IMG 20200815 WA0142

ಪಾವಗಡ: 74 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ

DISTRICT NEWS ತುಮಕೂರು

ಪಾವಗಡ ಪಟ್ಟಣದಲ್ಲಿಂದು 74 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಸರ್ಕಾರಿ ಇಲಾಖೆಗಳ ಅಡಿಯಲ್ಲಿ ಸರಳವಾಗಿ ಆಚರಿಸಲಾಯಿತು.

ತಾಲ್ಲೂಕಿನ ಶಾಸಕ ವೆಂಕಟರವಣಪ್ಪ ಹಾಗೂ ತಾಲ್ಲೂಕು ದಂಡಾಧಿಕಾರಿ ವರದರಾಜು ರವರ ನೇತೃತ್ವದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು.

ನಂತರ ಮಾತನಾಡಿದ ಶಾಸಕ ವೆಂಕಟರವಣಪ್ಪ
ತಾಲ್ಲೂಕು ಹಲವು ದಶಕಗಳಿಂದ ಬರಗಾಲಕ್ಕೆ ತುತ್ತಾಗಿತ್ತು.ಈಗ ತಾಲ್ಲೂಕಿನ ಪ್ರತಿ ಕೆರೆಗಳಿಗೂ ನೀರು ಹರಿಸೋ ಕೆಲಸ ವನ್ನು ಇನ್ನೆರಡು ವರ್ಷದೊಳಗೆ ಪೂರೈಸಲಾಗುತ್ತದೆ ಆಗ ತಾಲ್ಲೂಕು ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳಿಗೆ ಆಸರೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜೊತೆಗೆ ಕೊರೊನಾ ಎನ್ನುವ ಮಹಾಮಾರಿಗೆ ಯಾರೂ ಅಂಜುವ ಅನಿವಾರ್ಯತೆಯಿಲ್ಲ.ಧೈರ್ಯವಾಗಿ ಹೆದರಿಸಿ ಎಂದು ಸಲಹೆ ನೀಡಿದರು.

ತಹಶೀಲ್ದಾರ್ ವರದರಾಜು ರವರು ಮಾತನಾಡುತ್ತ ಇಂದು ನಮ್ಮ ರಾಷ್ಟ್ರಕ್ಕೆ ಸ್ವತಂತ್ರತೆ ಸಿಕ್ಕ ಸುದಿನ. ಈ ದೇಶದ ಸ್ವಾಭಿಮಾನ, ಸ್ವಾತಂತ್ರ್ಯಕ್ಕಾಗಿ ಮಹಾತ್ಮ ಗಾಂಧಿ, ಬೋಸ್,ಅಂಬೇಡ್ಕರ್ ರಂತಹ ದೇಶಪ್ರೇಮಿಗಳು ಹಗಲು ಇರುಳು ಹೋರಾಟ ನಡೆಸಿ ತಮ್ಮ ಬದುಕನ್ನೇ ಬಲಿದಾನಗೈದ ಪುಣ್ಯಭೂಮಿಯಿದು ಎಂದು ಹರ್ಷ ವ್ಯಕ್ತಪಡಿಸಿದರು.

IMG 20200815 WA0140

ಇದೇ ಸಂದರ್ಭದಲ್ಲಿ ತಾಲ್ಲೂಕಿನಲ್ಲಿ ಹಗಲು ರಾತ್ರಿಯೆನ್ನದೆ ಕೊರೊನಾ ನಿಯಂತ್ರಣ ಮಾಡುತ್ತಿದ್ದ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ,ಪುರಸಭಾ ಹಾಗೂ ಸರ್ಕಾರಿ ನೌಕರರನ್ನು ಕೊರೊನಾ ವಾರಿಯರ್ಸ್ ಎಂದು ಗುರುತಿಸಿ ಗೌರವಿಸಲಾಯಿತು.

ಇದೇ ವೇಳೆ ತಾಲ್ಲೂಕು ಪಂಚಾಯಿತಿ ಪ್ರಭಾರ ಅಧ್ಯಕ್ಷ ಐಜಿ ನಾಗರಾಜು,ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ನರಸಿಂಹಮೂರ್ತಿ, ಪುರಸಭಾಧಿಕಾರಿ ನವೀನ್ ಚಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದಗಂಗಯ್ಯ, ಸಾರ್ವಜನಿಕ ಆಸ್ಪತ್ರೆ ಮುಖ್ಯ ಆಡಳಿಯ ವೈದ್ಯಾಧಿಕಾರಿ ಕಿರಣ್.ಜಿ. ಸೇರಿದಂತೆ ಹಲವರಿದ್ದರು.