ಪಾವಗಡ: – ಪಟ್ಟಣದ ಸುಮಾರು 5 ವಾರ್ಡ್ ಗಳಿಗೆ ಶುಧ್ದ ಕುಡಿಯುವ ನೀರು ಒದಗಿಸುತ್ತಿದ್ದ ಘಟಕ ಕ್ಕೆ ನೀರು ಪೂರೈಸುತ್ತಿದ್ದ ಬೋರ್ ವೆಲ್ ನಲ್ಲಿ ನೀರು ಇಲ್ಲದ ಕಾರಣ ಶುದ್ಧ ಕುಡಿಯುವ ನೀರಿನ ಘಟಕ ವನ್ನು ಮುಚ್ಚಲಾಗಿತ್ತು.
ಫುರಸಭೆ 60 ಲಕ್ಷ ವೆಚ್ಚದಲ್ಲಿ ನಾಗಲಮಡಿಕೆಯ ಕೆರೆಯಿಂದ ಅಗಸರ ಕೆರೆಗೆ ಪೈಪ್ ಲೈನ್ ಮೂಲಕ ನೀರು ಹರಿಸಿರುವುದರಿಂದ ಪಾವಗಡ ಪಟ್ಟಣದ ಅಂತರ್ಜಲ ವೃದ್ಧಿ ಯಾಗಿದ್ದು ,ಬತ್ತಿದ್ದ ಬೋರ್ ವೆಲ್ ಗಳಲ್ಲಿ ನೀರು ಬರುತ್ತಿರುವುದರಿಂದ ಮುಚ್ಚಲಾಗಿದ್ದ ಶುದ್ಧ ಕುಡಿಯುವ ನೀರಿನ ಘಟಕ ವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಯ ಸಹಕಾರ ದೊಂದಿಗೆ ಇಂದು ಪುನರ್ ಆರಂಭ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡರಾದ ವಿಶ್ವನಾಥ್ ತಿಳಿಸಿದ್ದಾರೆ.
ಯೋಜನಾಧಿಕಾರಿ ನಂಜುಂಡಿ, ಸಿದ್ದಗಂಗಾ ಘಟಕ ಮೇಲ್ವಿಚಾರಕರಾದ ಸುನಿಲ್ ಕಸಬಾ ವಲಯ ಮೇಲ್ವಿಚಾರಕರಾದ ಗೋಪಾಲ್, ಜನಜಾಗೃತಿ ವೇದಿಕೆಯ ಸದಸ್ಯರಾದ ರಾಜಗೋಪಾಲ್, ಕಾಂಗ್ರೆಸ್ ಪಕ್ಷದ ಮುಖಂಡರಾದ ಅಲಿ, ವಿಶ್ವನಾಥ್. ಒಕ್ಕೂಟದ ಅಧ್ಯಕ್ಷರಾದ ಕುಮಾರಿ ಅರುಣ, ಸೇವಾ ಪ್ರತಿನಿಧಿಗಳು ಘಟಕದ ಪ್ರೇರಕರು ತಾಂತ್ರಿಕ ವಿಭಾಗದವರು ಹಾಜರಿದ್ದರು
ವರದಿ: ಬುಲೆಟ್ ವೀರಸೇನ ಯಾದವ್