IMG 20240208 WA0008

ಮಧುಗಿರಿ: ನೋಡಲ್ ಅಧಿಕಾರಿಗಳು ಜನರ ಸಮಸ್ಯೆ ಬಗೆಹರಿಸಲು ಮುಂದಾಗಬೇಕು….!

DISTRICT NEWS ತುಮಕೂರು

ಮಧುಗಿರಿ : ನೋಡಲ್ ಅಧಿಕಾರಿಗಳು ಗ್ರಾಮ ಸಭೆಗಳಲ್ಲಿ ಖಡ್ಡಾಯವಾಗಿ ಭಾಗವಹಿಸಿ ಗ್ರಾಮಗಳ ಆಗು ಹೋಗುಗಳ ಬಗ್ಗೆ ಗಮನಹರಿಸಿ ಸಮಸ್ಯೆಗಳನ್ನು ಬಗೆಹರಿಸುವಂತೆ ಸಹಕಾರ ಸಚಿವ ಕೆ ಎನ್ ರಾಜಣ್ಣ ಸೂಚಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯತಿ ಸಭಾಂಗಣಾದಲ್ಲಿ ಆಯೋಜಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ,

ಐಡಿಹಳ್ಳಿ ಹೋಬಳಿಯ ಪುಲಮಾಚಿ ಗ್ರಾಮದಲ್ಲಿ ನೀರಿನ ಅಭಾವ ಕಂಡು ಬರುತ್ತಿದೆ. ಸಂಬಂಧಪಟ್ಡ ಪಿಡಿಓ ಗಮನಹರಿಸ ಬೇಕು ಹಾಗೂ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹೊಸದಾಗಿ ಕೊಳವೆ ಬಾವಿಗಳನ್ನು ಕೊರೆಸುವಾಗ ಹಳೆಯ ವಿದ್ಯುತ್ ಸಂಪರ್ಕವನ್ನು ಹೊಸ ಕೊಳವೆ ಬಾವಿಗೆ ಬಳಸಿ ಹೆಚ್ಚು ಅಂತರವಿದ್ದರೆ ಹಳೆಯ ಸಂಪರ್ಕವನ್ನು ಕಡಿತ ಗೊಳಿಸಬೇಕು.

ಈ ಹಿಂದೆ ತಾಲ್ಲೂಕಿನಲ್ಲಿ ಗೋಶಾಲೆಗಳನ್ನು ಮಿಡಗೇಶಿ , ತೆರಿಯೂರು , ಗೊಬಲಗುಟ್ಟೆ , ಮೀನಗೊಂದಿ ರಂಗನಾಥ ಸ್ವಾಮಿ ದೇವಾಲಯ , ಬಂಡೇನಹ ಬಳಿ ತೆರೆದು ಗೋಪಾಲಕರಿಗೆ ಮಧ್ಯಾಹ್ನದ ಊಟ ವ್ಯವಸ್ಥೆಯನ್ನು ನಮ್ಮ ಬ್ಯಾಂಕ್ ನ ವತಿಯಿಂದ ಮಾಡಲಾಗಿತ್ತು.ಅವಶ್ಯಕತೆ ಇರುವ ಕಡೆ ಮಾತ್ರ ಗೋ ಶಾಲೆಗಳನ್ನು ತೆರೆಯಲು ಸ್ಥಳ ಪರಿವೀಕ್ಷಣೆ ಮಾಡುವಂತೆ ತಹಸೀಲ್ದಾರ್ ಸಿಗಬತ್ ವುಲ್ಲಾ ರವರಿಗೆ ಸೂಚಿಸಿದರು.

ಬ್ರಹ್ಮದೇವರಹಳ್ಳಿ ಬಳಿ ಕೆಲವರು ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ ಅಲ್ಲಿ ಚಿರತೆ ಕಾಟ ಹೆಚ್ಚಿದೆ , ವಿದ್ಯಾರ್ಥಿಗಳಿರುವ ಮನೆಗಳಿಗೆ ಉಚಿತವಾಗಿ ಬೆಳಕು ಯೋಜನೆಯಡಿಯಲ್ಲಿ ವಿದ್ಯುತ್ ಸಂಪರ್ಕವನ್ನು ಕಲ್ಪಿಸಿಕೊಡುವಂತೆ ಬೆಸ್ಕಾಂ ಇಇ ಜಗದೀಶ್ ರವರಿಗೆ ಸೂಚಿಸಿದರು.

ಹೊಸಕೋಟೆ , ಬ್ರಹ್ಮಸಂದ್ರ , ಕಡಗತ್ತೂರು , ಯಾಕಾರಲಹಳ್ಳಿ , ಶ್ರಾವಂಡನಹಳ್ಳಿ ಗ್ರಾಮಗಳಿಗೆ ಸಾರಿಗೆ ವ್ಯವಸ್ಥೆ ಹಾಗೂ ಶಾಲಾ ವಿದ್ಯಾರ್ಥಿಗಳು ಎಲ್ಲಿಯೇ ಕೈ ತೋರಿಸಿದರು ವಿದ್ಯಾರ್ಥಿಗಳನ್ನು ಬಸ್ ನಲ್ಲಿ ಹತ್ತಿಸಿಕೊಳ್ಳಬೇಕು ಹಾಗೂ ಬಸ್ ವ್ಯವಸ್ಥೆ ಇಲ್ಲದ ಗ್ರಾಮಗಳಿಗೂ ಬಸ್ ವ್ಯವಸ್ಥೆ ಕಲ್ಪಿಸಿ ಕೊಡಬೇಕೆಂದು ಡಿಪೋ ವ್ಯವಸ್ಥಾಪಕ ರಾಮಚಂದ್ರಪ್ಪ ಸೂಚಿಸಿದರು.

ಪುಲಮಾಚಿ ಗ್ರಾಮದವರಿಗೆ ಸಾಗುವಳಿ ಚೀಟಿ ನೀಡಿದ್ದರು ಇದೂವರೆವಿಗೂ ಖಾತೆ ಪಹಣಿ ಆಗಿಲ್ಲ ಕೂಡಲೆ ವಿತರಣೆಗೆ ಕ್ರಮ ಕೈಗೊಳ್ಳುವಂತೆ ತಹಸೀಲ್ದಾರ್ ರವರಿಗೆ ಸೂಚಿಸಿದರು.

ಪಡಿತರ ವಿತರಣೆ ಬಗ್ಗೆ ಹಲವಾರು ಕಡೆ ಲೋಪದೋಷಗಳು ಕಂಡು ಬರುತ್ತಿವೆ ಪೊಲೇನಹಳ್ಳಿ ಪಡಿತರ ವಿತರಣೆಯ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಹಾರ ಶಿರಸ್ತೆದಾರ್ ಸುಜಾತ ರವರಿಗೆ ಸೂಚಿಸಿದರು.

ಮಧುಗಿರಿ , ಮಿಡಗೇಶಿ ಹೋಬಳಿಗಳಲ್ಲಿನ ಜಮೀನುಗಳು ತುಮಕೂರು ರಾಯದುರ್ಗಾ ರೈಲ್ವೆ ಕಾಮಗಾರಿ ಭೂಸ್ವಾಧಿನ ಪ್ರಕ್ರಿಯೆ ನಡೆಯುತ್ತಿದೆ. ನಮ್ಮ ತಾಲೂಕಿನಲ್ಲಿ 473 ಎಕರೆ ಜಮೀನು ಭೂ ಸ್ವಾಧೀನಕ್ಕೆ ಒಳಪಡಲಿದೆ.

ಕೊರಟಗೆರೆ – ಮಧುಗಿರಿ – ಮಡಶಿರಾ ರೈಲ್ವೆ ಮಾರ್ಗ ಹಾದು ಹೋಗಲಿದ್ದು ಕಾಮಗಾರಿಯು 62 ಗ್ರಾಮಗಳಿಂದ ಒಟ್ಟು
620 ಎಕರೆ ಜಮೀನು ಅವಶ್ಯಕತೆ ಇದ್ದೂ ಈ ಪೈಕಿ 328 ಎಕರೆ ಸ್ವಾಧೀನ ಮಾಡಿಕೊಳ್ಳಲಾಗಿದೆ ಎಂದು ಸಭೆಗೆ ಮಾಹಿತಿ ನೀಡಲಾಯಿತು.

ನಾನು ಶಾಸಕ ನಾಗುವುದಕ್ಕೂ ಮುನ್ನಾವೇ ಪಾಳ್ಯದ ಹಳ್ಳಿಯ ಸಮೀಪ ರೈಲ್ವೆ ನಿಲ್ದಾಣಕ್ಕೆ ಅಂದೂ ನಾನೇ ಜಾಗವನ್ನು ಮೀಸಲಿರಿಸಿದ್ದೆ ಆದರೆ ಅಂದಿನಿಂದ ಇಲ್ಲಿ ವರೆವಿಗೂ ಕಾಮಗಾರಿ ನಡೆದಿಲ್ಲ ಅದಷ್ಡೂ ಬೇಗಾ ಕಾಮಗಾರಿ ಪ್ರಾರಂಭಿಸಬೇಕು ಎಂದರು.

ಕೆಶಿಫ್ ರಸ್ತೆಗೆ ಭೂಸ್ವಾಧೀನ ಗೊಂಡರು ರೈತರಿಗೆ ಪರಿಹಾರ ನೀಡಿಲ್ಲ , ನ್ಯಾಯಾಲಯದಲ್ಲಿ ಹಣ ಡೆಪಾಸೀಟ್ ಮಾಡಲಾಗಿದೆ ಎಂದು ಇಂಜಿನಿಯರ್ ತಿಳಿಸಿದಾಗ ಇದೂವರೆವಿಗೂ ನ್ಯಾಯಾಲಯಕ್ಕೆ ಹಣ ಡೆಪಾಜಿಟ್ ಮಾಡಿಲ್ಲ , ಬೈಪಾಸ್ ರಸ್ತೆ ಅಭಿವೃದ್ಧಿ ಪಡಿಸಿಲ್ಲ , ಸಿರಾ ಮಧುಗಿರಿ ಬೈಪಾಸ್ ಕ್ರಿಯಾ ಯೋಜನೆ ತಯಾರಾಗಿದ್ದು ಅದಷ್ಟೂ ಬೇಗಾ ಕಾಮಗಾರಿ ಕೈಗೆತ್ತಿಗೊಳ್ಳಲಾಗುವುದು. 4 ಪಥಗಳ ರಸ್ತೆ ನಿರ್ಮಾಣದ ಪ್ರಸ್ತಾಪವಿದೆ ಎಂದು ರಸ್ತೆ ಅಭಿವೃದ್ಧಿ ಪ್ರಾಧಿಕಾರದ ಶಿವಕುಮಾರ್ ರಸ್ತೆ ತಿಳಿಸಿದರು.

ಬೆಂಕಿಪುರ , ವಿದ್ಯಾನಗರ ಗಳಲ್ಲಿ ಮುಂದಿನ ತಿಂಗಳು ಯುಜಿಡಿ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು , ಗುರುವಡೇರಹಳ್ಳಿ ಬಳಿ ಕೆಶಿಫ್ ನವರು ಪರಿಹಾರ ನೀಡಿಲ್ಲವೆಂದು ನಮ್ಮ ಕಾಮಗಾರಿ ಯನ್ನು ಆರಂಭಿಸಲು ಬಿಡುತ್ತಿಲ್ಲಾ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಮಾತನಾಡಿ ಬೈಪಾಸ್ ರಸ್ತೆಗೆ ಭೂಮಿ ಕೊಟ್ಟಂತಹ ರೈತರಿಗೆ ತಕ್ಷಣ ಪರಿಹಾರ ನೀಡಬೇಕು ನಾಮಫಲಕ ಹಮ್ಸ್ ಒತ್ತುವರಿ ತೆರವು ಜಂಗಲ್ ಕಟ್ ಮಾಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಬಾಕ್ಸ್ : ಕೆಲ ದಿನಗಳ ಹಿಂದೆ ಹಾಸ್ಟೆಲ್ ಗೆ ಸಹಕಾರ ಸಚಿವರು ಭೇಟಿ ನೀಡಿದ್ದಾಗ ಏಳನೇ ತರಗತಿಯ ವಿದ್ಯಾರ್ಥಿ ಮಹೇಶ್ ಎನ್ನುವವನಿಗೆ ಕೈ ಭಾಗದಲ್ಲಿ ಚರ್ಮದ ಸಮಸ್ಯೆ ಯಿಂದ ಬಳಲುತ್ತಿದ್ದನ್ನು ಕಂಡು ಕೂಡಲೇ ಚಿಕಿತ್ಸೆ ಕೊಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು ನಂತರ ಆ ವಿದ್ಯಾರ್ಥಿ ಯನ್ನು ತ್ರೈಮಾಸಿಕ ಸಭೆಗೆ ಕರೆಸಿಕೊಂಡು ವಿದ್ಯಾರ್ಥಿಯ ಆರೋಗ್ಯ ವಿಚಾರಿಸಿ ಮಾಹಿತಿ ಪಡೆದುಕೊಂಡರು.

ಉಪ ವಿಭಾಗಾದಿಕಾರಿ ಗೊಟೂರು ಶಿವಪ್ಪ , ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಣ್ ಯೋಜನಾಧಿಕಾರಿ ಮಧುಸೂದನ್ ,
ಕೆಪಿಸಿಸಿ ಸದಸ್ಯರಾದ ಎಂ ಎಸ್ ಮಲ್ಲಿಕಾರ್ಜುನಯ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತ ರಾಯಪ್ಪ , ವಲಯ ಅರಣ್ಯ ಅಧಿಕಾರಿ ಸುರೇಶ್ , ಲೋಕೋಪಯೋಗಿ ಇಲಾಖೆಯ ಸುರೇಶ್ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶಿವಣ್ಣ , ರೇಷ್ಮೆ ಇಲಾಖೆ ಲಕ್ಷ್ಮಿನರಸಯ್ಯ ಡಿ ಡಿ ಪಿ ಐ ಮಂಜುನಾಥ್ ಗ್ರಾಮೀಣ ಕುಡಿಯುವ ನೀರು ಇಲಾಖೆಯ ಲೋಕೇಶ್ವರಪ್ಪ ಲೋಕೋಪಯೋಗಿ ಇಲಾಖೆಯ ರಾಜಗೋಪಾಲ್ ಜಿಲ್ಲಾ ಪಂಚಾಯತ್ ಇಲಾಖೆಯ ಮಂಜುನಾಥ್ ಕೃಷಿ ಇಲಾಖೆ ಸಹಾಯಕ ಹನುಮಂತರಾಯಪ್ಪ ಸಾಮಾಜಿಕ ಅರಣ್ಯ ಇಲಾಖೆಯ ಶೈಲಜಾ , ಪಶು ಸಂಗೋಪನ ಇಲಾಖೆಯ ಸಿದ್ದನಗೌಡ ಕಾರ್ಮಿಕ ಅಧಿಕಾರಿ ಶ್ರೀಕಾಂತ್ ಎತ್ತಿನಹೊಳೆ ಯೋಜನೆಯ ಮುರುಳಿಧರ್,
ಎ. ಆರ್ ಸಿ ಎಸ್ ಸಣ್ಣಪ್ಪಯ್ಯ , ಸಿಡಿಪಿಓ ಕಮಲಬಾಯಿ ಹಾಗೂ ಮತ್ತಿತರರು ಇದ್ದರು.

ವರದಿ ಲಕ್ಷ್ಮಿಪತಿ ದೊಡ್ಡ ಯ ಲ್ಕೂರು.