ಅಕ್ರಮ ನೇಮಕಾತಿ ರದ್ದು ಪಡಿಸದಿದ್ದರೆ ಪಿಡಿಒ ಅವರನ್ನು ಅವಮಾನತ್ತು ಮಾಡಿ ಎಂದು ಹೇಳಿದ ಮುಖ್ಯ ಕಾರ್ಯನಿರ್ವಹಣಾಧಿಕಾರಿ……
ಮಧುಗಿರಿ. ಪಟ್ಟಣದ ಸಾಮರ್ಥ್ಯ ಸೌಧದಲ್ಲಿ ದಿನಾಂಕ 20.12.2022ರಂದು ತುಮಕೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಡಾ. ವಿದ್ಯಾಕುಮಾರಿ ನೇತೃತ್ವದಲ್ಲಿ ಸಾರ್ವಜನಿಕ ಕುಂಬಿ ಕೊರತೆಗಳ ಸಭೆ ನಡೆಸಲಾಯಿತು.
ಸಭೆಯಲ್ಲಿ ತಾಲೂಕಿನ ಗ್ರಾಮ ಪಂಚಾಯಿತಿಗಳ ಪಿಡಿಒಗಳ ಮೇಲೆ ಸರಣಿ ಸಮಸ್ಯೆಗಳು ಸಾರ್ವಜನಿಕರು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಮನವಿ ಸಲ್ಲಿಸಿದಾಗ ತಕ್ಷಣ ಆ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಪಿಡಿಒಗಳನ್ನು ಕರೆಯಿಸಿ ಸ್ಥಳದಲ್ಲಿಯೇ ಕೆಲವು ಸಮಸ್ಯೆಗಳನ್ನು ಬಗೆಹರಿಸಿದರು ಮತ್ತೆ ಕೆಲವುಗಳನ್ನು ಸ್ಥಳಕ್ಕೆ ಭೇಟಿ ನೀಡಿ ದಾಖಲಾತಿಗಳನ್ನು ಪರಿಶೀಲಿಸಿ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳನ್ನು ಜೊತೆಗೂಡಿ ಸಾರ್ವಜನಿಕರು ನೀಡಿರುವ ದೂರುಗಳ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ತಿಳಿಸಿದರು.
ಪುರವರ ಹೋಬಳಿ ಕೊಡ್ಲಾಪುರ ಗ್ರಾಮ ಪಂಚಾಯತಿಯ ಪಿಡಿಓ ನಾಗಮಣಿ ರವರು ಸಾಮಾನ್ಯ ಸಭೆಯನ್ನು ಕರೆಯದೆ ಸಂಬಂಧಪಟ್ಟ ಹುದ್ದೆಯ ಬಗ್ಗೆ ಸಮಿತಿಯಲ್ಲಿ ಚರ್ಚೆ ಮಾಡದೆ ನೋಟಿಸ್ ಬೋರ್ಡಿನಲ್ಲಿ ಹುದ್ದೆಯ ನೇಮಕಾತಿ ಬಗ್ಗೆ ಪ್ರಚಾರ ಪಡಿಸದೆ ಏಕಏಕಿ ಪಿಡಿ ಓ ಹಾಗೂ ಅಧ್ಯಕ್ಷರು ಕಂಪ್ಯೂಟರ್ ಆಪರೇಟರ್ ಆಯ್ಕೆ ಮಾಡಿಕೊಂಡು ಎಂಟು ತಿಂಗಳ ಕೆಲಸ ಮಾಡಿಸಿಕೊಂಡು ಸಂಬಳ ನೀಡಿದ್ದಾರೆ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಗಮನಕ್ಕೆ ತಂದಾಗ ಅವರು ಪಿಡಿಓ ಅವರನ್ನು ಕರೆಸಿ ಯಾಕೆ ನೀವು ಅಕ್ರಮವಾಗಿ ಕಂಪ್ಯೂಟರ್ ಆಪರೇಟರ್ ಹುದ್ದೆ ಆಯ್ಕೆಯನ್ನು ಅಕ್ರಮವಾಗಿ ನೇಮಕಾತಿ ಮಾಡಿದ್ದೀರಾ ಕಾನೂನು ಅರಿವಿರುವುದಿಲ್ಲವೇ ನಿಯಮಬಾಹಿರವಾಗಿ ಏಕೆ ಮಾಡುತ್ತೀರಾ ಇದನ್ನು ರದ್ದುಪಡಿಸದಿದ್ದರೆ ತಮ್ಮ ಮೇಲೆ ಸೂಕ್ತ ಕ್ರಮ ಜರುಗಿಸಿ ಅವಮಾನತ್ತು ಮಾಡಲು ಉಪ ಕಾರ್ಯದರ್ಶಿ ರವರಿಗೆ ಸೂಚನೆ ನೀಡಿ ಹಾಗೂ ಪಿಡಿಒ ವಾದ ನಾಗಮಣಿಯವರಿಗೂ ಸಹ ಈ ತಕ್ಷಣವೇ ನೀವು ಅಕ್ರಮ ನೇಮಕಾತಿಯನ್ನು ರದ್ದುಪಡಿಸಿ ತಾಲೂಕು ಪಂಚಾಯಿತಿಗೆ ವರದಿ ನೀಡಿ ಹಾಗೂ ತಮಗೂ ಸಹ ವರದಿಯನ್ನು ನೀಡಬೇಕೆಂದು ಖಡಕ್ ಸೂಚನೆ ನೀಡಿದರು.
ಸಭೆಯಲ್ಲಿ ತಾಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಪಿಡಿಓ ರವರ ಆಗಲಿ ಕಾರ್ಯದರ್ಶಿಯವರಾಗಲಿ, ಬಿಲ್ ಕಲೆಕ್ಟರ್ ರವರ ಆಗಲಿ, ಸಮಯಕ್ಕೆ ಸರಿಯಾಗಿ ಹಾಜರಾಗುವುದಿಲ್ಲ ಮತ್ತು ಸಾರ್ವಜನಿಕರಿಗೆ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಹೇಳಿದಾಗ ಎಲ್ಲಾ ಪಿಡಿಒಗಳು ಸರ್ಕಾರ ತಮಗೆ ನೀಡಿರುವ ಸರ್ಕಾರದ ಸಿಮ್ ಅನ್ನು ಯಾವಾಗಲೂ ಕೂಡ ತಮ್ಮ ಹತ್ತಿರವೇ ಇರಬೇಕು ಯಾವುದೇ ಕಾರಣಕ್ಕೂ ಸ್ವಿಚ್ ಆಫ್ ಮಾಡಬಾರದು ಸಾರ್ವಜನಿಕರ ಸಮಸ್ಯೆಗಳಿಗೆ ನೀವು ಸ್ಪಂದಿಸಬೇಕು ನಿಮಗೆ ನೀನಿರತಕ್ಕಂತ ಸರ್ಕಾರದ ಬಳಕೆಯಲ್ಲಿರಬೇಕು ಎಂದರು.
ಮುಂದುವರಿಸಿ ಮಾತನಾಡುತ್ತಾ ದೊಡ್ಡ ಯ ಲ್ಕೂರು ಗ್ರಾಮ ಪಂಚಾಯಿತಿಯ ಪಿ ಡಿ ಓ ರವರು ನಿವೃತ್ತಿ ಹೊಂದಿ ಒಂದು ವರ್ಷ ಕಳೆದರೂ ಸಹ ಸರ್ಕಾರ ನೀಡಿರುವ ಸಿಮ್ಮನ್ನು ಕಾರ್ಯನಿರ್ವಹಣಾಧಿಕಾರಿಗಳಿಗೆ ವಾಪಸ್ಸು ಮಾಡಿರುವುದಿಲ್ಲ ಮತ್ತು ಸಾರ್ವಜನಿಕರು ಕರೆ ಮಾಡಿದರೆ ನಿವೃತ್ತಿ ಹೊಂದಿರುವ ರವರೇ ಮಾತನಾಡುತ್ತಾರೆ ಎಂದು ಗಮನಕ್ಕೆ ತಂದಾಗ ದೊಡ್ಡ ಯ ಪಿಡಿಒ ರಂಗನಾಥ್ ರವರನ್ನು ಕರೆಸಿ ನೀವು ಯಾಕೆ ಇದುವರೆಗೂ ಸಿಮ್ ತೆಗೆದುಕೊಂಡಿಲ್ಲ ಅವರ ಮೇಲೆ ದೂರು ದಾಖಲು ಮಾಡಿಲ್ಲ ಎಂದು ಸಿಇಒ ಕೇಳಿದಾಗ ಇಲ್ಲ ಮೇಡಂ ನಮ್ಮ ಹತ್ತಿರ ಇದೆ ಸಿಮ್ ಎಂದು ಹೇಳಿದಾಗ ಉಪಕಾರದರ್ಶಿಯಾದ ಅತಿಕ್ ಭಾಷಾ ರವರು ಕರೆ ಮಾಡಿದಾಗ ಕರೆಯೋ ಗ್ರಾಮ ಪಂಚಾಯತಿ ಕಾರ್ಯದರ್ಶಿಯವರ ಹತ್ತಿರ ಇರುವುದು ತಿಳಿದು ಬಂದಾಗ ಎಲ್ಲರೂ ಕೂಡ ಸ್ವಲ್ಪ ಹೊತ್ತು ಗಲಿಬಿಲಿಕೊಂಡರು. ಇದೇನಪ್ಪ ಒಂದೇ ನಂಬರ್ ಇಬ್ಬರ ಕಡೆ ಇದೆ ಎಂದು ತಿಳಿದಾಗ ಕೂಡಲೇ ನೀವುಗಳು ಬಿಎಸ್ಎನ್ಎಲ್ ಆಫೀಸಿಗೆ ದೂರ ದಾಖಲಿಸಿ ಮ್ ನಂಬರ್ ರದ್ದು ಪಡಿಸಬೇಕೆಂದು ಸೂಚನೆ ನೀಡಿದರು.
ಬೇಡತ್ತೂರ್ ಗ್ರಾಮ ಪಂಚಾಯಿತಿಯಲ್ಲಿ ಇತ್ತೀಚೆಗೆ ನಡೆದ ಜಿಲ್ಲಾಧಿಕಾರಿಗಳ ನಡೆಯ ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ಕೆಲವು ಕೆಲಸಗಳನ್ನು ಮಾಡಲಾಗಿತ್ತು ಮೌಖಿಕವಾಗಿ ಹೇಳಿದ್ದರಿಂದ ನಾವು ಕೆಲಸ ಮಾಡಿದ್ದೇವೆ ಎಂದು ಪಿಡಿಒ ಅಂಬಿಕಾ ರವರ ಮೇಲೆ ಸಿಇಒ ಗಮನಕ್ಕೆ ತಂದಾಗ ಕೂಡಲೇ ಪಿಡಿಓ ರವರನ್ನು ಕರೆಸಿ ಯಾಕೆ ನೀವು ಇಂಥ ಕಾರ್ಯಕ್ರಮಗಳಿಗೆ ಖರ್ಚು ಮಾಡಿರುವ ಹಣವನ್ನು ಕೊಡಲು ತಮ್ಮ ಪಂಚಾಯತಿಯಲ್ಲಿ ಹಣದ ಕೊರತೆ ಇದೆಯೇ ಯಾಕೆ ನೀವು ಅವರಿಗೆ ಬಿಲ್ ಮಾಡಿಕೊಡುತ್ತಿಲ್ಲ ಎಂದು ಕೇಳಿದಾಗ ಇಲ್ಲ ಮೇಡಂ 16,000 ಬಿಲ್ ತಂದಿದ್ದಾರೆ ಅಷ್ಟು ಬಿಲ್ ಮಾಡಲಾಗುವುದಿಲ್ಲ ಎಂದು ಹೇಳಿದಾಗ ಕೂಡಲೇ ಗರಂ ಆದ ಸಿ.ಇ .ಓ. 15ನೇ ಹಣಕಾಸು ಯೋಜನೆ ಅಡಿಯಲ್ಲಿ ತಾವು ಆದಷ್ಟು ಬೇಗನೆ ಮಾಡಿಕೊಡಬೇಕೆಂದು ಖಡಕ್ ಸೂಚನೆ ಮಾಡಿದರು.
ಮಧುಗಿರಿ ತಾಲೂಕಿನ ಸರ್ಕಾರಿ ಶಾಲೆಗಳು ಹಾಗೂ ಖಾಸಗಿ ಶಾಲೆಗಳು ಯಾವಾವ ಶಾಲೆಗಳು ಈಗಾಗಲೇ ಈ. ಸ್ವತ್ತು ಆಗಿರುವುದಿಲ್ಲ ರಿಜಿಸ್ಟ್ರೇಷನ್ ಮಾಡಿರುವುದಿಲ್ಲ ಕೂಡಲೇ ಈ ಸ್ವತ್ತು ಮತ್ತು ರಿಜಿಸ್ಟ್ರೇಷನ್ ಆಗಬೇಕು ಈಗಾಗಲೇ 164 ಶಾಲೆಗಳು ಈ ಸ್ವತ್ತುವಾಗಿರುವುದಿಲ್ಲ ಮತ್ತು ರಿಜಿಸ್ಟ್ರೇಷನ್ ಆಗಿರುವುದಿಲ್ಲ ಕೂಡಲೇ ಪಿಡಿಒಗಳು ಆ ಸಂಬಂಧಪಟ್ಟ ಶಾಲೆಗಳಿಗೆ ಭೇಟಿ ನೀಡಿ ಈ ಸ್ವತ್ತುಗಳನ್ನು ಮಾಡಿಸಬೇಕು ನಾವು ಈಗಾಗಲೇ ಶಾಲೆ ಖಾತೆ ಆಂದೋಲನ ಮಾಡಿದ್ದೇವೆ 58 ಶಾಲೆಗಳು ರಿಜಿಸ್ಟ್ರೇಷನ್ ಹಾಗೂ ಈ ಸ್ವತ್ತುಗಳು ಆಗಿವೆ. ಉಳಿಕೆ ಬಾಕಿ ಇರುವ ಶಾಲೆಗಳನ್ನು ಆದಷ್ಟು ಬೇಗನೆ ಈ ಸ್ವತ್ತು ಮಾಡಲು ತಾವುಗಳು ಮುಂದಾಗಬೇಕೆಂದು ಪಿಡಿಒಗಳಿಗೆ ಸಭೆಯಲ್ಲಿ ಕರೆಕೊಟ್ಟರು.
ಈ ಹಿಂದೆ ಇದ್ದಂತಹ ಸ್ತ್ರೀ ಶಕ್ತಿ ಸಹಾಯ ಸಂಘಗಳ ಹೆಸರು ಸರ್ಕಾರ ಬದಲಾವಣೆ ಮಾಡಿ ಸ್ವಾಮಿ ವಿವೇಕಾನಂದರ ಯುವಕರ ಸಂಘ ಎಂದು ನಾಮಕರಣ ಮಾಡಿದೆ ಅದನ್ನು ಕೂಡಲೇ ತಾವುಗಳು ಮಾಡಿಸಬೇಕು ಮತ್ತು ಪ್ರತಿ ಸಂಘಕ್ಕೆ ಸರ್ಕಾರದಿಂದ ಒಂದು ಲಕ್ಷ ಸಹಾಯಧನ ಹಾಗೂ ನಾಲ್ಕು ಲಕ್ಷ ಬ್ಯಾಂಕಿನ ಮುಖಾಂತರ ನೀಡಲಾಗುವುದು ಇದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ತಾವುಗಳೆಲ್ಲರೂ ಶ್ರಮವಹಿಸಬೇಕೆಂದು ಸೂಚಿಸಿದರು.
ಸಭೆಯಲ್ಲಿ ತುಮಕೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಡಾ. ಕೆ ವಿದ್ಯಾ ಕುಮಾರಿ ರವರು ಉಪ ಕಾರ್ಯದರ್ಶಿಗಳಾದ ಅತಿಕ್ ಭಾಷಾ ರವರು ಮುಖ್ಯ ಯೋಜನಾಧಿಕಾರಿಗಳಾದ ನರಸಿಯಪ್ಪನವರು ಮಧುಗಿರಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಾದ ಬಿ ಎಸ್ ಲಕ್ಷ್ಮಣ್ ರವರು ಹಾಗೂ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿ ಪಿಡಿಒ ಗಳು ಸಂಬಂಧಪಟ್ಟ ಅಧಿಕಾರಿಗಳು ಸಾರ್ವಜನಿಕರು ಸಭೆಯಲ್ಲಿ ಭಾಗವಹಿಸಿದ್ದರು.
ವರದಿ. ಲಕ್ಷ್ಮಿಪತಿ ದೊಡ್ಡ ಯಲ್ಕೂರು