Covid 19: ಪಾವಗಢ ತಾಲ್ಲೂಕಿನಲ್ಲಿ ಹೂವು, ಸೊಪ್ಪು ಮಾರುವವರ ನರೆವಿ ಬಂದ ರಾಮಕೃಷ್ಣ ಸೇವಾಶ್ರಮ ಹಾಗೂ ಇನ್ಫೋಸಿಸ್ ಫೌಂಡೇಷನ್
ಪಾವಗಡ ಜೂನ್ 16 :- ಕೊರೋನಾ ಸೋಂಕಿ ನ ಲಾಕ್ ಡೌನ್ ಪರಿಣಾಮ ವಾಗಿ ಆರ್ಥಿಕ ಸಂಕಷ್ಟಕ್ಕೆ ಹೊಳಗಾಗಿರುವ ಹೂವು, ಸೊಪ್ಪು ಮಾರುವವರ ಶ್ರೀ ರಾಮಕೃಷ್ಣ ಸೇವಾಶ್ರಮ ಹಾಗೂ ಇನ್ಫೋಸಿಸ್ ಫೌಂಡೇಷನ್ ಬಂದಿದೆ.
ಕಳೆದ ಮೂರು ತಿಂಗಳಿನಿಂದ ಸತತವಾಗಿ ನೊಂದವರಿಗೆ ಸಹಾಯಹಸ್ತವನ್ನು ನೀಡುತ್ತಿರುವ ವಿಚಾರ ಎಲ್ಲರಿಗೂ ತಿಳಿದ ವಿ಼ಷಯ, ಈ ನಿಟ್ಟಿನಲ್ಲಿ ಪ್ರತಿದಿನ ಒಂದಲ್ಲ ಒಂದು ವರ್ಗದ ಜನರನ್ನು ಗುರುತಿಸಿ ಸಹಾಯ ಹಸ್ತ ನೀಡುವುದು ಈ ಸಂಸ್ಥೆಯ ವಿಶೇಷತೆ. ಸ್ವಾಮಿ ಜಪಾನಂದಜೀ ರವರು ಇಂದು ಬೀದಿಯಲ್ಲಿ ಸೊಪ್ಪು ಮಾರುವವರು, ಹೂ ಮಾರುವವರು ಗುರುತಿಸಿ ಅವರ ಮನವಿಗೆ ಸ್ಪಂದಿಸಿ ದಿನಸಿ ಪದಾರ್ಥಗಳನ್ನು ನೀಡಿದರು.
ಸುಮಾರು 60 ಜನರಿಗೆ ಇಂದು ಆಹಾರ ಧಾನ್ಯಗಳ ಕಿಟ್‍ಗಳನ್ನು, ವಿ.ಮಂಜುನಾಥ್ ಹಾಗೂ ವಿವೇಕಾನಂದ ತಂಡ ಸದಸ್ಯರು ಎಲ್ಲರಿಗೂ ವಿತರಿಸಿದರು.
ಕೋವಿಡ್19 ಲಾಕ್ ಡೌನ್ ದಿನದಿಂದ ಪ್ರಿತಿಯೊಂದು ವರ್ಗದವರಿಗೂ ಸಹಾಯ ಹಸ್ತ ನೀಡಲು ಮುಂದಾಗಿರುವ ಶ್ರೀರಾಮಕೃಷ್ಣ ಸೇವಾಶ್ರಮ, ವಿವೇಕಾನಂದ ತಂಡದವರು ಇನ್ಫೋಸಿಸ್ ಫೌಂಡೇಷನ್ ಜೊತೆ ಗೂಡಿ ಈ ಸಮಾಜ ಸೇವೆಯಿಲ್ಲಿ ನಿರತರಾಗಿದ್ದಾರೆ. ಇಲ್ಲಿಯ ವರೆಗೆ 8000 ಕ್ಕೂ ಹೆಚ್ಚು ಜನರಿಗೆ ಸಹಾಯ ಹಸ್ತ ನೀಡಿವೆ ಈ ಸಂಘಟನೆಗಳು..