ಅಪರಿಚಿತ ವಾಹನ ಡಿಕ್ಕಿ: ದ್ವಿಚಕ್ರ ವಾಹನ ಸವಾರ ಸ್ಥಳದಲ್ಲಿಯೇ ಸಾವು.
ಪಾವಗಡ : ತಾಲ್ಲೂಕಿನ ಗಂಗಸಾಗರ ಗೇಟ್ ಬಳಿ ಮಂಗಳವಾರ ರಾತ್ರಿ ಅಪರಿಚಿತ ವಾಹನ ಡಿಕ್ಕಿಯಾಗಿ ದ್ವಿಚಕ್ರ ವಾಹನ ಸವಾರ ಶಿವಣ್ಣ (33) ಎಂಬುವರು ಮೃತಪಟ್ಟಿದ್ದು, ದ್ವಿಚಕ್ರ ವಾಹನದಲ್ಲಿದ್ದ ಹನುಮಂತ ರಾಯಪ್ಪ(43) ಮತ್ತು ವಿದ್ಯಾರ್ಥಿ ಉಮೇಶ್(16) ಗೆ ತೀವ್ರ ಗಾಯಗಳಾಗಿವೆ.
ಮೃತ ವ್ಯಕ್ತಿ ತಾಲ್ಲೂಕಿನ ಮರಿದಾಸನಹಳ್ಳಿ ಗ್ರಾಮದ ನಿವಾಸಿ. ಕೃಷಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.ದ್ವಿಚಕ್ರ ವಾಹನ ಸವಾರ ಪಾವಗಡದಿಂದ ಮರದಾಸನಹಳ್ಳಿಗೆ ಹೋಗುವಾಗ ಅಪರಿಚಿತ ವಾಹನ ಗಂಗಸಾಗರದ ಗೇಟ್ ಬಳಿ ಡಿಕ್ಕಿಯಾಗಿದೆ.
ನಂತರ ಸ್ಥಳೀಯರು ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಗೆ ಮೃತ ವ್ಯಕ್ತಿಯನ್ನು ಮತ್ತು ಗಾಯಗಳನ್ನು ದಾಖಲಿಸಿದ್ದಾರೆ.
ಪ್ರಥಮ ಚಿಕಿತ್ಸೆಯ ನಂತರ ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸಲಾಗಿದೆ.
ವಿಷಯ ತಿಳಿದ ನಂತರ ಪಾವಗಡ ಠಾಣೆಯ ಎಸ್ ಐ ಗುರುನಾಥ್ ಮತ್ತು ಸಿಬ್ಬಂದಿ ದೀಪಕ್ ಕುಮಾರ್ ಇತರರು ಆಸ್ಪತ್ರೆಗೆ ಭೇಟಿ, ಪರಿಶೀಲಿಸಿ ಪಾವಗಡ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿಕೊಂಡಿದ್ದಾರೆ.
ವರದಿ : ಶ್ರೀನಿವಾಸಲು ಎ