1200px Arachis hypogaea 004

ಪಾವಗಡ :ಪರಿಷ್ಕೃತ ಮಾರಾಟ ದರದಲ್ಲಿ ನೆಲಗಡಲೆ ಬಿತ್ತನೆ ಬೀಜ ವಿತರಣೆ

DISTRICT NEWS ತುಮಕೂರು

ಪರಿಷ್ಕೃತ ಮಾರಾಟ ದರದಲ್ಲಿ ನೆಲಗಡಲೆ ಬಿತ್ತನೆ ಬೀಜ ವಿತರಣೆ

ತುಮಕೂರು(ಕವಾ)ಜೂ.22: ಕೃಷಿ ಇಲಾಖೆ ಕಾರ್ಯಕ್ರಮದಡಿ 2021ರ ಮುಂಗಾರು ಹಂಗಾಮಿಗೆ ಪರಿಷ್ಕೃತ ರಿಯಾಯಾತಿ ದರದಲ್ಲಿ ನೆಲಗಡಲೆ ಬಿತ್ತನೆ ಬೀಜವನ್ನು ವಿತರಿಸಲಾಗುತ್ತಿದೆ ಎಂದು ಜಂಟಿ ಕೃಷಿ ನಿರ್ದೇಶಕಿ ರಾಜಸುಲೋಚನಾ ತಿಳಿಸಿದ್ದಾರೆ.
ಪರಿಷ್ಕೃತ ದರದನ್ವಯ ಪ್ರತಿ ಕ್ವಿಂಟಾಲ್ ಕೆ-6 ಹಾಗೂ ಟಿಎಂವಿ-2 ತಳಿ ನೆಲಗಡಲೆ ಬೀಜವನ್ನು ಹಿಂದಿನ ಮಾರಾಟ ದರಕ್ಕಿಂತ 400 ರೂ.ಗಳಷ್ಟು ಕಡಿಮೆಯಾಗಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.