ಮಕ್ಕಳ ಕಲಿಕೆ ಗೆ ಬಂದಿದೆ ʻ ವಿಸ್ತಾಸ್ ಆ್ಯಪ್ ʼ
ಬೆಂಗಳೂರು :- ಶಾಲಾ ಕಾಲೇಜು ಮಕ್ಕಳ ಕಲಿಕೆಯ ಅನುಕೂಲಕ್ಕಾಗಿ ವಿಸ್ತಾಸ್ ಲರ್ನಿಂಗ್ ಆ್ಯಪ್’ ನ್ನು ನಟಿ ಭಾರತಿ ವಿಷ್ಣುವರ್ಧನ್ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು.
ಆ್ಯಪ್ ಬಿಡುಗಡೆ ಮಾಡಿದ ನಂತರ ಮಾತನಾಡಿದ ನಟಿ ಭಾರತಿ ವಿಷ್ಣುವರ್ಧನ್ ಹಿಂದೆ ಶಿಕ್ಷಣ ಪಡೆಯುವುದು ಕಷ್ಟವಾಗಿತ್ತು. ಈಗ ಕಾಲ ಬದಲಾಗಿದೆ.ತಂತ್ರಜ್ಞಾನದ ಮೂಲಕ ಸುಲಭವಾಗಿ ಶಿಕ್ಷಣವನ್ನು ಕಲಿಯಲು ಇದು ಸಹಕಾರಿಯಾಗಲಿದೆ ಎಂದರು. ಈ ಆ್ಯಪ್ ನನ್ನನ್ನು ಆರ್ಕರ್ಷಿಸಿತ್ತು.ವಿ ಅಕ್ಷರ ಅದರಲ್ಲಿ ತುಂಬಾ ಅರ್ಥಗಳಿವೆ. ನಟ ವಿಷ್ಣುವರ್ಧನ್ ಅವರಿಗೂ ಶಿಕ್ಷಣದ ಬಗ್ಗೆ ತುಂಬಾ ಕಾಳಜಿ ಇತ್ತು. ಶಿಕ್ಷಣದ ವಿಷಯದಲ್ಲಿ ಬಹಳಷ್ಟು ಮಕ್ಕಳಿಗೆ ಸಹಾಯ ಮಾಡಿದ್ದರು. ನನಗೆ ಈ ಆ್ಯಪ್ ಬಗ್ಗೆ ಹಲವಾರು ಪ್ರಶ್ನೆಗಳು ಇದ್ದವು ಅದಕೆಲ್ಲ ಉತ್ತರಿಸಿದ್ದಾರೆ ಎಂದರು ಆ್ಯಪ್ ನ ರಾಯಭಾರಿಗಳು ಆದ ನಟಿ ಭಾರತಿ ವಿಷ್ಣುವರ್ಧನ್.
ಚಿಕ್ಕಮಂಗಳೂರು ಮೂಲದ ಅರ್ಜುನ್ ಸಾಮ್ರಾಟ್ ಮತ್ತು ಕುಮಾರಿ ವಿಷ್ಣುಪ್ರಿಯಾ ಅವರ ನೇತೃತ್ವದಲ್ಲಿ 2018 ವಿಸ್ತಾಸ್ ಲರ್ನಿಂಗನ್ನು ಸ್ಥಾಪಿಸಿದರು. ಪ್ರಾಯೋಗಿಕವಾಗಿ ಇಲ್ಲಿಯವರೆಗು 1800 ಮಕ್ಕಳು ಇದರ ಉಪಯೋಗ ಪಡೆದುಕೊಂಡಿದ್ದು. ಒಳ್ಳೆಯ ಪ್ರತಿಕ್ರಿಯೆ ಸಕ್ಕಿದೆಯಂತೆ.
ಸಂಸ್ಥಾಪಕರಾದ ಅರ್ಜುನ್ ಮಾತನಾಡಿ ಇದೊಂದು ಆನ್ ಲೈನ್ ವೇದಿಕೆಯಾಗಿದ್ದು. ಸಮಾಜದ ಎಲ್ಲಾ ವರ್ಗಗಳ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ತಲುಪಿಸುವ ಉದ್ದೇಶದೊಂದಿಗೆ ಆಪ್ ನ್ನು ಅಭಿವೃದ್ಧಿ ಪಡಿಸಲಾಗಿದೆ. ಇದ ರ ಬೆಲೆ ವರ್ಷ ಕ್ಕೆ 999 ಕ್ಕೆ ನೀಡುತ್ತಿದ್ದೇವೆ.
ಕನ್ನಡ , ತಮಿಳು ಮಲೆಯಾಳಂ ಪಠ್ಯಕ್ರಮ ಜೊತೆಗೆ ಇಂಗ್ಲಿಷ್ ಮತ್ತು ಸಿ ಬಿ ಎಸ್ ಸಿ ಪಠ್ಯ ಕ್ರಮಗಳ ಒಂದ ರಿಂದ ಹನ್ನೆರಡನೆ ತರಗತಿಯ ವರೆಗಿನ ಮಕ್ಕಳ ತರಗತಿಗಳಿಗೆ ಅನುಗುಣ ವಾಗಿ ಆಪ್ ರೂಪಿಸಲಾಗಿದೆ. ರೆಕಾರ್ಡ್ ವಿಡಿಯೋ,ಅಮಿಮೇಷನ್ ವಿಡಿಯೋ ಮೂಲಕ ತರಬೇತಿ ನೀಡಲಾಗುವುದು, ಮುಂಬರುವ ದಿನಗಳಲ್ಲಿ ಕೋಚಿಂಗ್ ಸೆಂಟರ್ ಗಳನ್ನು ಆರಂಭಿಸುನ ಪ್ಲಾನ್ ಇದೆ ಎನ್ನುತ್ತಾರೆ ಅರ್ಜುನ್ ಸಾಮ್ರಾಟ್.
ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಆಪ್ ಗಳನ್ನು ಪಡೆಯಲು ದುಬಾರಿ ಬೆಲೆ ತೆರಬೇಕಿದೆ. ವಿಸ್ತಾಸ್ ಆಪ್ ನ ಬೆಲೆ ವರ್ಷಕ್ಕೆ 999 ಇದ್ದು ಮುಂದಿನ ದಿನಗಳಲ್ಲಿ ಹೆಚ್ಚು-ಹೆಚ್ಚು ಮಕ್ಕಳು ಚಂದಾದಾರರಾದರೆ ಬೆಲೆ ಮತ್ತಷ್ಟು ಕಡಿಮೆ ಮಾಡಿ ಹೆಚ್ಚು ಬಡ- ಮದ್ಯಮ ವರ್ಗ ದ ಮಕ್ಕಳಿಗೆ ತಲಪುವಂತಾಗಬೇಕೆನ್ನುವ ಗುರಿಯನ್ನು ಕಂಪನಿ ಹೊಂದಿದೆ. ಮತ್ತು ಯಾವುದೇ ಕಾರಣಕ್ಕೂ ವಾರ್ಷಿಕ ಚಂದಾ ಹಣ ಹೆಚ್ಚಿಸುವುದಿಲ್ಲ ಎನ್ನುವ ಭರವಸೆ ನೀಡಿದೆ.ಹಾಗೂ ಕಡಿಮೆ ಬೆಲೆ ಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂಬ ಆಶಯ ಕಂಪನಿಯದ್ದು.
ಕಾರ್ಯಕ್ರಮದಲ್ಲಿ ಉದ್ಯಮಿ ಭಾರ್ಗವಿ ಗೋಪಿನಾಥ್, ಗಣಿತಶಾಸ್ರಜ್ಞರಾದ ಸಿ ಎಸ್ ಅರವಿಂದ, ಮಹೇಶ್ ಗ್ರೂಪ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಜೈನ್ ಭಾಗವಹಿಸಿದ್ದರು