ಕಾಡು ಗೊಲ್ಲರನ್ನು ಎಸ್.ಟಿ. ಗೆ ಸೇರಿಸು ವಂತೆ ಒತ್ತಾಯಿಸಿ ಪ್ರತಿಭಟನೆ.
ಪಾವಗಡ : ಕಾಡುಗೊಲ್ಲರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ. ಕಾಡುಗೊಲ್ಲರ ತಾಲ್ಲೂಕು ಘಟಕದಿಂದ ಸೋಮವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್ ವರದರಾಜು ರವರಿಗೆ ಮನವಿ ಪತ್ರ ಸಲ್ಲಿಸಿದರು.
ಕಾಡುಗೊಲ್ಲರಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಗುರುತಿಸಬೇಕು, ಕಾಡುಗೊಲ್ಲರಿಗೆ ಎಸ್ ಟಿ ಜಾತಿ ಪ್ರಮಾಣಪತ್ರವನ್ನು ನೀಡಬೇಕೆಂದು. ತಾಲ್ಲೂಕು ಕಾಡುಗೊಲ್ಲರ ಸಂಘದ ಅಧ್ಯಕ್ಷರಾದ ಎಸ್. ಬೋರಣ್ಣ ತಿಳಿಸಿದರು.
ಕಾಡುಗೊಲ್ಲರು ಅಧಿಮಾನವರಾಗಿದ್ದು, ಬುಡಕಟ್ಟು ಸಂಸ್ಕೃತಿ ಹೊಂದಿದ್ದು, ಕಾಡುಗೊಲ್ಲರು ಅರ್ಥಿಕವಾಗಿ, ಶೈಕ್ಷಣ ಕವಾಗಿ ಹಿಂದುಳಿದಿದ್ದಾರೆ, ಅಲ್ಲದೆ ಎಲ್ಲಾ ಸರ್ಕಾರಿ ಯೋಜನೆಗಳಿಂದ ವಂಚಿತರಾಗಿದ್ದಾರೆ, ಆದ್ದರಿಂದ ಎಸ್.ಟಿ. ಮೀಸಲಾತಿ ನೀಡಿದರೆ ಎಲ್ಲಾ ವಿಧದಲ್ಲೂ ಅಭಿವೃದ್ದಿಕಾಣಲು ಸಾದ್ಯವಾಗುತ್ತದೆ ಎಂದರು.
2018 ರಲ್ಲಿ ಕಾಡು ಗೊಲ್ಲ ಜಾತಿ ಪ್ರಮಾಣ ನೀಡಲು ಆದೇಶ ಹೊರಡಿಸಿದ್ದರೂ ಸಹ ನಾಡಕಛೇರಿಯಲ್ಲಿ ಇದುವರೆಗೂ ನೀಡುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ಕಾಡುಗೊಲ್ಲರ ಅಭಿವೃದ್ದಿ ನಿಗಮದ ಸೌಲಭ್ಯಗಳನ್ನು ಪಡೆಯಲು ಜಾತಿ ಪ್ರಮಾಣ ಪತ್ರ ಬೇಕಾಗಿದೆ, ಕೇಂದ್ರಸರ್ಕಾರದ ಓ.ಬಿ.ಸಿ. ಪಟ್ಟಿಯಲ್ಲಿ ಸೇರಿಸಬೇಕಾಗಿದೆ, ಸ್ಥಳೀಯ ಚುನಾವಣೆಯಲ್ಲಿ ಮೀಸಲಾತಿ ನೀಡುವ ಉದ್ದೇಶದಿಂದ ರಾಜ್ಯದ
40 ತಾಲ್ಲೂಕುಗಳಲ್ಲಿ ಹೋರಾಟ ಮಾಡುತ್ತಿದ್ದು, ಕಳೆದ ಬಿ.ಜೆ.ಪಿ. ಸರ್ಕಾರದ ಅವದಿಯಲ್ಲಿ ಸ್ಥಾಪಿಸಿದ್ದ ಕಾಡುಗೊಲ್ಲ ನಿಗಮಕ್ಕೆ ಅಧ್ಯಕ್ಷರ ನೇಮಕಮಾಡದೆ ಅನ್ಯಾಯವೆಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಜಿ.ಪಂ. ಸದಸ್ಯರು ಸಂಘದ ಕಾರ್ಯಾದ್ಯಕ್ಷರಾದ ಕೆ.ಎಸ್. ಪಾಪಣ್ಣ ಮಾತನಾಡಿ, 2018 ರ ನಂತರ ಕಾಡುಗೊಲ್ಲ ಮತ್ತು ಹಟ್ಟಿಗೊಲ್ಲರನ್ನು ಗೆಜೆಟ್ ನಲ್ಲಿ ಸೇರಿಸಿದ್ದು, ಕಾಡುಗೊಲ್ಲರಿಗೆ ಪ್ರತ್ಯೇಕವಾದ ಕಾಡುಗೊಲ್ಲರ ನಿಗಮವನ್ನು ಸ್ಥಾಪಿಸಬೇಕು, ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕಾಡುಗೊಲ್ಲರ ಸಂಘದ ಅಧ್ಯಕ್ಷರಾದ ಎಸ್. ಬೋರಣ್ಣ ಸಂಘದ ಗೌರವಾಧ್ಯಕ್ಷರಾದ ಸಣ್ಣಯ್ಯ,ಪ್ರಧಾನ ಕಾರ್ಯದರ್ಶಿ ಎಸ್.ಜೆ.ನಾಗರಾಜು, ಖಜಾಂಚಿ ಎಂ.ನಾಗಪ್ಪ, ನಾಗೇಂದ್ರಪ್ಪ, ರೊಪ್ಪ ಗ್ರಾ.ಪಂ. ಸದಸ್ಯ ಅನಿಲ್ ಕುಮಾರ್, ಶಿವಗಂಗಪ್ಪ, ಕೆ.ಟಿ.ಹಳ್ಳಿ,ಚಿಕ್ಕಣ್ಣ, ರಂಗಣ್ಣ, ಸೇರಿದಂತೆ ನೂರಾರು ಮುಖಂಡರುಗಳು ಹಾಜರಿದ್ದರು.
ವರದಿ. ಶ್ರೀನಿವಾಸಲು.ಎ