07 ynh 01 scaled

ಪಾವಗಡ: ಮಾಜಿ ಬಿಜೆಪಿ ಮುಖಂಡ ಕಾಂಗ್ರೆಸ್‍ಗೆ ಸೇರ್ಪಡೆ

DISTRICT NEWS ತುಮಕೂರು

ಬಿಜೆಪಿ ಮುಖಂಡ ಕಾಂಗ್ರೆಸ್‍ಗೆ ಸೇರ್ಪಡೆ
ವೈ.ಎನ್.ಹೊಸಕೋಟೆ : ಗ್ರಾಮದ ಮಾಜಿ‌ ಬಿಜೆಪಿ ಯುವ ಮುಖಂಡ ಟಿ.ಉಮೇಶ್ ರವರು ವೆಂಕಟರಮಣಪ್ಪ ಮತ್ತು ಕಾಂಗ್ರೆಸ್ ಅಭ್ಯರ್ಥಿ ಹೆಚ್.ವಿ.ವೆಂಕಟೇಶ್‍ರವರ ಸಮ್ಮುಖದಲ್ಲಿ ಶುಕ್ರವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ವೆಂಕಟರಮಣಪ್ಪ ಸುಮಾರು 15 ವರ್ಷಗಳಿಂದ ನಮ್ಮ ಪಕ್ಷಕ್ಕೆ ನಮ್ಮ ಜೊತೆಯಲ್ಲಿ ಇರಬೇಕು ಎಂದು ತಿಳಿಸುತ್ತಾ ಬಂದಿದ್ದೆನು. ಆದರೆ ಅವರು ಒಪ್ಪಿರಲಿಲ್ಲ. ಬದಲಿಗೆ ಗ್ರಾಮದಲ್ಲಿ ಹೆಸರೇ ಇಲ್ಲದಿದ್ದ ಬಿಜೆಪಿ ಪಕ್ಷ ಕಟ್ಟಿ ಬೆಳೆಸುತ್ತಿದ್ದರು ಜನತೆಯನ್ನು ತನ್ನೊಟ್ಟಿಗೆ ಇರಿಸಿಕೊಂಡು ಸ್ಪರ್ಧೆ ನೀಡುವಷ್ಟರ ಮಟ್ಟಿಗೆ ಪಕ್ಷವನ್ನು ಬೆಳೆಸಿದ್ದರು. ಆದರೆ ಬಿಜೆಪಿಯು ತನ್ನ ನಿಷ್ಟಾವಂತ ಕಾರ್ಯಕರ್ತರನ್ನು ನಿರ್ಲಕ್ಷಿಸುತ್ತಾ ಸಾಗಿ ಅನ್ಯಾಯ ಮಾಡಿದೆ. ಈ ವಿಚಾರ ನನ್ನೊಂದಿಗೆ ಹಂಚಿಕೊಂಡಾಗ ಕಾಂಗ್ರೆಸ್ ಪಕ್ಷದಲ್ಲಿ ಕಾರ್ಯಕರ್ತರಿಗೆ ಎಲ್ಲಾ ರೀತಿಯಲ್ಲೂ ಸಂಪೂರ್ಣ ಸ್ವಾತಂತ್ರ ಮತ್ತು ನ್ಯಾಯ ಸಿಗುತ್ತದೆ. ಕಾಂಗ್ರೆಸ್ ಸಿದ್ದಾಂತಕ್ಕೆ ಒಪ್ಪಿ ಪಕ್ಷಕ್ಕೆ ಬರುವಂತೆ ಮನವರಿಕೆ ಮಾಡಲಾಗಿ ಕಾಂಗ್ರೆಸ್‍ಗೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಟಿ.ಉಮೇಶ್ ರವರು ತಾಲ್ಲೂಕಿನ ಬದಲಾವಣೆಯಾಗಬೇಕಾದರೆ ಯುವ ಮುಖಂಡರ ಅಗತ್ಯತೆ ಇದೆ. ಹೆಚ್.ವಿ.ವೆಂಕಟೇಶ್ ರವರು ಅಪಾರ ಜನಮನ್ನಣೆಯಲ್ಲಿರುವ ಮುಖಂಡರು ಅವರನ್ನು ಗೆಲ್ಲಿಸುವ ಮೂಲಕ ತಾಲ್ಲೂಕಿನ ಪ್ರಗತಿಗೆ ಕೈಜೋಡಿಸುವೆ ಎಂದರು.

ಇತ್ತೀಚೆಗೆ ಬಿಜೆಪಿ ಪಕ್ಷ ಇವರನ್ನು ಉಚ್ಚಾಟಿಸಿದ್ದರು. ಈಗ ಇವರು ಕೈ ಹಿಡಿದಿದ್ದಾರೆ. ಕಳೆದ ತಾಲ್ಲೂಕು ಪಂಚಾಯತಿ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವ ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಎ.ಪಿ.ಗಿರೀಶ್, ಬಾಲಂಪಲ್ಲಿ ತಿಮ್ಮಪ್ಪ ಇನ್ನಿತರರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಲಾಯರ್ ಭಗವಂತಪ್ಪ, ಎಸ್.ಟಿ.ನಾಗರಾಜು. ಎನ್.ಆರ್.ಅಶ್ವಥ್, ಎಂ.ಸಿ.ಜಯರಾಮು, ಹೆಚ್.ಆನಂದ, ಟಿ.ಜೆ.ವಿಶ್ವನಾಥ, ಷಂಷುದ್ದೀನ್, ಶ್ರೀನಿವಾಸಚಾರಿ, ಹೆಚ್.ಕೆ.ಶ್ರೀನಿವಾಸ, ಹೆಚ್.ಪಿ.ಕೃಷ್ಣ, ಜಯರಾಮಪ್ಪ, ಜಯಕೀರ್ತಿ, ಕೋಡಿಪಲ್ಲಿ ರಾಮಚಂದ್ರಪ್ಪ, ಎಲ್.ಡಿ.ಸುಬ್ರಮಣ್ಯಂ, ಪಿ.ಸಿ.ನಾಗರಾಜು, ಪಿ.ಸಿ.ಗೋಪಿ, ಎಲ್.ಕೆ.ರಾಘವೇಂದ್ರ, ರಾಮಾಂಜಿನಪ್ಪ, ಕೇಶವಮೂರ್ತಿ, ಶಿವಪ್ರಸಾದ್, ಗೋವಿಂದಪ್ಪ, ಸುಬ್ಬರಾಯಪ್ಪ, ನಾಗರಾಜು, ರವಿವರ್ಮ ಇತರರು ಇದ್ದರು

ವರದಿ : ರಾಮಚಂದ್ರ- ವೈ ಎನ್ ಹೊಸಕೋಟೆ.