲೀಸ್, ಆರೋಗ್ಯ, ಆಡಳಿತ ವರ್ಗದವರನ್ನು ಗೌರವಿಸಲಾಯಿತು. ಇದೇ ವೇಳೆ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಸೀರೆ ನೀಡೊ ಸಂಸ್ಕೃತಿ ಮೂಲಕ ಅಭಿನಂದನೆ ಸಲ್ಲಿಸಿದ್ದು ವಿಶೇಷವಾಗಿತ್ತು.
ಇದೇ ವೇಳೆ ಹಿರಿಯ ಮುಖಂಡ ತಾಳೇಮರದಳ್ಳಿ ನರಸಿಂಹಯ್ಯ, ಮಾಜಿ ಶಾಸಕ ಸೋಮ್ಲನಾಯ್ಕ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೇಶ್ ಬಾಬು,ಸರ್ಕಲ್ ಇನ್ಸ್ಪೆಕ್ಟರ್ ನಾಗರಾಜು. ಆರೋಗ್ಯಾಧಿಕಾರಿ ತಿರುಪತಯ್ಯ , ಮುಖಂಡರಾದ ಶಂಕರ್ ರೆಡ್ಡಿ, ಪುರಸಭಾ ಸದಸ್ಯರಾದ ರಾಜೇಶ್,ಬಾಲ ಸುಬ್ರಮಣ್ಯಂ, ವೇಲು, ಶಾ ಬಾಬು ಸೇರಿದಂತೆ ಹಲವರಿದ್ದರು.
ವರದಿ: ನವೀನ್ ಕಿಲಾರ್ಲಹಳ್ಳಿ