ವೈ ಎನ್ ಹೊಸಕೋಟೆ ಯ ಆಂಧ್ರ ಗಡಿ: ಮಡದಿಯ ಮೋಹಕ್ಕೆ ಗಂಡನ ಅಡ್ಡಿ, ಖಲಾಸ್..!
ಪಾವಗಡ :- ಅಕ್ಟೋಬರ್ 1 ನೇ ತಾರೀಖು ಪಾವಗಡದ ವೈ ಎನ್ ಹೊಸಕೋಟೆ ಹೋಬಳಿಯ ಮಂದಿ ಪ್ರಶಾಂತಮಯವಾಗಿದ್ದರು. ಆದರೆ ಇದ್ದಕ್ಕಿದ್ದಂತೆ ವೈ.ಎನ್ ಹೊಸಕೋಟೆ ಪೊಲೀಸ್ ಠಾಣೆಗೆ ಪೋನ್ ಕರೆಯೊಂದು ಬಂದು ಇಲ್ಲೊಂದು ಶವ ಬಿದ್ದಿದೆ ಅನ್ನುವ ಸುದ್ದಿ ಯಾವಾಗ ರವಾನೆಯಾಯ್ತೊ ವೈ ಎನ್ ಹೊಸಕೋಟೆ ಪೊಲೀಸರು ಅಲರ್ಟ್ ಆಗಿ ಸಬ್ ಇನ್ಸ್ಪೆಕ್ಟರ್ ರಾಮಯ್ಯ ಸಾಹೇಬ್ರ ನಿರ್ದೇಶನದಂತೆ ಎಎಸ್ಐ ಹನುಮಾನಾಯ್ಕ ಮತ್ತು ಸಿಬ್ಬಂಧಿಗಳು ಇನ್ಸ್ಪೆಕ್ಟರ್ ವೆಂಕಟೇಶ್ ರ ಗಮನಕ್ಕೆ ತಂದು ವೈ.ಎನ್ ಹೊಸಕೋಟೆಯಿಂದ ಸರಿ ಸುಮಾರು ಐದಾರು ಕಿಮೀ ದೂರದ ಗೌಡತಿಮ್ಮನಹಳ್ಳಿ ಮತ್ತು ಆಂಧ್ರದ ಜಗರೆಡ್ಡಿಪಲ್ಲಿ ನಡುವಿನ ಹೊಲವಲಯದ ಸ್ಪಾಟ್ಗೆ ದೌಡಾಯಿಸಿದ್ರು.
ಮುಖ್ಯ ರಸ್ತೆಯಿಂದ ಮುನ್ನೂರು ಮೀಟರ್ ಗಿಡ ಮರಗಳ ನಡುವಿನ ಸೀಳು ದಾರಿಯಲ್ಲಿ ಸಾಗಿದ ಪೊಲೀಸರಿಗೆ ಅಲ್ಲೊಂದು ಬೈಕು, ಮರದ ಕೆಳಗೆ ಮದ್ಯದ ಪಾಕೇಟ್ಗಳು, ಆಹಾರದ ಕವರ್ಗಳು ಅದರ ನಡುವೆ ಅನಾಥ ಶವ
ಇದೊಂದು ಸಾವು ವೈ.ಎನ್ ಹೊಸಕೋಟೆ ಪೊಲೀಸರಿಗೆ ಸಾಕಷ್ಟು ಸಂಶಯಗಳನ್ನು ಹುಟ್ಟು ಹಾಕಿತ್ತು.
ಹೀಗೆ ಈ ಕೊಲೆ ಇಡಿ ಅಕ್ಕಪಕ್ಕದ ಗ್ರಾಮದ ಜನರ ಬಾಯಿಂದ ಬಾಯಿಗೆ ಹರಡಿ ಭಯದ ಸಂಚಲನವನ್ನೇ ಮೂಡಿಸಿತ್ತು.
ನಿರ್ಜನ ಪ್ರದೇಶದ ಪೊದೆಯ ಮರೆಯಲ್ಲಿ ಸತ್ತು ಶವ ವಾಗಿದ್ದ ವ್ಯಕ್ತಿಯೇ ರವಿ
ಈತನದ್ದು ಆಂಧ್ರದ ಕಂಬದೂರು ಮಂಡಲ್ನ, ಜಗರೆಡ್ಡಿಪಲ್ಲಿ ಎನ್ನುವ ಮಾಹಿತಿಯೇನೊ ತಿಳಿಯಿತು.
ಇದೊಂಥರಾ ಮೇಲ್ನೋಟಕ್ಕೆ ಆಕಸ್ಮಿಕ ಸಾವೊ ಇಲ್ಲ ಕೊಲೆಯೋ ಎಂಬ ಅನುಮಾನ ಖಾಕಿಗಳ ತಲೆಯಲ್ಲಿತ್ತಾದರೂ ಮೇಲಾಧಿಕಾರಿಗಳಾದ ಎಸ್ಪಿ ಡಾ.ವಂಶೀಕೃಷ್ಣ, ಅಡಿಷನಲ್ ಎಸ್ಪಿ ಉದೇಶ್ ಡಿವೈಎಸ್ಪಿ ಪ್ರವೀಣ್ ಸಾಹೇಬ್ರ, ಗಮನಕ್ಕೆ ತಂದ ಇನ್ಸ್ಪೆಕ್ಟರ್ ವೆಂಕಟೇಶ್ ರವರು ಅನುಮಾನಸ್ಪದ ಸಾವು ಅಂತ ಆ ಕ್ಷಣಕ್ಕೆ ದಾಖಲಿಸಿದರು.
ಯಂಗ್ ಅಂಡ್ ಡೈನಾಮಿಕ್ ಪೊಲೀಸ್ ಆಫೀಸರ್ ಡಿವೈ ಎಸ್ಪಿ ಪ್ರವೀಣ್ ಸಾಹೇಬ್ರು ಈಗಾಗಲೇ ಈ ತರಹದ ಕೇಸ್ಗಳಲ್ಲಿ ಡೈನಾಮಿಕ್ಕಾಗೇ ತನಿಖೆಯ ತಂತ್ರ ರೂಪಿಸಿ ಸಕ್ಸಸ್ ಕಂಡವರು. ಅದರಂತೆ ಈ ಕೇಸ ನ್ನ ಹೆಚ್ಚು ತಲೆಕೆಡಿಸಿಕೊಂಡು ಪ್ರಕರಣದ ಪತ್ತೆಗೆ ಇನ್ಸ್ಪೆಕ್ಟರ್ ವೆಂಕಟೇಶ್ ರ ಮತ್ತು ಸಬ್ ಇನ್ಸ್ಪೆಕ್ಟರ್ ರಾಮಯ್ಯ,ಎ ಎಸ್.ಐ ರಂಗಪ್ಪ,ಹನುಮಾನಾಯ್ಕ ಮತ್ತು ಕ್ರೈಂ ಪ್ರಕರಣಗಳಲ್ಲಿ ಹೆಚ್ಚು ಶ್ರಮಿಸುತ್ತಿದ್ದ ಮುಖ್ಯಪೇದೆಗಳಾದ ಸೋಮಶೇಖರ್,ಕೇಶವರಾಜು,ಸೇರಿದಂತೆ ಇವರ ಸಾಥ್ಗೆ ಆನಂದ್ಕುಮಾರ್, ಶೌಕತ್,ಶಿವರಾಜು,ಶ್ರೀನಿವಾಸ್, ಮಹಾಂತೇಶ್,ಸದ್ದಾಂ,ವೆಂಕಟೇಶ್ ನಾಯ್ಕ, ಹನುಮೇಶ್,ವಿನೋದ್ ,ನಾಗೇಶ್ ಒಳಗೊಂಡ ಟೀಮ್ ವೊಂದನ್ನ ರೆಡಿ ಮಾಡಿ ರಹಸ್ಯವಾಗಿ ಪ್ರಕರಣದ ಪತ್ತೆಗೆ ಇಳಿಸಿದ್ರು..
ಆಂಧ್ರದ ಗಡಿಭಾಗದ ಸುತ್ತಲ ಮುತ್ತಲ ಪ್ರದೇಶಗಳಲ್ಲಿ ಅನೈತಿಕ ಸಂಬಂಧ, ವೈಶಮ್ಯದಲ್ಲಿ ಕೊಲೆ ಹೀಗೆ ಇಂತಹ ಕೇಸ್ಗಳು ಸಾಮಾನ್ಯವೆಂಬಂತಾಗಿ ಜನರು ಊರು ಬಿಡೋ ಭಯ ನಿರ್ಮಾಣ ವಾಗುತ್ತಿತ್ತು. ಆಗಾಗಿಯೇ ಜನರಲ್ಲಿನ ಭಯ ಓಡಿಸಬೇಕು ಎಂದು ವೈ.ಎನ್ ಹೊಸಕೋಟೆ ಪೋಲೀಸ್ ಅಧಿಕಾರಿಗಳು ತನಿಖೆ ಕಾರ್ಯ ಬಿಗಿನ್ ಮಾಡಿದರು.
ಸತ್ತ ರವಿಯ ಕೊರಳು ಮುಖದ ಭಾಗದ ಮೇಲೆ ಗಾಯದ ಕಲೆಗಳಾಗಿದ್ದವು ಮತ್ತು ಶವದ ಪಕ್ಕದಲ್ಲಿ ಮೂರು ಎಗ್ ರೈಸ್ ಪೊಟ್ಟಣಗಳು, ಮುರ್ನಾಲ್ಕು ಕುಡಿದ ಎಣ್ಣೆ ಕವರ್ಗಳು ಸ್ಥಳದಲ್ಲೇ ಪತ್ತೆಯಾಗಿದ್ದವು.
ಇದನ್ನೇಲ್ಲ ಕ್ರಿಮಿನಲ್ಲಾಗಿ ಗಮನಿಸಿದ
ವೈ.ಎನ್ ಹೊಸಕೋಟೆ ಸಬ್ ಇನ್ಸ್ಪೆಕ್ಟರ್ ರಾಮಯ್ಯ ಸಾಹೇಬ್ರು ಆಕಸ್ಮಿಕ ಸಾವಾಗಿದ್ರೆ ಮೂರು ಮೂರು ಪೊಟ್ಟಣಗಳಲ್ಲಿ ಆಹಾರ, ಎಣ್ಣೆ ಕವರ್ ಗಳೇಕೆ ಬಂದ್ವು ಅನ್ನುವ ಪ್ರಶ್ನೆಯೊಂದು ಕಾಡತೊಡಗಿತ್ತು ಆ ಕೂಡಲೇ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಇದು ಪಕ್ಕಾ ಪ್ಲಾನ್ಡ್ ಮರ್ಡರ್ ಅನ್ನೋದನ್ನ ಖಚಿತ ಪಡಿಸಿಕೊಂಡು ಸತ್ತ ರವಿಯ ಹಿನ್ನೆಲೆ ಕಲೆ ಹಾಕೊ ಕಾರ್ಯಕ್ಕೆ ಕೈ ಹಾಕಿದರು.
ಅಲ್ಲಿ ಪತ್ತೆಯಾಗಿದ್ದೆ ಇವನ್ನೊಬ್ಬ ಪ್ರಪೇಶಿನಲಿ ಕುಡುಕ, ಕೂಲಿ ಕೆಲಸಗಾರ, ಇವನಿಗೆ ಹೆಂಡತಿ ಮಗು ಇದೆ ಅಂತ.
Qಆಗಾದ್ರೆ ಈ ಘಟನೆ ನಡೆದ ದ್ದು ಹೇಗೆ ಎಂದು ಬೆನ್ನತ್ತಿದ ನಮ್ಮ ತಂಡಕ್ಕೆ ಸಿಕ್ಕ ಮಾಹಿತಿ
ಸತ್ತ ರವಿ ಮತ್ತು ಆತನ ಹೆಂಡತಿ ನಾಗಮಣಿ, ಮೀನು ಮಾರಾಟ ಮಾಡ್ಕೊಂಡು ಇಟ್ಟಿಗೆ ಹಾಕಿಸೋ ಕೆಲಸ ಮಾಡಿಕೊಂಡಿದ್ದ ನವೀನ್ ನ ಅಡ್ಡದಲ್ಲಿ ಕೂಲಿ ಕೆಲಸಕ್ಕೆಂದು ಹೋಗ್ತಿದ್ರು… ಈ ಒಂದು ಸಂಬಂಧ ಕೇವಲ ಕೆಲಸಕ್ಕೆ ಸೀಮಿತವಾಗಿದ್ರೆ ನೋ ಪ್ರಾಬ್ಲಂ..
ಆದರೆ ಅದು ಮನೆಯವರೆಗೂ ಬಂದು ಹಬ್ಬ ಹರಿದಿನ ಊಟ ತಿಂಡಿ ತೀರ್ಥ ಅಂತ ಬೆಳೆದಿತ್ತು.
ನವೀನ್ , ಸತ್ತ ರವಿಯ ಮನೆಗೆ ಬರೋದು ಹೋಗೋದು ಕಾಮನ್ ಆಗಿ ರವಿಯ ಪತ್ನಿ ನಾಗಮಣಿಯ ಮೇಲೆ ಮನಸ್ಸಾಗಿ ಅದು ಆಕೆಯನ್ನ ಪಡೆಯಲೇ ಬೇಕೆಂಬ ಹಠದ ಚಟಕ್ಕೆ ಬಿದ್ದಿದ್ದ…ಇದು ಕೆಲ ವರ್ಷಗಳು ಹಾಗೆಯೇ ಸಾಗುತ್ತಿತ್ತಂತೆ
ನವೀನ್ ನ ನಡವಳಿಕೆ ಹೆಂಡತಿಯೊಂದಿಗಿನ ಸಲುಗೆಯ ಮಾತುಗಳು ಸಾಕಷ್ಟು ಅನುಮಾನಕ್ಕೀಡು ಮಾಡಿ ಹೆಂಡತಿಯನ್ನ ದಂಡಿಸಿ, ನಿಯಂತ್ರಿಸುವಂತೆ ಮಾಡಿತ್ತು. ಇದು ಬಹುಶಃ ನವೀನ್ನ ಸ್ವಾತಂತ್ರ್ಯತೆಗೆ ಧಕ್ಕೆ ಬಂದಂತಾಗಿತ್ತು.
ಇವೆಲ್ಲ ಬೆಳವಣಿಗೆಗಳೇ ರವಿಯ ಜೀವಕ್ಕೆ ಮುಳುವಾಗಿದ್ದು..ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ…
ಬೆಳಿಗ್ಗೆಯಿಂದ ಸಂಜೆವರೆಗೂ ಕೆಲಸ ಮಾಡಿ ಬಂದ ಹಣದಲ್ಲಿ ಕಂಠ ಪೂರ್ತಿ ಕುಡಿದು ತೂಗುತ್ತಿದ್ದ ರವಿಯ ವೀಕ್ನೇಸ್ಸೆ ಎಣ್ಣೆ ಅಂತ ತಿಳಿದ ನವೀನ…
ರವಿ ಹೆಂಡತಿಯ ಮೋಹಕ್ಕೆ ಬಿದ್ದು ರಾತ್ರಿಯಿಡಿ ನಿದ್ದೆಗೆಡುತ್ತಿದ್ದ ಆಗಾಗಿ ಹೇಗಾದ್ರು ಮಾಡಿ ರವಿಯನ್ನ ಕೊಲೆ ಮಾಡಿ ಅವನ ಹೆಂಡತಿಯನ್ನ ಧಕ್ಕಿಸಿಕೊಳ್ಳಲೇ ಬೇಕು ಅಂತ ಸ್ಕೆಚ್ ಹಾಕ್ಕೊಂಡು ತನ್ನ ಅಸಲಿ ಮುಖವನ್ನ ಅನಾವರಣ ಮಾಡ್ದ.
ಕೊಲೆಯ ಸ್ಕೆಚ್ನ ಸಾಥ್ಗೆಂದು ಮಧುಗಿರಿ ಬಡವನಹಳ್ಳಿಯಿಂದ ಸಂಬಂಧಿ ಮಂಜುನಾಥ್ ನ್ನು ಹಿಂದಿನ ದಿನವೇ ಸ್ವಲ್ಪ ವ್ಯವಹಾರ ಮಾತನಾಡ್ಬೇಕು ಬಾ ಅಂತ ಬರಮಾಡಿಕೊಳ್ಳುತ್ತಾನೆ,ಇನ್ನು ಸಹಕೆಲಸಗಾರ ಚಂಟಿ ನೀನು ಕೆಲಸಕ್ಕೆ ಹೋಗ್ಬೇಡ ಆ ಕೂಲಿ ನಾನೇ ನೀಡ್ತೇನೆ ಎಂದೇಳಿ ಈ ತ್ರಿಮೂರ್ತಿಗಳು ಒಟ್ಟಾಗಿ ಸೇರಿ ರವಿಯ ಉಸಿರು ನಿಲ್ಲಿಸೊ ಮರ್ಮಗೇಡಿ ಕಾರ್ಯದ ಸಿದ್ಧತೆಯನ್ನ ಸೆಪ್ಟೆಂಬರ್ ವೀಕೆಂಡಲ್ಲಿ ಮಾಡಿಕೊಳ್ತಾರೆ..
ಅಂದು ಸೆಪ್ಟೆಂಬರ್ 30 ರವಿ ಹೊಲದಲ್ಲಿನ ಟಮೋಟ ಬೆಳೆಗೆ ಜೌಷಧಿ ತರಲೆಂದು ವೈ.ಎನ್ ಹೊಸಕೋಟೆಗೆ ತೆರಳಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಎಣ್ಣೆಯ ನಶೆಯಲ್ಲಿಯೇ ತೇಲುತ್ತಿರುತ್ತಾನೆ…….
ಮೊದಲೇ ಪ್ಲಾನ್ ಮಾಡಿ ಸ್ಕೆಚ್ ಹಾಕಿಕೊಂಡು
ರವಿ ಸಿಕ್ಕುವಿಕೆಯ ಒಂಟಿ ಸಮಯಕ್ಕೆ ಕಾದು ಕೂತಿದ್ದ ನವೀನ್, ಮಂಜ, ಚಂಟಿ .ಈ ಮೂವರು.ಅವನ ಖಲಾಸ್ ಮಾಡಲು ವೆಯ್ಟ್ ಮಾಡ್ತಿರ್ತಾರೆ…
ನವೀನ್ ರವಿಗೆ ಕಾಲ್ ಮಾಡಿ ಎಲ್ಲಿದ್ದೀಯ ಅನ್ನೊ ಮಾಹಿತಿ ಪಡೆದು… ಬರಬೇಕಾದ್ರೆ ಒಂದಷ್ಟು ಕುಡಿಯಲು ಎಣ್ಣೆ ತಿನ್ನಲು ಎಗ್ ರೈಸ್ ತರಲೆಂದು ಹಣ ಕೊಟ್ಟು ಕಳಿಸ್ತಾರೆ….ಆನಂತರ ಎಲ್ಲರೂ ಸೇರಿ ವೈ.ಎನ್ ಹೊಸಕೋಟೆಯಿಂದ ಬಂದ ರವಿಯ ಜೊತೆಗೂಡಿ ಗೌಡತಿಮ್ಮನಹಳ್ಳಿಯಿಂದ ಒಂದು ಕಿಮೀ ಆಂಧ್ರದ ಗಡಿ ಭಾಗದ ನಡುವಿನ ಹೊರವಲಯದಲ್ಲಿ ಝುಳು ಝುಳು ಹರಿಯೋ ನೀರು ಅಲ್ಲೇ ದೊಡ್ಡ ಮರದ ಪೊದೆ ಅದರ ಆಸರೆಯಲ್ಲಿಯೇ ಗುಂಡಿನ ಪಾರ್ಟಿ ಮಾಡಲು ಕೂರ್ತಾರೆ.
ಈ ಮೊದಲೇ ನಶೆಯಲ್ಲಿದ್ದ ರವಿಗೆ ಮತ್ತಷ್ಟು ಕುಡಿಸೋ ಸನ್ನೆಗಳನ್ನ ಮೂವರು ಮಾಡಿ ಕಂಠ ಮಟ್ಟ ಕುಡಿಸ್ತಾರೆ….
ಪಕ್ಕಾ ಪ್ಲಾನ್ ಮಾಡ್ಕೊಂಡಿದ್ದ ತ್ರಿಮೂರ್ತಿಗಳು ಒಂದೊಂದೆ ಕೊಲೆ ಸಂಚಿನ ಅಸ್ತ್ರಗಳನ್ನು ಯೂಸ್ ಮಾಡಲು ಮುಂದಾದ್ರು….ಸತ್ತ ರವಿಗೆ ಇದ್ಯಾವುದರ ಅರಿವೇ ಇಲ್ಲದೇ ಹೋಗಿತ್ತು.
ಎದುರಲ್ಲಿ ಕೂತಿದ್ದ ಬಡವನಹಳ್ಳಿಯ ಮಂಜ ರವಿಯ ಮುಖದಲ್ಲಿ ಬೆವೆತ ನೀರನ್ನು ಒರೆಸಿಕೊಳ್ಳುವಂತೆ ಟವೆಲ್ ಅವನ ಹೆಗಲ ಮೇಲೆ ಹಾಕಿ…ಅವನು ಸಿಗರೇಟ್ ಸೇದೊ ನೆಪ ಮಾಡಿ ರವಿಯ ಹಿಂಬದಿ ನಿಲ್ತಾನೆ…ನಿಂತು ನಿಂತು ಟವೆಲ್ ನಿಂದ ಆತನ ಕೊರಳಿಗೆ ಸುತ್ತಿ ಉಸಿರು ಗಟ್ಟಸೊ ತಂತ್ರ ಮಾಡಿದ್ರೆ..ನವೀನ ರವಿಯ ಮೂಗು ಬಾಯಿ ಮುಚ್ತಾನೆ , ಇನ್ನುಚಂಟಿ ಅನ್ನುವ ನವೀನ ನ ಸಹಕೆಲಸಗಾರ ಕಾಲನ್ನಿಡಿದು ಕೊನೆಗೂ ಉಸಿರು ನಿಲ್ಲಿಸೋ ಸಾಹಸ ಮಾಡಿ ಅಲ್ಲಿಂದ ಮೂವರು ಎಸ್ಕೇಪ್ ಆಗ್ತಾರೆ….
ಇದೆಲ್ಲ ಘಟನೆ ನಡೆದ ದ್ದು ಜಸ್ಟ್ ಎರಡ್ಮೂರು ಗಂಟೆಗಳಲ್ಲೇ…ಆದ್ರು ವೈ.ಎನ್ ಹೊಸಕೋಟೆ ಹೋಬಳಿ ಮತ್ತು ಆಂಧ್ರದ ಗಡಿ ಭಾಗದಲ್ಲಿ ಭಾರಿ ಆತಂಕ ಸೃಷ್ಟಿ ಮಾಡಿತ್ತು.
ಈ ಕೊಲೆಯ ಕೇಸಿನ ಕ್ಲೂ ಹಿಡಿದು ಹೊರಟ ಅನುಭವಿ ಸಬ್ ಇನ್ಸ್ಪೆಕ್ಟರ್ ರಾಮಯ್ಯ ಸಾಹೇಬ್ರು ಕ್ರಿಮಿನಲ್ಲುಗಳ ಪತ್ತೆಗೆ ಕ್ರಿಮಿನಲ್ ಸ್ಕೆಚ್ ಹಾಕಿ ಕೊಲೆಯಾಗಿದ್ದ ರವಿಯ ಒಡನಾಟವಿದ್ದವರ ಪತ್ತೆಗಿಳಿದ್ರು.
ಆಗ ಅವರಿಗೊಳೆಯೋದೆ ರವಿ ಸತ್ತ ದಿನದ ಪೋನ್ ಕಾಲ್ ರೆಕಾರ್ಡ್ ಲಿಸ್ಟ್ ತೆಗೆದುಕೊಳ್ಳೋದು.
ಇದಕ್ಕೆ ಸೋಮಶೇಖರ್, ಕೇಶವರಾಜು, ಶಿವರಾಜು, ಶೌಕತ್ ,ಎ.ಎಸ್.ಐ ಹನುಮಾನಾಯ್ಕ ಸೇರಿದಂತೆ ಹತ್ಯೆ ಗೈದವರ ಪತ್ತೆಕಾರ್ಯಕ್ಕೆ ನಿಂತು ಕ್ರಿಮಿನಲ್ಗಳ ಸುಳಿವು ಕ್ಯಾಚ್ ಮಾಡಿದ್ರು….
.ಆತನೊಂದಿಗೆ ಸಂಬಂಧಗಳ ವಿವರಗಳು ಮತ್ತು ಹೆಚ್ಚು ಒಡನಾಟವಿದ್ದದವರ ಸಂಪೂರ್ಣ ಇನ್ಪರ್ಮ್ಮೇಷನ್ ಎಲ್ಲಾವನ್ನು ಎಳೆ ಎಳೆಯಾಗಿ ಸಂಗ್ರಹಿಸಿದ್ರು…
ಪಾರ್ಟಿ ವೇಳೆ ಸಿಕ್ಕಿದ್ದ ಆಹಾರ ಮದ್ಯದ ಪಾಕೇಟ್ಗಳು ಮೂರು ಮೂರು ಇದ್ದ ದ್ದನ್ನ ಗಮನಿಸಿದ್ದ ರಾಮಯ್ಯ ಸಾಹೇಬ್ರಿಗೆ ಕಾಲ್ ಲಿಸ್ಟ್ ನಲ್ಲಿದ್ದ ನವೀನ್ ನಂಬರ್ ಎಲ್ಲಾವನ್ನು ತಾಳೆ ಹಾಕಿ ನೋಡ್ತಾರೆ
ಅಲ್ಲಿ ನವೀನ್ ನಿಗೂ ಮತ್ತು ಕೊಲೆಗೂ ಏನೋ ನಂಟಿದೆ
ಅನ್ನೋ ಅನುಮಾನ ಮತ್ತಷ್ಟು ರೈಸ್ ಆಯ್ತು
ಪಕ್ಕಾ ನವೀನ್ ಮಾಡಿರುವ ಘನಕಾರ್ಯವೇ ಅಂತ ಖಚಿತಪಡಿಸಿ ಇನ್ಸ್ಪೆಕ್ಟರ್ ವೆಂಕಟೇಶ್ ರ ಗಮನಕ್ಕೆ ತಂದು
ಬೆನ್ನತ್ತಿ ಸಾಗಿದ ಪೋಲಿಸರಿಗೆ ಆಂಧ್ರ ಪ್ರದೇಶದ ಕಂಬದೂರಿನ ಲ್ಲಿದ್ದ ಮನೆಗೆ ರಾತ್ರಿ ಮಾತ್ರ ಬಂದು ಸೇರುತ್ತಿದ್ದ ನವೀನ , ನನಗೂ ಕೊಲೆಗೂ ಸಂಬಂಧವಿಲ್ಲ ಬೇಕಾದ್ರೆ ಎಲ್ಲಿಗೆ ಬೇಕಾದ್ರೂ ಹೋಗ್ತೇನೆ ಎಂಬಂತೆ ಗ್ರಾಮದಲ್ಲಿ ಸಭ್ಯಸ್ಥನಂತಿದ್ದ ಆತನ ನ್ನು ಕೊನೆಗೂ ವೈ.ಎನ್ ಹೊಸಕೋಟೆ ಪೋಲೀಸರು ಲಾಕ್ ಮಾಡಿಕೊಂಡು
ಠಾಣೆಗೆ ಎಳೆದೋಯ್ದರು.
ಮೊದ ಮೊದಲು ಕಾಗೆ ಹಾರಿಸೋ ಕಥೆಗಳನ್ನು ಪುಂಕಾನು ಪುಂಕವಾಗಿ ಪುಂಗುತ್ತಿದ್ದ ನವೀನನಿಗೆ ಯಾವಾಗ ಪೊಲೀಸ್ ಲಾಠಿ ಬಿಸಿ ಕೊಟ್ರೊ ಕೂಡಲೇ ಸಾರಸಗಟಾಗಿ ನಡೆದದ್ದೇಲ್ಲಾ ಹೋಲ್ ಸೇಲ್ ರೂಪದಲ್ಲಿ ಪೋಲಿಸರ ಮುಂದೆ ಬಿಚ್ಚಿಟ್ಟ….
.ಇನ್ನುಳಿದ ಮದುಗಿರಿ ಬಡವನಹಳ್ಳಿ ಮಂಜ, ಚಿಂಟು ನನ್ನು ಹಿಡಿದು ತಂದು ನಾಲ್ಕು ನಾಲ್ಕು ತೀಡಿದ್ರು…
ಅಲ್ಲಿಗೆ… ಈ ಕೇಸಿಗೊಂದು ಪುಲ್ ಸ್ಟಾಪ್ ಇಟ್ಟಂತಾಗಿ ಜನರು ಭಯದಿಂದ ಮುಕ್ತಿ ಗೊಳ್ಳುವಂತೆ ಮಾಡಿದ ವೈ ಎನ್ ಹೊಸಕೋಟೆ ಪೊಲೀಸರು ಹತ್ಯೇಗೈದವರ ಪತ್ತೆಕಾರ್ಯ ವರ್ಕೌಟಾಗಿ ನವೀನ, ಮಂಜ, ಚಂಟಿ ಈ ಮೂವರನ್ನ ಜೈಲಿಗೆ ಹಟ್ಟಿದ್ದು ಸಾರ್ವಜನಿಕರು ನಿಟ್ಟುಸಿರು ಬಿಟ್ಟು . ಪೋಲಿಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವರದಿ
ನವೀನ್ ಕಿಲಾರ್ಲಹಳ್ಳಿ