ಆನೇಕಲ್: ಸರ್ಜಾಪುರದ ರಾಜಗೋಪಾಲ್ ಕಲ್ಯಾಣ ಮಂಟಪದಲ್ಲಿ ಆಗಸ್ಟ್ 09 ರಂದು ಮಂಗಳವಾರ
ಸ್ವಾಭಿಮಾನಿ ಮಾದಿಗ ಮಹಾ ಸಭಾದ ವತಿಯಿಂದ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಮಾದಿಗ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದ್ದು ತಾಲ್ಲೂಕಿನ ಎಲ್ಲಾ ಮಾದಿಗ ಸಮುದಾಯದ ಮುಖಂಡರು ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮಾದಿಗ ಸಮುದಾಯದ ಹಿರಿಯ ಮುಖಂಡರು ಉದಯ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಸಮುದಾಯ ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಪ್ರಗತಿಯನ್ನು ಕಾಣಬೇಕಾದಲ್ಲಿ ಸಮಾಜವು ಶೈಕ್ಷಣಿಕವಾಗಿ ಮುಂದುವರಿಯಬೇಕು ಎಂದು ಸ್ವಾಭಿಮಾನಿ ಮಾದಿಗ ಮಹಾ ಸಭಾದ ಮುಖ್ಯಸ್ಥ ಎ.ಉದಯ್ ಕುಮಾರ್ ತಿಳಿಸಿದರು.
ಇನ್ನು ಕಾರ್ಯಕ್ರಮಕಕ್ಕೆ ಪರಮಪೂಜ್ಯ ಶಿವಶರಣ ಶ್ರೀ ಶ್ರೀ ಬಸವಮೂರ್ತಿ ಮಾದರ ಚನ್ನಯ್ಯ ಸ್ವಾಮೀಜಿ ಹಾಗೂ ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಜಲ ಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ ಮತ್ತು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಮತ್ತು ಶಾಸಕರಾದ ರೂಪ ಶಶಿಧರ್ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಎಂ.ಶಂಕರಪ್ಪನವರು ಸೇರಿದಂತೆ ಸಮಾಜದ ಗಣ್ಯರು ಭಾಗವಹಿಸುತ್ತಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪಾವಗಡ ವಿಧಾನಸಭಾ ಕ್ಷೇತ್ರದ ಬಿಜೆಪಿ ಆಕಾಂಕ್ಷಿ ಶಾಂತ್ ಕುಮಾರ್,ಸರ್ಜಾಪುರ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಶಿವಣ್ಣ,ನಾರಾಯಣಸ್ವಾಮಿ,ಗುರುಸ್ವಾಮಿ,ನೆರಿಗಾ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ನರಸಿಂಹಯ್ಯ,ಸರ್ಜಾಪುರ ಗ್ರಾಮ ಪಂಚಾಯತಿ ಸದಸ್ಯರಾದ ವಿಜಯ್ ಶೇಖರ್,ಕಲಾವತಿ ಮೂರ್ತಿಕುಮಾರ್,ಚಿನ್ನು ರಾಮಸ್ವಾಮಿ,ಮುಖಂಡರಾದ ನಾಗರಾಜು, ಪ್ರೇಮ್ ಕುಮಾರ್,ಮೂರ್ತಿಕುಮಾರ್,ಸತೀಶ್ ಬಾಬು,ವೇಣು,ಸುರೇಶ್,ಸತೀಶ್,ವೆಂಕಟಸ್ವಾಮಿ ಹಾಗೂ ಮತ್ತಿತರರು ಹಾಜರಿದ್ದರು.:ವರದಿ ಹರೀಶ್ ಗುರುಮುರ್ತಿ ಆನೇಕಲ್