council 5559755 835x547 m

ಕಾಗದ ರಹಿತ ವಿಧಾನ ಪರಿಷತ್ತಿಗೆ ಶೀಘ್ರ ಕ್ರಮ….!

Genaral STATE

ಕಾಗದ ರಹಿತ ವಿಧಾನ ಪರಿಷತ್ತಿಗೆ ಶೀಘ್ರ ಕ್ರಮ   – ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ.

ಬೆಂಗಳೂರು, ಜೂನ್ 22 ( ಕರ್ನಾಟಕ ವಾರ್ತೆ ) : ನೂರಾ ಹದಿನಾಲ್ಕು ವರ್ಷಗಳ ಇತಿಹಾಸ ಹೊಂದಿರುವ ಕರ್ನಾಟಕ ರಾಜ್ಯ ವಿಧಾನ ಪರಿಷತ್ನಲ್ಲಿ ಅಮೂಲಾಗ್ರ ಬದಲಾವಣೆಗೆ ಒತ್ತು ನೀಡಿದ್ದು ಪರಿಷತ್ತಿನ ಕಾರ್ಯಚಟುವಟಿಕೆ ಹಾಗೂ ಸದನದ ಕಾರ್ಯಕಲಾಪಗಳನ್ನು ಕಾಗದರಹಿತವನ್ನಾಗಿ ಮಾಡುವ ಕುರಿತು ಶೀಘ್ರ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಿಧಾನ ಪರಿಷತ್ತಿನ ಮಾನ್ಯ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಸಂಸದೀಯ ಕಾರ್ಯವಿಧಾನ ಕುರಿತು ಮಾನ್ಯ ಲೋಕಸಭಾಧ್ಯಕ್ಷರಾದ ಓಂ ಬಿರ್ಲಾರವರು ದೇಶದ ಎಲ್ಲಾ ರಾಜ್ಯಗಳ ವಿಧಾನ ಮಂಡಲಗಳ ಸಭಾಪತಿಗಳು ಹಾಗೂ ಸಭಾಧ್ಯಕ್ಷರೊಂದಿಗೆ ಇಂದು ನಡೆದ ವರ್ಚುವಲ್ ಸಂವಾದದಲ್ಲಿ  ಮಾತನಾಡಿದ ಅವರು ರಾಜ್ಯ ವಿಧಾನ ಪರಷತ್ತನ್ನು ಮಾದರಿ ವಿಧಾನ ಪರಿಷತ್ತನ್ನಾಗಿ ಮಾಡುವ ಸಂಕಲ್ಪದೊಂದಿಗೆ ಹಲವು ವಿನೂತನ ಕ್ರಮ ಕೈಗೊಳ್ಳಲಾಗುತ್ತಿದೆ ಇ-ವಿಧಾನ ಕಾರ್ಯಕ್ರಮದಡಿ ವಿಧಾನ ಪರಿಷತ್ತನ್ನು ಕಾಗದರಹಿತವನ್ನಾಗಿ ಮಾಡುವ ನಿಟ್ಟಿನಲ್ಲಿ ಈಗಾಗಲೇ ಕ್ರಮ ಜರುಗಿಸಲಾಗುತ್ತಿದೆ. ಸದನದ ಕಲಾಪ, ಪ್ರಶ್ನೋತ್ತರ ಕಾರ್ಯಚಟುವಟಿಕೆಗಳನ್ನು ಡಿಜಿಟಲೀಕರಣಗೊಳಿಸಲಾಗುತ್ತಿದೆ ಎಂದರು.56710ade 1b63 453d a8a7 ce3748b723b6

ಕಳೆದ ವಿಧಾನ ಮಂಡಲದ ಬಜೆಟ್ ಅಧಿವೇಶನದಿಂದಲೇ ವಿಧಾನ ಪರಿಷತ್ತಿನ ಕಾರ್ಯಕಲಾಪಗಳನ್ನು ರಾಜ್ಯ ಸಭೆಯ ಮಾದರಿಯಲ್ಲಿ  ಮಾಡಲಾಗುತ್ತಿದ್ದು ನಿಗದಿತ ವೇಳೆ ಹಾಗೂ ಅವಧಿಯಲ್ಲಿಯೇ ಪ್ರಶ್ನೋತ್ತರ, ಶೂನ್ಯ ವೇಳೆ ಸೇರಿದಂತೆ ವಿವಿಧ ಕಾರ್ಯಕಲಾಪಗಳನ್ನು ನಡೆಸುವ ಮೂಲಕ  ದೇಶದಲ್ಲಿಯೇ ಮಾದರಿಯಾಗಿದೆ ಎಂದರು.
ಕೋವಿಡ್ ಸಂದರ್ಭದಲ್ಲಿಯೂ ಸರಕಾರದ ಸೂಕ್ತ ನಿರ್ದೇಶನಗಳನ್ನು ಪಾಲಿಸಿ ಯಶಸ್ವಿಯಾಗಿ ಸದನದ ಕಲಾಪಗಳನ್ನು ನಡೆಸಲಾಗಿದೆ. ಕೋವಿಡ್ ಕುರಿತು ನಾಗರಿಕರಲ್ಲಿ ಜನಜಾಗೃತಿ ಹಾಗೂ ಮುಂಜಾಗ್ರತೆ ವಹಿಸುವಲ್ಲಿ ರಾಜ್ಯದ ವಿಧಾನ ಪರಿಷತ್ ಸದಸ್ಯರ ಪಾತ್ರ ಅನುಕರಣೀಯವಾಗಿದೆ ಎಂದು ಇದೇ ಸಂದರ್ಭದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಸಭೆಗೆ ತಿಳಿಸಿದರು.e92da9e0 2c1a 4257 a1dc 87447a1d308c

ಲೋಕಸಭಾಧ್ಯಕ್ಷ ಓಂ ಬಿರ್ಲಾ ಮಾತನಾಡಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಲೋಕ ಸಭಾಧ್ಯಕ್ಷರಾಗಿ ತಾವು ಸದನದ ಕಲಾಪ ನಡೆಸಿದ ರೀತಿ, ಹಾಗೂ ಅನುಭವಗಳನ್ನು ಹಂಚಿಕೊಂಡರು.
ಸಭೆಯಲ್ಲಿ ಕರ್ನಾಟ ವಿಧಾನ ಸಭಾಧ್ಯಕ್ಷ ಮಾನ್ಯ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ದೇಶದ ಎಲ್ಲ ರಾಜ್ಯಗಳ ವಿಧಾನ ಸಭಾಧ್ಯಕ್ಷರು ಹಾಗೂ ವಿಧಾನ ಪರಿಷತ್ತಿನ ಸಭಾಪತಿಗಳು ಪಾಲ್ಗೊಂಡು ವಿಚಾರ ಮಂಡಿಸಿದರು.