ಪಾವಗಡ: 5 ವರ್ಷದಲ್ಲಿ ನೀರಾವರಿ ಯೋಜನೆಗಳು ಪೂರ್ಣಗೊಂಡು ತಾಲ್ಲೂಕು ಮಲೆನಾಡಾಗಲಿದೆ ಎಂದು ಕೇಂದ್ರ ಸಚವ ಎ.ನಾರಾಯಣಸ್ವಾಮಿ ತಿಳಿಸಿದರು.
ಪಟ್ಟಣದಲ್ಲಿ ಶುಕ್ರವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಕೋವಿಡ್ ನಿಂದಾಗಿ ನೀರಾವರಿ ಯೋಜನೆಗಳು ತಡವಾಗಿವೆ. ಕೋವಿಡ್ ಸಮಸ್ಯೆ ಇಲ್ಲದಿದ್ದರೆ ಅಧಿಕಾರಿಗಳನ್ನು ಖುರ್ಚಿಲ್ಲಿ ಕುಳಿತುಕೊಳ್ಳಲು ಬಿಡುತ್ತಿರಲಿಲ್ಲ. ಭದ್ರಾ ಮೇಲ್ದಂಡೆ ಸೇರಿದಂತೆ ನೀರಾವರಿ ಯೋಜನೆಗಳು ಶೀಘ್ರ ಪೂರ್ಣಗೊಂಡು ತಾಲ್ಲೂಕು ಸುಭಿಕ್ಷವಾಗಲಿದೆ ಎಂದರು.
ಗ್ರಾಮ ಪಂಚಾಯಿತಿ ಸದಸ್ಯರು ನಾಯಕರಾಗಬೇಕು. ಕ್ಷೇತ್ರದಲ್ಲಿ ನಡೆಯುತ್ತಿರುವ ಅನ್ಯಾಯಗಳಿಗೆ ಮುಕ್ತಿ ನೀಡಬೇಕು. ಭಯ ಬಿಟ್ಟು ಅಭಿವೃದ್ಧಿಗೆ ಒತ್ತು ನೀಡಿ. ಸ್ವಾವಲಂಭಿಗಳಾಗಿ ಎಂದರು.
ಗ್ರಾಮ ಪಂಚಾಯಿತಿ ಪಿಡಿಒ ಚುನಾವಣೆ ಕುರಿತು ತರಬೇತಿ ನೀಡುತ್ತಾರೆ. ಅದರಂತೆ ಮತ ಪೋಲಾಗದಂತೆ ಎಚ್ಚರಿಕೆಯಿಂದ ಮತ ಚಲಾಯಿಸಿ ಎಂದು ಕರೆ ನೀಡಿದರು.
ಶಾಸಕ ಡಾ. ರಾಜೇಶ್ ಗೌಡ, ಗ್ರಾಮೀಣ ಅಭಿವೃದ್ಧಿಗಾಗಿ ಪ್ರಧಾನಿ ನರೇಂದ್ರ ಮೋದಿ ಒತ್ತು ನೀಡಿದ್ದಾರೆ. ಅಧಿಕಾರ ವಿಕೇಂದ್ರಿಕರಣ ಕ್ಕೆ ಆದ್ಯತೆ ನೀಡಿದ್ದಾರೆ. ರಾಜ್ಯ ಸರ್ಕಾರ ಅಮೃತ ಗ್ರಾಮ ಯೋಜನೆ ಜಾರಿಗೊಳಿಸಿ, ಯೋಜನೆಯಡಿ ಪ್ರತಿ ಗ್ರಾಮದ ಅಭಿವೃದ್ಧಿಗಾಗಿ 25 ಲಕ್ಷ ಬಿಡುಗಡೆ ಮಾಡಿದೆ ಎಂದರು.
ರಾಜ್ಯ ಸರ್ಕಾರ ಚುನಾವಣಾ ಪೂರ್ವದಲ್ಲಿ ಭರವಸೆ ನೀಡಿದಂತೆ ಶಿರಾ ತಾಲ್ಲೂಕು ಮೊದಲೂರು ಕೆರೆಗೆ ನೀರು ಹರಿಸಿದೆ. ಆದರೆ ಇತರೆ ಪಕ್ಷಗಳ ಪ್ರಮುಖರು ನೀರಿನ ವಿಚಾರವಾಗಿ ದಶಕಗಳ ಕಾಲ ರಾಜಕೀಯ ಮಾಡಿದ್ದಾರೆ ಎಂದು ಆರೋಪಿಸಿದರು.
ವಿಧಾನ ಪರಿಷತ್ ಚುನಾವಣಾ ಅಭ್ಯರ್ಥಿ ಲೋಕೇಶ್ ಗೌಡ ಮಧ್ಯಮ ವರ್ಗದಿಂದ ಬಂದಿದ್ದು, ಕೊರಟಗೆರೆ ತಾಲ್ಲೂಕಿನವರಾಗಿದ್ದಾರೆ. ಮಲ್ಲಸಂದ್ರ ಅಭಿವೃದ್ಧಿಗೆ ಅವರು ಶ್ರಮಿಸಿರುವ ನಿದರ್ಶನ ಇದೆ. ಜನ ಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವ ಗುಣ ಅವರಲ್ಲಿದೆ ಎಂದರು.
ಮುಖಂಡ ಹುಲಿನಾಯ್ಕರ್, ಲಕ್ಷ್ಮೀಶ್, ಡಾ.ವೆಂಕಟರಾಮಯ್ಯ, ಪ್ರಭಾಕರ್ .
ತಾಲ್ಲೂಕು ಘಟಕದ ಅಧ್ಯಕ್ಷ ರವಿಶಂಕರನಾಯ್ಕ, ಪದಾಧಿಕಾರಿಗಳಾದ ರವಿ, ಕೊತ್ತೂರು ಹನುಮಂತರಾಯ, ಕೃಷ್ಣಾನಾಯ್ಕ, ಶ್ರೀರಾಮಗುಪ್ತ, ಪಾಲಯ್ಯ, ಶಿವಕುಮಾರ್ ಸಾಕೇಲ್, ಕಡಪಲಕೆರೆ ನವೀನ್, ಬ್ಯಾಡನೂರು ಶಿವು, ಅಶೋಕ್ ಉಪಸ್ಥಿತರಿದ್ದರು.
ವರದಿ: ಶ್ರೀನಿವಾಸುಲು ಎ