ಹನುಮಂತಪುರ ಗ್ರಾಮದಲ್ಲಿ ಮಳೆ ನೀರಿಗೆ ಕೊಚ್ಚಿ ಹೋದ ದ್ಯಾವಪ್ಪಬಿನ್ ನರಸಿಂಹಯ್ಯ ಕುಟುಂಬಕ್ಕೆ ಪರಿಹಾರ ಸಹಾಯಧನ ಮಾಡುತ್ತಿರುವ ವಿಧಾನಪರಿಷತ್ ಸದಸ್ಯರಾದ ಆ ರಾಜೇಂದ್ರ ರವರು…….
ಮಧುಗಿರಿ ತಾಲೂಕು ಮಿಡಿಗೇಶಿ ಹೋಬಳಿ ಹನುಮಂತಪುರ ಗ್ರಾಮದಲ್ಲಿ ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದ ಹಳ್ಳದಲ್ಲಿ ಕೊಚ್ಚಿ ಹೋದ ದ್ಯಾವಪ್ಪ ಬಿನ್ ನರಸಿಂಹಯ್ಯ ಅವರ ಮನೆಗೆ ಭೇಟಿ ನೀಡಿ ಅವರ ಸಂಬಂಧಿಗಳಿಗೆ ಆತ್ಮಸ್ಥೈರ್ಯ ತುಂಬಿ ನಿಮಗೆ ಮುಂದಿನ ದಿನಗಳಲ್ಲಿ ಒಳ್ಳೆಯದಾಗುತ್ತದೆ ನೀವು ಯಾವುದೇ ಕಾರಣಕ್ಕೂ ಹಿಂಜರಿಯಬೇಡಿ ಹೆದರಬೇಡಿ ನಿಮಗೆ ದೇವರು ಒಳ್ಳೆಯದನ್ನು ಮಾಡಲಿ ಆ ಭಗವಂತ ನಿಮ್ಮ ಕುಟುಂಬಕ್ಕೆ ಆ ದುಃಖ ಬರಿಸುವ ಶಕ್ತಿ ನೀಡಲಿ ಎಂದು ಹೇಳಿದರು.
ಮಳೆ ಸುರಿದು ನೀರಿನ ರಭಸಕ್ಕೆಸೇತುವೆ ಸಂಪರ್ಕ ಕೊಚ್ಚಿಕೊಂಡು ಹೋಗಿ ಸಂಚಾರಕ್ಕೆ ಅಡ್ಡಿ ಉಂಟಾದಾಗ ಲಕ್ಲೇಟಿ ಗ್ರಾಮಸ್ಥರುಮಧುಗಿರಿಯ ಪಾವಗಡ ಮುಖ್ಯ ರಸ್ತೆಯಲ್ಲಿ ಪ್ರತಿಭಟನೆ ನಡೆಸಿರುವ ವಿಚಾರವನ್ನು ತಿಳಿದು ಲಕ್ಲೇಟಿ ಗ್ರಾಮಕ್ಕೂ ಸಹ ಭೇಟಿ ನೀಡಿ ಸಂಪರ್ಕ ಸೇತುವೆ ಹತ್ತಿರ ವೀಕ್ಷಣೆ ಮಾಡಿ ಸಂಬಂಧಪಟ್ಟ ಅಧಿಕಾರಿಗಳೇ ಈ ಕೂಡಲೇ ಈ ಸೇತುವೆಯ ದುರಸ್ತಿ ಕಾರ್ಯವನ್ನು ಆದಷ್ಟು ಬೇಗನೆ ಮಾಡಿಕೊಡುವಂತೆ ಸೂಚಿಸುತ್ತೇನೆ ನಿಮಗೆ ಸುಗಮ ಸಂಚಾರ ಮಾಡಲು ಅನುಕೂಲ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದರುವಿಧಾನ ಪರಿಷತ್ ಸದಸ್ಯರಾದ ಆರ್ ರಾಜೇಂದ್ರ ರವರು ತಿಳಿಸಿದರು.
ಮಳೆಯಲ್ಲಿ ಕೊಚ್ಚಿ ಹೋದಂತಹ ನೊಂದ ಕುಟುಂಬಕ್ಕೆ ಈ ದಿನ ಭೇಟಿ ನೀಡಿ ಅವರಿಗೆ ಪರಿಹಾರದ ಧನ ಸಹಾಯವನ್ನು ಮಾಡಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ಸಿನ ಅಧ್ಯಕ್ಷರಾದ ಎಂ ಎಸ್ ಮಲ್ಲಿಕಾರ್ಜುನಯ್ಯ. ಡಿಸಿಸಿ ಬ್ಯಾಂಕಿನ ಜಿಲ್ಲಾ ನಿರ್ದೇಶಕರಾದ ಬಿಎನ್ ನಾಗೇಶ್ ಬಾಬು. ಮಾಜಿ ಎಪಿಎಂಸಿ ಅಧ್ಯಕ್ಷರಾದ ಡಿ. ಶ್ರೀನಿವಾಸ್ ಎಸ್ ಎನ್ ರಾಜು .ಗುತ್ತಿಗೆದಾರದ ವೆಂಕಟ ಕೃಷ್ಣ ವಿನಪರೆಡ್ಡಿ. ಹನುಮಂತರ ರೆಡ್ಡಿಮಿಡಿಗೇಶಿ ಗ್ರಾಮ ಪಂಚಾಯತಿ ಸದಸ್ಯರಾದ ರಾಜು ಗೋಪಾಲ್ ಹಾಗೂಆ ಭಾಗದ ಎಲ್ಲಾ ಮುಖಂಡರು ಹನುಮಂತಪುರ ಲಕ್ಲೇಟಿ ಗ್ರಾಮಗಳ ಗ್ರಾಮಸ್ಥರು ಸಹ ಹಾಜರಿದ್ದರು
ವರದಿ. ಲಕ್ಷ್ಮಿಪತಿ ದೊಡ್ಡ ಎಲ್ಕೂರು