*ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದರಿಂದ ಕೊರೊನಾ ನಿಯಂತ್ರಿಸಬಹುದು: ಡಾ.ರಾಕೇಶ್ ಕುಮಾರ್*
ಪಾವಗಡ: ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದರಿಂದ ಕೊರೊನಾವನ್ನು ನಿಯಂತ್ರಿಸ ಬಹುದು ಎಂದು ಎಂದು ತುಮಕೂರು ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಹೇಳಿದರು.
ಜಿಲ್ಲಾಡಳಿತ, ಜಿಪಂ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ತುಮಕೂರು, ಸಮಗ್ರ ಶಿಶು ಅಭಿವೃದ್ಧಿ ಪಾವಗಡ, ಸಿಎಫ್ ಟಿಆರ್ ಐ ಮೈಸೂರು, ಸ್ಪಿರುಲಿನಾ ಫೌಂಡೇಶನ್ ತುಮಕೂರು ಆಶ್ರಯದಲ್ಲಿ ಟಿ.ಎನ್.ಪೇಟೆಯಲ್ಲಿ ನಡೆದ ಒಂದು ಸಾವಿರ ಮಕ್ಕಳಿಗೆ ಸ್ಪಿರುಲಿನಾ ಪೌಷ್ಟಿಕಾಂಶದ ಆಹಾರವನ್ನು ವಿತರಿಸಿ ಮಾತನಾಡಿದ ಅವರು,
ಸ್ಪಿರುಲಿನಾ ಪೌಷ್ಟಿಕ ಆಹಾರ ವನ್ನು ನೀಡುವುದರಿಂದ ಮಕ್ಕಳಲ್ಲಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು ಎಂದು ತಿಳಿಸಿದರು.
ಸ್ಪಿರುಲಿನಾದಲ್ಲಿ ನೂರಕ್ಕೂ ಅಧಿಕ ಪೋಷಕಾಂಶಗಳ ಸಿಗುತ್ತವೆ.
ಜಿಲ್ಲೆ ಹಾಗೂ ರಾಜ್ಯದಲ್ಲಿ ಹೆಚ್ಚು ಹೆಚ್ಚು ಸ್ಪಿರುಲಿನಾ ಪೌಷ್ಟಿಕಾಹಾರವನ್ನು ವಿತರಿಸಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ನಂತರ ಶಾಸಕ ಮಾತನಾಡಿ, ಮಕ್ಕಳ ಆರೋಗ್ಯವನ್ನು ಕಾಪಡುವಲ್ಲಿ ತಾಯಿಯ ಪಾತ್ರ ಪ್ರಮುಖವಾಗಿದೆ.
ತಾಯಿ ಮೊದೊಲು ಆರೋಗ್ಯವಾಗಿದ್ದರೆ ಮಾತ್ರ ಮಗು ಆರೋಗ್ಯದಿಂದರಲು ಸಾಧ್ಯವಾಗುತ್ತದೆ ಎಂದರು.
ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳಿಗೆ ಎರಡನೇಯ ತಾಯಿ ಇದ್ದಂತೆ ಅವರು ಮಕ್ಕಳ ಬೆಳವಣಿಗೆಯನ್ನು ಸೂಕ್ಷ್ಮ ವಾಗಿ ತಿಳಿದು ಪೋಷಕರಿಗೆ ತಿಳಿಸ ಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪ ವಿಭಾಗಧಿಕಾರಿ ನಂದಿನಿ ದೇವಿ, ಜಿಪಂ ಸದಸ್ಯ ಚನ್ನಮಲ್ಲಪ್ಪ, ತಾಪಂ ಅಧ್ಯಕ್ಷ ಸೊಗಡು ವೆಂಕಟೇಶ, ತಾಪಂ ಉಪಾಧ್ಯಕ್ಷ ನಾಗರಾಜು
ತಾಲೂಕು ಆರೋಗ್ಯ ಅಧಿಕಾರಿ ತಿರುಪತಯ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ನಾರಾಯಣಪ್ಪ ಇದ್ದರು.
ವರದಿ: ನವೀನ್ ಕಿಲಾರ್ಲಹಳ್ಳಿ