IMG 20211117 WA0050

ಪಾವಗಡ: ಮಳೆಯಿಂದ ಕೆಲವೆಡೆ ಬೆಳೆ ಹಾನಿ….!

DISTRICT NEWS ತುಮಕೂರು

ಪಾವಗಡ: ತಾಲ್ಲೂಕಿನಾದ್ಯಂತ ಮಂಗಳವಾರ ರಾತ್ರಿ ಬಿದ್ದ ಮಳೆಯಿಂದ ಕೆಲವೆಡೆ ಬೆಳೆ ಹಾನಿಯಾಗಿದೆ.
ತಾಲ್ಲೂಕಿನ ಸುಂಕಾರ್ಲಕುಂಟೆ ಪದ್ಮಾವತಿ ಎಂಬುವರ 3 ಎಕರೆ ಜಮೀನಿನಲ್ಲಿ ಬೆಳೆಯಲಾದ ಮೆಕ್ಕೆ ಜೋಳ ಬೆಳೆ ಸಂಪೂರ್ಣ ನೆಲ ಕಚ್ಚಿದೆ. ಸುಮಾರು 2 ಲಕ್ಷ ರೂ ನಷ್ಟವಾಗಿರುವುದಾಗಿ ಅಂದಾಜಿಸಲಾಗಿದೆ.
ಗುಂಡ್ಲಹಳ್ಳಿ ಗ್ರಾಮದ ಲಿಂಗಾನಾಯಕ ಅವರ 12 ಎಕರೆ ಜಮೀನಿನಲ್ಲಿ ಕಟಾವಿಗೆ ಬಂದಿದ್ದ ಶೇಂಗಾ ಸಂಪೂರ್ಣ ಹಾನಿಯಾಗಿದೆ. ಮೇವಿಗೆ ಬರುತ್ತಿದ್ದ ಶೇಂಗಾ ಬಳ್ಳಿಯೂ ಸಹ ಹಾಳಾಗಿದೆ. ಸುಮಾರು 3 ಲಕ್ಷ ನಷ್ಟವಾಗಿರುವುದಾಗಿ ರೈತ ತಿಳಿಸಿದ್ದಾರೆ.

IMG 20211117 WA0049
ಮಳೆಯಿಂದ ಕಡಮಲಕುಂಟೆ ಕೆರೆ ಸೇರಿದಂತೆ ತಾಲ್ಲೂಕಿನ ಬಹುತೇಕ ಕೆರೆಗಳಿಗೆ ನೀರು ಬಂದಿದೆ.
ಪಾವಗಡ 60 ಮಿ.ಮೀ, ತಿರುಮಣಿ 11 ಮಿ.ಮೀ, ಅರಸೀಕೆರೆ 9 ಮಿ.ಮೀ, ನಾಗಲಮಡಿಕೆ 51.4 ಮಿ.ಮೀ, ವೈ.ಎನ್.ಹೊಸಕೋಟೆ 11 ಮಿ.ಮೀ ಮಳೆಯಾಗಿರುವುದಾಗಿ ಮಳೆ ಮಾಪಕಗಳಲ್ಲಿ ದಾಖಲಾಗಿದೆ.

ವರದಿ: ಶ್ರೀನಿವಾಸುಲು ಎ