ಪಾವಗಡ: ಮಾದಿಗ ಸಮುದಾಯ ಕ್ಕೆ ಒಳ ಮೀಸಲಾತಿ ನೀಡಲು ಆಗ್ರಹ…!

DISTRICT NEWS ತುಮಕೂರು

ಪಾವಗಡ:  ಮಾದಿಗ ಸಮಾಜದಲ್ಲಿ ಒಳ ಮೀಸಲಾತಿ ಕಲ್ಪಿಸಬೇಕೆಂದು ಒತ್ತಾಯಿಸಿ ಪಾವಗಡ ತಾಲ್ಲೂಕಿನ ಮಾದಿಗ ಸಮಾಜದವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಇಂದು ಪತ್ರಿಕಾಗೋಷ್ಠಿಯನ್ನ ನಡೆಸಿದರು.

ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನ ಉದ್ದೇಶಿಸಿ ಮಾತನಾಡಿದ ಮಾದಿಗ ಸಮಾಜದ ಮುಖಂಡ ಕೋಟ್ ನರಸಪ್ಪ ಬಹುಸಂಖ್ಯಾತ ಮಾದಿಗ ಸಮಾಜದವರು ತುಳಿತಕ್ಕೆ ಒಳಗಾದ ಸಮಾಜವಾಗಿದೆ. ಆಗಾಗಿ ಸರ್ಕಾರದಿಂದ ಸಿಗುವ ಸವಲತ್ತುಗಳಿಗಾಗಿ ಒಳ ಮೀಸಲಾತಿ ವ್ಯವಸ್ಥೆ ಕಲ್ಪಿಸಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಪಡಿಸಿದರು.

ಇದೇ ಸಂದರ್ಭದಲ್ಲಿ ಮುಖಂಡ ವಳ್ಳೂರು ನಾಗೇಶ್ ಮಾತನಾಡಿ ಅಸ್ಪೃಶ್ಯ ಮಾದಿಗ ಸಮಾಜ ಶೈಕ್ಷಣಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಹಿಂದುಳಿದಿದೆ. ಇದನ್ನ ಮನಗಂಡ ಪಂಚಪೀಠ ಸರ್ವೊಚ್ಚ ನ್ಯಾಯಾಲಯ ಆಯಾಯ ರಾಜ್ಯ ಸರ್ಕಾರಗಳಿಗೆ ಬಹುಸಂಖ್ಯಾ ಮಾದಿಗ ಸಮಾಜದ ವಸ್ತು ವಾಸ್ತವ ಸ್ಥಿತಿ ಅವಲೋಕಿಸಿ ಒಳ ಮೀಸಲಾತಿ ಕಲ್ಪಿಸಿ ಎಂಬ ಆದೇಶ ಹೊರಡಿಸಿದೆ. ಕೂಡಲೇ ರಾಜ್ಯ ಸರ್ಕಾರ ಎಚ್ಚೆತ್ತು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಒತ್ತಾಯಪಡಿಸಿದರು.
ಮುಖಂಡ ಎಸ್ ಹನುಮಂತರಾಯಪ್ಪ, ಶಿವಕುಮಾರ್ ಸಾಕೇಲ್ ಇನ್ನಿತರರು ಮಾತನಾಡಿದರು.
ಈ ಸಂದರ್ಭದಲ್ಲಿ ಎಂ ಕೆ ನಾರಾಯಣಪ್ಪ, ಕೊತ್ತೂರು ಜಯರಾಮ್ ,ವೆಂಕಟರಮಣ, ತಮಟೆ ಸುಬ್ಬರಾಯಪ್ಪ, ವಕೀಲ ನರಸಿಂಹಪ್ಪ, ಅರವಿಂದ್, ನಲಿಗಾನಹಳ್ಳಿ ಮಂಜು,ಬ್ಯಾಡನೂರು ಉಗ್ರಪ್ಪ, ನರಸಿಂಹಪ್ಪ, ಶಿವಕುಮಾರ್ ಸೇರಿದಂತೆ ಹಲವರಿದ್ದರು.

ವರದಿ: ನವೀನ್ ಕಿಲಾರ್ಲಹಳ್ಳಿ