IMG 20221031 WA0004

ಆನೇಕಲ್: ಗ್ರಾಮ ಪಂಚಾಯತಿ ಉಪ ಚುನಾವಣೆ ಫಲಿತಾಂಶ ಪ್ರಕಟ…!

DISTRICT NEWS ಬೆಂಗಳೂರು

ಆನೇಕಲ್:ಬ್ಯಾಗಡದೇನಹಳ್ಳಿ ಗ್ರಾ. ಪಂ ಕೆಂಪವಡೇರಹಳ್ಳಿ- ದೊಡ್ಡ ಹಾಗಡೆ ಹಾಗೂ ಯಲ್ಲಮ್ಮನ ಪಾಳ್ಯ ಸದಸ್ಯ ನಿಧನದಿಂದ ತೆರವಾದ ಸ್ಥಾನಕ್ಕೆ ನಡೆದ ಉಪಚುನಾವಣೆಯ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು ಬಿಜೆಪಿ ಬೆಂಬಲಿತ ಅಭ್ಯರ್ಥಿ ಭರ್ಜರಿ ಗೆಲುವು ದಾಖಲಿಸಿದ್ದಾರೆ
ಪರಿಶಿಷ್ಟ ಮೀಸಲು ಕ್ಷೇತ್ರ (ಎಸ್ ಸಿ) ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ರಾಮಸ್ವಾಮಿ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಧನಂಜಯ್ ಸ್ಪರ್ಧಿಸಿದ್ದರು.
ಬಿಜೆಪಿ ಬೆಂಬಲಿತ ಅಭ್ಯರ್ಥಿ ರಾಮಸ್ವಾಮಿ ಅವರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಧನಂಜಯ್ ವಿರುದ್ಧ 145 ಮತಗಳ ಅಂತರದ ಗೆಲುವು ದಾಖಲಿಸಿದ್ದಾರೆ
ಚಲಾಯಿತ ಒಟ್ಟು 928 ಮತಗಳಲ್ಲಿ ರಾಮಸ್ವಾಮಿ 532 ಧನಂಜಯ್ 387 ಮತ ಪಡೆದರು 9 ಮತಗಳು ತಿರಸ್ಕೃತ ಗೊಂಡಿತು.