IMG 20210622 WA0009

ಪಾವಗಡ: 18+ ಗೆ ಕೋವಿಡ್ ಲಸಿಕೆ ಅಭಿಯಾನ

DISTRICT NEWS ತುಮಕೂರು

18+ ಗೆ ಕೋವಿಡ್ ಲಸಿಕೆ ಅಭಿಯಾನ

ವೈ.ಎನ್.ಹೊಸಕೋಟೆ : 18-45 ವಯೋಮಾನ ಒಳಗಿನವರಿಗೆ ಸರ್ಕಾರ ಹಮ್ಮಿಕೊಂಡಿರುವ ಕೋವಿಡ್ ಲಸಿಕೆ ಅಭಿಯಾನಕ್ಕೆ ಗ್ರಾಮದಲ್ಲಿ ವಿಶ್ವ ಯೋಗದಿನವಾದ ಸೋಮವಾರದಂದು ಚಾಲನೆ ನೀಡಲಾಯಿತು.
ಗ್ರಾಮದ ಅಶ್ವಥನ ಕಟ್ಟೆ ಬಳಿ ಡಾ.ಲಿಂಗರಾಜು ನೇತೃತ್ವದಲ್ಲಿ ನಡೆದ ಅಭಿಯಾನದಲ್ಲಿ ಸುಮಾರು 155ಜನರು ಕೋವಿಡ್ ಪ್ರಥಮ ಲಸಿಕೆ ಪಡೆದರು.
ಲಸಿಕೆ ಪಡೆಯಲು ಯುವಜನತೆ ಉತ್ಸಾಹದಿಂದ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಯಾದ ವಿಶ್ವನಾಥ, ವಾಗೇಶ್, ವೆಂಕಟೇಶ್, ಧಪೇದಾರ್ ಶಾಂತಪ್ಪ ಮತ್ತು ಆಶಾ ಕಾರ್ಯಕರ್ತರು ಹಾಜರಿದ್ದರು.

ವರದಿ ಸತೀಶ್