ಮಧುಗಿರಿ ಗಡಿಭಾಗದ ಸರ್ಕಾರಿ ಶಾಲೆಯ ದು ಸ್ಥಿತಿ ಬಗ್ಗೆಶಿಕ್ಷಣ ಇಲಾಖೆ ಅಧಿಕಾರಿಗಳು ಗಮನಹರಿಸುವರೆ..
. ಮಧುಗಿರಿ ತಾಲೂಕಿನ ಗಡಿಭಾಗದಲ್ಲಿರುವ ಕೂನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಕೊಠಡಿಗಳು ಕಳೆದ ಮೂರು ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಗೆ ಸೋರಿಕೆಯಾಗುತ್ತಿದ್ದು ದೈನಂದಿನ ಶಾಲಾ ತರಗತಿಗಳನ್ನು ನಡೆಸಲು ತುಂಬಾ ಕ್ಲಿಷ್ಟಕರವಾಗಿದೆ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಶಾಲಾ ಮೇಲ್ ಉಸ್ತುವಾರಿ ಸಮಿತಿಯ ಅಧ್ಯಕ್ಷರಾದ ಕಾಂತರಾಜು ಗ್ರಾಮ ಪಂಚಾಯತಿ ಅಧ್ಯಕ್ಷಣಿಯಾದ ಜ್ಯೋತಿರವರನ್ನು ಶೀಘ್ರವಾಗಿ ದುರಸ್ತಿ ಕಾರ್ಯ ಮಾಡಿಸಿ ಕೊಡಬೇಕೆಂದು ವಿನಂತಿಸಿದರು
ಗ್ರಾಮ ಪಂಚಾಯಿತಿ ಅಧ್ಯಕ್ಷರು ಸಹ ಈ ಒಂದು ಮನವಿಗೆ ಶೀಘ್ರವಾಗಿ ಸ್ಪಂದಿಸುತ್ತೇನೆ ಎಂದು ಭರವಸೆಯನ್ನು ನೀಡಿದರು. ಸ್ಥಳದಲ್ಲೇ ಇದ್ದಂತಹ ಪೋಷಕರಾದ ಸೌಮ್ಯ ಮಾತನಾಡಿ ಶಾಲೆಯು ಮೂಲಭೂತ ಸೌಕರ್ಯಗಳಲ್ಲಿ ಪೋಷಕರ ಪಾತ್ರ ಹೆಚ್ಚಾಗಿದೆ ಆದರೆ ಸರ್ಕಾರದ ಪಾತ್ರ ಮತ್ತು ಸಂಬಂಧಪಟ್ಟ ಇಲಾಖೆಯ ಪಾತ್ರ ಕುಂಠಿತಗೊಂಡಿರುವುದು ತುಂಬಾ ಬೇಸರ ವಾಗುತ್ತಿದೆ
ಶಾಲೆಯಲ್ಲಿ ಈಗಾಗಲೇ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರುಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಶಿಕ್ಷೆಕೆರೆ ಆಗಿರುವುದರಿಂದ ಏನೇ ಸರ್ಕಾರದ ಅನುದಾನಗಳನ್ನಾಗಲಿ ಈ ಶಾಲೆಯ ಮೂಲಭೂತ ಸೌಕರ್ಯಗಳ ಬಗ್ಗೆ ಆಗಲಿ ಧ್ವನಿಯೆತ್ತಲು ಆಗುತ್ತಿಲ್ಲ ಈ ಶಾಲೆಗೆ ಪುರುಷ ಶಿಕ್ಷಕರನ್ನು ಅಥವಾ ದೈಹಿಕ ಶಿಕ್ಷಕರನ್ನು ನೇಮಿಸಿ ಕೊಡಬೇಕೆಂದು ಒತ್ತಾಯ ಮಾಡಿದರು
ಈ ಸಂದರ್ಭದಲ್ಲಿ ಇದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ 7ನೇ ತರಗತಿ ವಿದ್ಯಾರ್ಥಿನಿಯಾದ ಮೇಘನಾ ರವರು ಈ ಶಾಲೆಯ ಬಗ್ಗೆ ಮುಖ್ಯ ಶಿಕ್ಷಕರು ಕೊಠಡಿಗಳುಸೇರಿದಂತೆ ಎಲ್ಲಾ ಕೊಠಡಿಗಳು ಮಳೆ ಬಂದಾಗ ಸೋರುತ್ತಿರುವುದು ಶೋಚನೀಯ ಸಂಗತಿಯಾಗಿದೆ ನಾವುಗಳು ದೈನಂದಿನ ತರಗತಿಗಳಲ್ಲಿ ಪಾಠ ಪ್ರವಚನ ಕೇಳಲು ತುಂಬಾ ತೊಂದರೆ ಆಗುತ್ತಿದೆ ಆದ್ದರಿಂದ ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಯಾವುದಾದರೂ ಒಂದು ಅನುದಾನದಲ್ಲಿಅತಿ ತುರ್ತಾಗಿ ಅನುದಾನವನ್ನು ಬಿಡುಗಡೆ ಮಾಡಿಸಿ ಸೋರುತ್ತಿರುವ ಕೊಠಡಿಗಳನ್ನು ದುರಸ್ತಿ ಮಾಡಿಸಿ ನಮಗೆ ವಿದ್ಯಾಭ್ಯಾಸ ಮಾಡಲು ಅನುವು ಮಾಡಿಕೊಡಬೇಕೆಂದು ಮನವಿ ಮಾಡಿದರು.
ಊರಿನ ಗ್ರಾಮಸ್ಥರು ಪೋಷಕರಾದ ರಾಜಣ್ಣನವರು ಈ ಶಾಲೆಯು ಕೊಠಡಿಗಳು ತುಂಬಾ ಹಾಳಾಗಿದ್ದು ಮುಖ್ಯ ಶಿಕ್ಷಕರ ಕೊಠಡಿಯು ಹಂಚುಗಳಿಂದ ಕೂಡಿದ್ದು ಮಳೆ ಬಂದರೆ ನೀರೆಲ್ಲಾ ಕೊಠಡಿಗಳಲ್ಲಿ ತುಂಬಿರುತ್ತದೆ ಆದ್ದರಿಂದ ಈ ಕೂಡಲೇ ಈ ತಾಲೂಕಿನ ಜನಪ್ರತಿನಿಧಿಗಳು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕೂಡಲೇ ನಮ್ಮ ಶಾಲೆಗೆ ಭೇಟಿ ನೀಡಿ ಅತಿ ತುರ್ತಾಗಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮಾಡಲು ಕುಳಿತುಕೊಳ್ಳಲು ಆಗದೇ ಇರುವುದನ್ನು ಅರಿತು ಈ ತಕ್ಷಣದಿಂದಈ ಶಾಲೆಗೆ ಗ್ರಾಮ ಪಂಚಾಯಿತಿಯಿಂದಾಗಲಿ ತಾಲೂಕು ಪಂಚಾಯತಿಯಿಂದಾಗಲಿ ಶಾಸಕರ ಅನುದಾನದಲ್ಲಾಗಲಿ ಇಲ್ಲ ಶಿಕ್ಷಣ ಇಲಾಖೆಯ ಅನುದಾನದಲ್ಲಾಗಲಿ, ಕೊಠಡಿಗಳನ್ನು ದುರಸ್ತಿ ಮಾಡಿಸಿ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ಅನುಕೂಲ ಮಾಡಿಕೊಡಬೇಕು ಎಂದು ತಿಳಿಸಿದರುಇಲ್ಲವಾದಲ್ಲಿ ಊರಿನ ಗ್ರಾಮಸ್ಥರೆಲ್ಲರೂ ಸೇರಿ ನಾವು ಈ ವಿಚಾರವಾಗಿ ಸಂಬಂಧಪಟ್ಟ ಅಧಿಕಾರಿಗಳ ಕಚೇರಿಗಳ ಮುಂದೆ ಧರಣಿ ನಡೆಸಲಾಗುವುದೆಂದು ಎಚ್ಚರಿಕೆ ನೀಡಿರುತ್ತಾರೆ
ಇದುವರೆಗೂ ಇಂತಹ ಘಟನೆಯ ಬಗ್ಗೆ ಸಿ ಆರ್ ಪಿ ಆಗಲಿ ಇಸಿಓ ಆಗಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಲಿ ಶಾಲೆಗೆ ಭೇಟಿ ನೀಡಿದೆ ಇರುವುದುಘೊರ ದುರಂತ ಆದ್ದರಿಂದ ಈ ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಇಡೀ ತಾಲೂಕಿನಲ್ಲಿ ಯಾವುದೇ ಶಾಲೆಯ ಕೊಠಡಿಗಳು ಸೋರುತ್ತಿದರೆ ವಿದ್ಯಾರ್ಥಿಗಳಿಗೆ ಅನಾನುಕೂಲವಾಗುತ್ತಿದ್ದರೆ ಆದಷ್ಟು ಬೇಗನೆ ಪರಿಹಾರ ಕಂಡುಕೊಂಡು ವಿದ್ಯಾರ್ಥಿ ಗಳಿಗೆ ಯಾವುದೇ ಅಡ್ಡಿಆತಂಕವಿಲ್ಲದೆ ವಿದ್ಯಾಭ್ಯಾಸ ಮಾಡಲು ಅನುಕೂಲ ಮಾಡಿಕೊಡುವವರೇ ಕಾದು ನೋಡಬೇಕಾಗಿದೆ. ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲಿ ಸರ್ಕಾರಿ ಶಾಲೆಯ ದುಸ್ಥಿತಿ ಇದಾಗಿದೆ.
ವರದಿ ಲಕ್ಷ್ಮಿಪತಿ ದೊಡ್ಡ ಎಲ್ಕೂರು