ತಿರುಮಣಿ ಗ್ರಾ.ಪಂ. ಅಧ್ಯಕ್ಷರ ಅವಿರೋಧ ಆಯ್ಕೆ
ಪಾವಗಡ : ತಾಲ್ಲೂಕಿನ ನಾಗಲಮಡಿಕೆ ಹೋಬಳಿಯ ತಿರುಮಣಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ರಾಯಚರ್ಲು ಗ್ರಾಮದ
ಲಕ್ಷ್ಮಿದೇವಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ಹಿಂದಿನ ಅಧ್ಯಕ್ಷ ಲೋಕೇಶ್ ಚೌದರಿ ವಿರುದ್ಧ ಅವಿಶ್ವಾಸ ತೀರ್ಮಾನ ಕೈಗೊಂಡ ಹಿನ್ನೆಲೆ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಗೆ ರಾಯಚರ್ಲು ಗ್ರಾಮದ ಲಕ್ಷ್ಮಿ ದೇವಿ ಮಾತ್ರ ನಾಮ ಪತ್ರ ಸಲ್ಲಿಸಿದ್ದರು.
ಬೇರೆ ನಾಮಪತ್ರಗಳು ಸಲ್ಲಿಕೆಯಾಗದ ಕಾರಣ ತಹಶೀಲ್ದಾರ್ ವರದರಾಜು ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಿ ಅವಿರೋಧ ಆಯ್ಕೆ ಪ್ರಕಟಿಸಿ ಲಕ್ಷ್ಮೀದೇವಿಯವರಿಗೆ ಅಧಿಕಾರ ವಹಿಸಿಕೊಟ್ಟರು.
ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 13 ಸದಸ್ಯರಿದ್ದು. ಮಾಜಿ ಅಧ್ಯಕ್ಷ ಲೋಕೇಶ್ ಚೌದರಿ, ಮತ್ತು ಸದಸ್ಯ ಪ್ರಭಾವತಿ ಗೈರು ಹಾಜರಾಗಿದ್ದು.
ಅಧ್ಯಕ್ಷರೂ ಸೇರಿದಂತೆ ಒಟ್ಟು 11 ಜನ ಹಾಜರಿದ್ದರು.
ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ಅಧ್ಯಕ್ಷರಿಗೆ ಸದಸ್ಯರೆಲ್ಲಾ ಹೂ ಮಾಲೆ ಹಾಕಿ, ಪಟಾಕಿ ಸಿಡಿಸಿ, ಅಭಿನಂದನೆ ತಿಳಿಸಿದರು.
ಈ ಸಂದರ್ಭದಲ್ಲಿ ಪಿ.ಡಿ.ಒ ಸುದರ್ಶನ್, ಬಿಲ್ ಕಲೆಕ್ಟರ್ ಸುಬ್ರಮಣ್ಯ, ಡಿ ಈ ಓ ಸೂರ್ಯಪ್ರಕಾಶ್, ಗ್ರಾಮ ಪಂಚಾಯಿತಿ ಸದಸ್ಯರಾದ ಚಂದನ, ಗುರಪ್ಪ, ಕಲಕಂದಪ್ಪ, ಸುಜಾತ, ನರಸಮ್ಮ, ಮಲ್ಲಕ್ಕ, ನಾಗಮಣಿ, ಮಂಜುಳ,, ರಾಜಪ್ಪ, ಕೋನಯ್ಯ, ಕೊನಪ್ಪ ಮುಂತಾದವರು ಹಾಜರಿದ್ದರು.