ಮತದಾನದ ಹಕ್ಕು ಕೊಟ್ಟ ದಿನವೇ ನಮಗೆ ಸ್ವತಂತ್ರ ದೊರಕಿದ್ದು : ಪ್ರಸನ್ನಕುಮಾರ್
ಮಧುಗಿರಿ : ದೇಶದಲ್ಲಿ ಅಸ್ಪೃಶ್ಯರಿಗೆ ಮತದಾನದ ಹಕ್ಕನ್ನು ಕೊಟ್ಟ ಮೇಲೆಯೇ ನಮಗೆ ಬದುಕಿನಲ್ಲಿ ಭರವಸಯ ಬೆಳಕು ಕಂಡಿದ್ದು , ಇಂದೇ ನಮಗೆ ಸ್ವತಂತ್ರ ಬಂದ ದಿನವಾಗಿದೆ ಎಂದು ಡಾ.ಅಂಬೇಡ್ಕರ್ ಪೀಪಲ್ ಪಾರ್ಟಿಯ ರಾಜ್ಯ ಉಪಾಧ್ಯಕ್ಷ ಪ್ರಸನ್ನರುಮಾರ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು , ಅಂಬೇಡ್ಕರ್ ಅನುಭವಿಸಿದ ನೋವನ್ನು ಯಾರೂ ಕಾಣಲಾರರು . ಇಂತಹ ಮಹಾನೀಯನಿಂದಾಗಿ ದೇಶದ ಅಸಾಹಯಕರು ಮತದಾನದ ಹಕ್ಕನ್ನು ಪಡೆದ ಈ ದಿನವನ್ನು ದೇಶದ ನೈಜ ಸ್ವತಂತ್ರ ದಿನವಾಗಿ ಆಚರಿಸಲಾಗುತ್ತಿದೆ .
1932 ನೇ ಆಗಸ್ಟ್ 17 ರಂದು ಬ್ರಿಟಿಷರಿಂದ ಅನುಮತಿ ಪಡೆದು ಅಸ್ಪೃಶ್ಯ ನಮುದಾಯಕ್ಕೆ ಮತ ಹಾಕುವ ಹಕ್ಕನ್ನು ಪಡೆಯಲಾಯಿತು . ಈ ಹೋರಾಟ 1917 ರಿಂದ 1932 ರವರೆಗೂ ನಿರಂತರವಾಗಿ ನಡೆದಿದ್ದು ಇಂದೂ ನಾವೆಲ್ಲ ಮತ ಚಲಾಯಿಸುವ ತ್ತಿದ್ದೇವೆ ಎಂದರು .
ಈ ನಂದರ್ಭದಲ್ಲಿ ಜಿಲ್ಲಾಧ್ಯಕ್ಷ ಲಕ್ಷ್ಮೀ ನಾರಾಯಣ್ ತಾಲೂಕು ಅಧ್ಯಕ್ಷ ಲಕ್ಷ್ಮೀಷತಿ ಉಪಾಧ್ಯಕ್ಷ ಬಾಲಕೃಷ್ಣ ಮುಖಂಡರಾದ ಧೃವರುಮಾರ್ , ವಕೀಲ ಶಿವಕುಮಾರ್ , ಗೋವಿಂದರಾಜು , ಅರಳಾಪುರ ರಮೇಶ್, ಮಹಾಲಿಂಗಯ್ಯ , ಶಿವಲಿಂಗಪ್ಪ, ವೆಂಕಟರವಣಪ್ಪ, ರಾಮಚಂದ್ರಪ್ಪ ಅರಳಾಪುರ, ಜಿತೇಂದ್ರ, ಹಾಗೂ ಇತರರು ಇದ್ದರು .