ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಉಪ ನಿರ್ದೇಶಕರಾದ ಶ್ರೀ ರೇವಣ್ಣ ಸಿದ್ದಪ್ಪ ಅವರಿಗೆ ಮುಂಬಡ್ತಿ ನೀಡಿ ಸರ್ಕಾರ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಕಾರ್ಯದರ್ಶಿಯಾಗಿ ನೇಮಿಸದ ಹಿನ್ನೆಲೆಯಲ್ಲಿ ಅವರಿಗೆ ಆತ್ಮೀಯ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.
ರೇವಣ್ಣ ಸಿದ್ದಪ್ಪ ಅವರು ಮಾತನಾಡಿ ಈ ಜಿಲ್ಲೆಯ ಶಿಕ್ಷಕರು ಅತ್ಯಂತ ಕ್ರಿಯಾಶೀಲರು ಮತ್ತು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವವರಾಗಿದ್ದು, ಎಲ್ಲಾ ಅಧಿಕಾರಿಗಳು ಮತ್ತು ಶಿಕ್ಷಕರ ಪ್ರಯತ್ನದಿಂದ ಈ ಜಿಲ್ಲೆ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶದಲ್ಲಿ ಉತ್ತಮ ಸ್ಥಾನ ಪಡೆದಿರುತ್ತದೆ. ಈ ಜಿಲ್ಲೆಯ ಶಿಕ್ಷಕರ ಅಭಿಮಾನವನ್ನು ಮರೆಯಲು ಸಾಧ್ಯವಿಲ್ಲ. ನನಗೆ ಕೊಟ್ಟಂತಹ ಸಹಕಾರ ಹೀಗೆಯೇ ನೂತನ ಉಪನಿರ್ದೇಶಕರಾಗಿ ಆಗಮಿಸಿರುವ ಶ್ರೀ ಕೆ ಜಿ ರಂಗಯ್ಯ ಅವರಿಗೆ ನೀಡಿ ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ಶ್ರಮಿಸಲು ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲೆಗೆ ನೂತನ ಉಪನಿರ್ದೇಶಕರಾಗಿ ಆಗಮಿಸಿರುವ ಶ್ರೀ ಕೆ ಜಿ ರಂಗಯ್ಯ ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು.
ಡಿ ವೈ ಪಿಸಿಗಳಾದ ಪುಷ್ಪವಲ್ಲಿ ಮತ್ತು ನರೇಂದ್ರ ಕುಮಾರ್
ನಿವೃತ್ತ ಉಪ ನಿರ್ದೇಶಕರಾದ ರಮೇಶ್
ಶೈಕ್ಷಣಿಕ ಜಿಲ್ಲೆಯ ಬಿಇಓ ಗಳಾದ ಶಂಕರಯ್ಯಾ,ಅಶ್ವಥನಾರಾಯಣ್, ಸುಧಾಕರ್, ತಿಮ್ಮರಾಜುದೊಡ್ಡಬಳ್ಳಾಪುರ ಬಿಇಓ ರಂಗಪ್ಪ
ಡಯಟ್ ಪ್ರಾಂಶುಪಾಲರಾದ ವೈಎನ್ ರಾಮಕೃಷ್ಣಯ್ಯ
ಹಿರಿಯ ಉಪನ್ಯಾಸಕರಾದ ವೇದಮೂರ್ತಿ ಡಯಟ್ನ ಎಲ್ಲ ಉಪನ್ಯಾಸಕರು, ಜಿಲ್ಲಾ ನೌಕರರ ಸಂಘದ ಅಧ್ಯಕ್ಷರಾದ ವೆಂಕಟೇಶ್
ತಾಲ್ಲೂಕಿನ ವಿವಿಧ ಸಂಘಗಳ ಅಧ್ಯಕ್ಷರು ಮತ್ತು ಸದಸ್ಯರು ಪ್ರೌಢಶಾಲಾ ಶಿಕ್ಷಕರ ಸಂಘಗಳ ಅಧ್ಯಕ್ಷರು ಮತ್ತು ಸದಸ್ಯರು ಉಪನಿರ್ದೇಶಕರ ಕಚೇರಿಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಬಿಇಓ ಕಚೇರಿಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ
ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು ಮತ್ತು ಅಪಾರ ಅಭಿಮಾನಿಗಳು ಹಾಜರಿದ್ದರು.
ಕಾರ್ಯಕ್ರಮದಲ್ಲಿ ಶ್ರೀ ತಿಮ್ಮರಾಜು ಶಿಕ್ಷಣಾಧಿಕಾರಿಗಳು ಸ್ವಾಗತಿಸಿದರು ಮತ್ತು ವಿಷಯ ಪರಿವೀಕ್ಷಕರಾದ ಮೋಹನ್ ಕುಮಾರ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
ವರದಿ : ಲಕ್ಷೀಪತಿ
ಪ