27 pvgd photo 02

ತುಮಕೂರು ವಿಧಾನಪರಿಷತ್ ಚುನಾವಣೆ: ಕಾಂಗ್ರೆಸ್ ನ್ನು ಪಕ್ಷಾತೀತವಾಗಿ ಬೆಂಬಲಿಸಿ….!

DISTRICT NEWS ತುಮಕೂರು

ಪಾವಗಡ : ಬಿಟ್ ಕಾಯಿನದ ದಂದೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸೇರಿದಂತೆ ಆನೇಕ ಸಚಿವರ ಶಾಸಕರು ಹೆಸರು ಕೂಡ ಕೇಳಿ ಬಂದಿದೆ ಸಮಗ್ರ ತನಿಖೆ ಮಾಡಿ ಎಂದರೆ ಕಾಂಗ್ರೇಸ್‍ನವರು ಇದ್ದಾರೆ ಎನ್ನುವ ಇವರು ಹೆಸರು ಮಾತ್ರ ಹೇಳುತ್ತಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಬಿಜೆಪಿ ಸರಕಾರದ ವಿರುದ್ದ ವಾಗ್ದಾಳಿ ನಡೆಸಿದರು.

ಪಾವಗಡ ಪಟ್ಟಣದ ಎಸ್‍ಎಸ್‍ಕೆ ಬಯಲು ರಂಗಮಂದಿರದಲ್ಲಿ ಶನಿವಾರ ಜಿಲ್ಲಾ ಕಾಂಗ್ರೇಸ್ ಸಮಿತಿ ವತಿಯಿಂದ ಅಮ್ಮಿಕೊಂಡಿದ್ದಾ ವಿಧಾನ ಪರಿಷತ್ ಮತಯಾಚನೆ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿದ ಅವರು,

ಬಿಜೆಪಿಯ ಮೇಜಾರಿಟಿ ಮೇಲ್ಮನೆಯಲ್ಲಿ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಕಾಂಗ್ರೇಸ್ ಪಕ್ಷಕ್ಕೆ 20 ಕ್ಕೂ ವಿಧಾನ ಪರಿಷತ್ ಸದಸ್ಯರನ್ನ ರಾಜ್ಯದ ಮತದಾರರು ಕಾಂಗ್ರೇಸ್ ಪಕ್ಷದ ಮುಖಂಡರು ಗೆಲ್ಲಿಸಿಕೊಡಬೇಕೆಂದು ಕರೆ ನೀಡಿದರು.

ರಾಜಣ್ಣ ಮತ್ತು ರಾಜೇಂದ್ರ ಜಿಲ್ಲೆಗೆ ಚಿರಪರಿಚಿತರೇ ಆದಾ ಕಾರಣ ಅವರ ಗೆಲುವು ನಿಚ್ಚತಿತವಾಗಿದೆ ಎಂದಾ ಅವರು 1989ರಲ್ಲಿ ರಾಜ್ಯ ವಿಧಾನ ಸಭೆಗೆ ಮೋದಲ ಭಾರಿಗೆ ಶಾಸಕ ವೆಂಕಟರಮಣಪ್ಪ ಆಯ್ಕೆಯಾಗಿ ಅಂದಿನ ಮುಖ್ಯಮಂತ್ರಿ ವಿರೇಂದ್ರ ಪಾಟೀಲರನ್ನ ತಾಲೂಕಿಗೆ ಕರೆತಂದು ಅಂದಿನಿಂದ ಇಂದಿನವರೆಗೂ ಗಡಿ ಪ್ರದೇಶ ಅಭಿವೃದ್ದಿಗೆ ನಿರಂತರವಾಗಿ ಶ್ರಮಿಸಿದ್ದಾರೆಂದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ವೇಳೆ ವಿಶ್ವಕ್ಕೆ ಬೃಹತ್ ಶಕ್ತಿಸೌಧ ನೀಡಿದ ಕೀರ್ತಿ ಕಾಂಗ್ರೇಸ್ ಪಕ್ಷಕ್ಕೆ ಸಲುತ್ತದೆ, ಬಿಜೆಪಿ ಆವದಿಯಲ್ಲಿ ಇಂತಹ ಅಭಿವೃದ್ದಿ ನಡೆದಿದ್ದರೆ ತೋರಿಸಿ ಎಂದು ಸವಾಲೇಸೆದಾ ಅವರು, ಮನಮೋಹನ್ ಸಿಂಗ್ ಪ್ರಧಾನಿಯಾದ ವೇಳೆ ಈ ದೇಶದ ಜನತೆಗೆ ನೀಡಿದ್ದಾ ನರೇಗ ಯೋಜನೆ ಬಿಜೆಪಿ ಆವದಿಯಲ್ಲಿ ಸೊರಗಿ ಹಣವಿಲ್ಲದೆ ಕೂಲಿ ಕಾರ್ಮಿಕರು ಪರಿತಪಿಸುವಂತಾಗಿದೆ ಎಂದಾ ಅವರು, ರಾಜ್ಯದ ರೈತರ ಸಾಲಮನ್ನ ಮಾಡಿದ ವೇಳೆ ನಾನು ಕೂಡ ಉಪಮುಖ್ಯಮಂತ್ರಿ ಎಂಬುದನ್ನ ಕುಮಾರ ಸ್ವಾಮಿ ಮರೆತಿದ್ದಾರೆ, ಕುಮಾರ ಸ್ವಾಮಿ ಒಬ್ಬರೆ ಮಾಡಿದ ಸಾಲಮನ್ನಾವಲ್ಲ ಕಾಂಗ್ರೇಸ್ ಪಕ್ಷ ಕೈಜೋಡಿಸಿ ಮಾಡಿಸಿದ ಸಾಲಮನ್ನ ಎಂಬುದು ಮರೆಯಭಾರದೆಂದರು.

ಶಾಸಕರಾದ ವೆಂಕಟರಮಣಪ್ಪ ಮಾತನಾಡಿ ಜಿಲ್ಲೆಯಲ್ಲಿ ಕಾಂಗ್ರೇಸ್ ಪಕ್ಷ ಸದೃಡವಾಗಿದ್ದು ಈ ಭಾರಿ ರಾಜೇಂದ್ರ ಗೆಲುವನ್ನ ಯಾರಿಂದಲೂ ಕೂಡ ತಡೆಯಲು ಸಾಧ್ಯವಿಲ್ಲ ಎಂದಾ ಅವರು, ಬಿಜೆಪಿಯ ರಾಜೇಶ್‍ಗೌಡ ಸ್ಥಳೀಯರಲ್ಲ ಎಲ್ಲರಿಗೂ ತಿಳಿದ ವಿಷಯವೇ, ಜೆಡಿಎಸ್ ಅಭ್ಯರ್ಥಿ ಅನಿಲ್‍ಕುಮಾರ್ ಜಿಲ್ಲೆಯವರೆ ಆದರೂ ರಾಜಕೀಯದ ಅನುಭವವಿಲ್ಲ, ಜಿಲ್ಲೆಗೆ ಅನುಭವಿ ಸಮರ್ಥ ಅಭ್ಯರ್ಥಿ ರಾಜೇಂದ್ರ ಆಗಿರುವ ಕಾರಣ 400 ಕ್ಕೂ ಹೆಚ್ಚು ಪ್ರಥಮ ಪ್ರಾಶಶ್ಯದ ಮತಗಳನ್ನ ನೀಡಿ ಅವರ ಗೆಲುವಿಗೆ ಶ್ರಮಿಸಬೇಕೆಂದರು.

ಮಾಜಿ ಶಾಸಕರಾದ ರಾಜಣ್ಣ ಮಾತನಾಡಿ ತುಮಕೂರು ಜಿಲ್ಲೆಯೇ ಕಾಂಗ್ರೇಸ್‍ನ ಭದ್ರಕೋಟೆಯಾಗಿದ್ದು ಜನತೆಗೆ ಸುಳ್ಳು ಭರವಸೆಗಳನ್ನ ನೀಡಿ ಮತ ಪಡೆಯುವವರು ನಾವಲ್ಲ, ಸಾಲಮನ್ನ ಯೋಜನೆ ಜಾರಿಗೆ ತಂದಿದ್ದು ಮೋದಲು ಸಿದ್ದರಾಮಯ್ಯ, ನಂತರ ಕುಮಾರ ಸ್ವಾಮಿ ಯಾವುದೇ ಸರಕಾರ ಬಂದರು ಕೂಡ ನಡೆಯುವ ಪ್ರಕ್ರೀಯೇ ಇದು,

ಈ ಭಾರಿಯೂ ಕಾಂಗ್ರೇಸ್ ಪಕ್ಷಕ್ಕೆ ಮಾತ್ರ ಪಕ್ಷತೀತವಾಗಿ ಮತ ಬರಲಿದೆ ಹಾಗೆಯೇ ಪಾವಗಡಲ್ಲಿ ಕೂಡ ಹೆಚ್ಚು ಮತಗಳು ಬರಲಿವೆ ಎಂದಾ ಅವರು ಈ ಭಾರಿಯ ತುಮಕೂರು ಜಿಲ್ಲೆಯ ವಿಪ ಅಭ್ಯರ್ಥಿ ರಾಜೇಂದ್ರ ಕಾಂಗ್ರೇಸ್ ಪಕ್ಷದ ಮುಖಂಡರ ಕಾರ್ಯತರಿಂದ ಶ್ರಮದಿಂದ ಗೆಲ್ಲಲಿದ್ದು ಅದು ಪಕ್ಷದ ಕಾರ್ಯಕರ್ತರ ಮುಖಂಡರ ಗೆಲುವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಅಭ್ಯರ್ಥಿ ರಾಜೇಂದ್ರ, ಮಾಜಿ ಸಂಸದರಾದ ಬಿ.ಎನ್.ಚಂದ್ರಪ್ಪ, ಮುದ್ದೆಹನುಮೇಗೌಡ, ಟಿ.ಬಿ.ಜಯಚಂದ್ರ, ಗ್ರಾಮಾಂತರ ಬ್ಲಾಕ್ ಕಾಂಗ್ರೇಸ್ ಅದ್ಯಕ್ಷರಾದ ಹೆಚ್.ವಿ.ವೆಂಕಟೇಶ್ ಮಾತನಾಡಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಸೊಮ್ಲನಾಯ್ಕ್, ರಪೀಕ್ ಆಹಮ್ಮದ್, ಪುರಸಭೆ ಅದ್ಯಕ್ಷರಾದ ಗಂಗಮ್ಮ, ಉಪಾದ್ಯಕ್ಷರಾದ ಸುಧಾಲಕ್ಷ್ಮಿ ಪ್ರಮೋದ್ ಕುಮಾರ್,ಮಾಜಿ ಅದ್ಯಕ್ಷರಾದ ರಾಮಾಂಜಿನಪ್ಪ, ಪುರಸಭಾ ಸದಸ್ಯರಾದ ರಾಜೇಶ್,ಟೆಂಕಾಯಲ ರವಿ, ಸುದೇಶ್ ಬಾಬು ಸೇರಿದಂತೆ ಆನೇಕ ಕಾಂಗ್ರೇಸ್ ಪಕ್ಷದ ಮುಖಂಡರು, ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು.