IMG 20230410 WA0011

ಪಾವಗಡ:ತಾಲೂಕಿಗೆ ಭದ್ರಾ ಮೇಲ್ದಂಡೆ ಯೋಜನೆಯನ್ನು ತಂದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ…!

DISTRICT NEWS ತುಮಕೂರು

ತಾಲೂಕಿಗೆ ಭದ್ರಾ ಮೇಲ್ದಂಡೆ ಯೋಜನೆಯನ್ನು ತಂದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ. ಮಾಜಿ ಎಂ.ಪಿ ಜನಾರ್ದನ ಸ್ವಾಮಿ.
ಪಾವಗಡ : ಅತ್ಯಂತ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿಯನ್ನು ಕಟ್ಟಿಕೊಂಡಿದ್ದ ಪಾವಗಡ ತಾಲೂಕಿಗೆ ಭದ್ರಾ ಮೇಲ್ದಂಡೆ ಯೋಜನೆಯ ನೀರು ಹರಿಸುವಂತೆ ಮಾಡಿದ್ದು ಬಿಜೆಪಿ ಸರ್ಕಾರ ಎಂದು, ಮಾಜಿ ಎಂ.ಪಿ ಜನಾರ್ಧನ ಸ್ವಾಮಿ ತಿಳಿಸಿದರು.

ಭಾನುವಾರ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರ ಮಾತನಾಡಿದರು.
2009ರಲ್ಲಿ ತಾನು ಚಿತ್ರದುರ್ಗದ ಎಂ.ಪಿ ಯಾದಾಗ
ಕೆರೆಗಳಿಗೆ ನೀರು ಹರಿಸುವ ಯೋಜನೆಯಾದ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಪಾವಗಡ ತಾಲೂಕಿನ ಹೆಸರೇ ಇರಲಿಲ್ಲ, ಅದನ್ನು ಮನಗಂಡ ತಾನು ಯೋಜನೆಯಲ್ಲಿ ಪಾವಗಡದ ಹೆಸರನ್ನು ಸೇರಿಸಿದೆ ಎಂದರು.
ಚಿತ್ರದುರ್ಗದ ಎಂ.ಪಿ ಯಾಗಿ ಕಾರ್ಯನಿರ್ವಹಿಸಿದಾಗ ತಾಲೂಕಿನ ಜ್ವಲಂತ ಸಮಸ್ಯೆಗಳ ಬಗ್ಗೆ ತನಗೆ ಅರಿವಿದೆ ಎಂದರು.

ತಾಲೂಕಿನಲ್ಲಿ ಸುಮಾರು ವರ್ಷಗಳಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಅಧಿಕಾರ ವಹಿಸಿಕೊಂಡು ಆಡಳಿತ ನಡೆಸಿದ್ದರೂ ಸಹ ತಾಲೂಕು ಏಕೆ ಅಭಿವೃದ್ಧಿ ಹೊಂದಿಲ್ಲ ಎಂದು,
ಅಭಿವೃದ್ಧಿ ಎಂದರೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದೆಂಧು ತಾಲೂಕನ್ನ ಆಳಿದ ಶಾಸಕರು ತಿಳಿದಿದ್ದಾರೆ, ಮೂಲಭೂತ ಸೌಕರ್ಯಗಳೇ ಬೇರೆ ಅಭಿವೃದ್ಧಿಯ ಬೇರೆ ಎಂದರು.
ತಾಲೂಕಿನ ಜನರು ಒಮ್ಮೆ ಬಿಜೆಪಿ ಪಕ್ಷಕ್ಕೆ ಅವಕಾಶ ನೀಡಿದರೆ ಅಭಿವೃದ್ಧಿ ಎಂದರೆ ಏನು ಎಂಬುದನ್ನು ಮಾಡಿ ತೋರಿಸುತ್ತೇವೆ ಎಂದರು.

IMG 20230410 WA0012


ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ,
ಬಿಜೆಪಿಯು ರಾಷ್ಟ್ರೀಯ ಪಕ್ಷವಾಗಿದ್ದು, ಟಿಕೆಟ್ ಕೊಡುವುದು ಹೈಕಮಾಂಡ್ ಗೆ ಬಿಟ್ಟ ವಿಚಾರವಾಗಿದೆ ಅದರ ಬಗ್ಗೆ ತಾವು ಏನು ಹೇಳಬಯಸುವುದಿಲ್ಲ.
ಒಂದು ವೇಳೆ ಹೈಕಮಾಂಡ್ ಒಪ್ಪಿದರೆ ತಾನು ಬಿಜೆಪಿ ಪಕ್ಷದ ಅಭ್ಯರ್ಥಿಯಾಗಲು ಸಿದ್ಧವೆಂದರು.ತಾಲೂಕು ಮಟ್ಟದ ಬಿಜೆಪಿ ಪಕ್ಷದಲ್ಲಿ ಯಾವುದೇ ಒಡಕುಗಳಿಲ್ಲವೆಂದು, ಎಲ್ಲರೂ ಪಕ್ಷ ಸಿದ್ಧಾಂತಗಳಿಗೆ ಒಳಪಟ್ಟು ಕಾರ್ಯನಿರ್ವಹಿಸುತ್ತೇವೆ ಎಂದರು.
ಚಿತ್ರದುರ್ಗದಲ್ಲಿ ತಾನು ಎಂಪಿಯಾಗಿ ಕಾರ್ಯನಿರ್ವಹಿಸಿದಾಗ ಡಿ ಆರ್ ಡಿ ಓ ,ಇಸ್ರೋ, ಆಟೋಮಿಕ್ ರಿಸರ್ಚ್ ಸೆಂಟರ್, ಇವುಗಳೇ ತಾನು ಚಿತ್ರದುರ್ಗ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿಗೆ ನಿದರ್ಶನಗಳೆಂದರು.
ತಾಲೂಕಿನ ಅಭಿವೃದ್ಧಿಗೆ ಬಿಜೆಪಿಗೆ ಮತ ನೀಡಬೇಕೆಂದು ತಿಳಿಸಿದರು.
ಪಾವಗಡ ತಾಲ್ಲೂಕು ಮಾಜಿ ಶಾಸಕ ಸೋಮ್ಲಾನಾಕ್. ಆರ್ ಎಸ್ ಎಸ್ ಪ್ರಮುಖರಾದ ಆನಂದರಾವ್ ಕಾಂಗ್ರೆಸ್ ನ ನಾಯಕ ಹಿರಿಯ ವಕೀಲ ನಾಗೇಂದ್ರಪ್ಪ.ಬಿಜೆಪಿ ಮುಖಂಡ ವೆಂಕಟರಾಮ್ ಡಾಕ್ಟರ್, ವದಕನಲ್ಲು ಗೋಪಾಲ ರೆಡ್ಡಿ ಸೇರಿ

ಕಾರ್ಯಕ್ರಮದಲ್ಲಿ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷರಾದ ರವಿಶಂಕರ್ ನಾಯಕ್, ತಾಲೂಕು ಬಿಜೆಪಿ ಮಂಡಲ ಉಪಾಧ್ಯಕ್ಷರಾದ ಶಿವಲಿಂಗಪ್ಪ, ತಾಲೂಕು ಬಿಜೆಪಿ ಮಂಡಲ ಕಾರ್ಯದರ್ಶಿ ಶೇಖರ್ ಬಾಬು, ಯುವ ಮೋರ್ಜಾ ಅಧ್ಯಕ್ಷರು ಮಧು ಪಾಳೇಗಾರ್, ನವೀನ್ ಕುಮಾರ್, ಜಿಲ್ಲಾ ಎಸ್ ಟಿ ಮೋರ್ಚಾ ಅಧ್ಯಕ್ಷರು ಬ್ಯಾಡನೂರು ಶಿವ, ತಾಲೂಕು ಓಬಿಸಿ ಮರ್ಜ ಹನುಮಂತರೆಡ್ಡಿ, ಜಿಲ್ಲಾ ಓಬಿಸಿ ಮೋರ್ಚಾ ಕಾರ್ಯದರ್ಶಿ ದುಗ್ಗಿ ವೆಂಕಟೇಶ್, ಜಿಲ್ಲಾ ಎಸ್ ಸಿ ಮೋರ್ಚಾ ಉಪಾಧ್ಯಕ್ಷರಾದ ರಾಮಾಂಜಿನಪ್ಪ, ಪುರಸಭಾ ನಾಮಿನೇ ಸದಸ್ಯರಾದ ಪ್ರಸನ್ ಕುಮಾರ್ ಇನ್ನು ಮುಂತಾದವರು ಉಪಸ್ಥಿತರಿದ್ದರು.
ವರದಿ ಶ್ರೀನಿವಾಸಲು.ಎ