IMG 20250630 WA0005 scaled

ಪಾವಗಡ : ಬಿ.ಇ.ಒ ನಿವೃತ್ತಿ – ಬೀಳ್ಕೊಟ್ಟ ಶಿಕ್ಷಕ ವೃಂದ….!

DISTRICT NEWS ತುಮಕೂರು

ತಾಲೂಕಿನ ಸರ್ವತೋಮುಖ ಶೈಕ್ಷಣಿಕ ಪ್ರಗತಿಗೆಶ್ರಮಿಸಿದ ದಕ್ಷ ಮತ್ತು ಪ್ರಾಮಾಣಿಕ ಮಹಿಳಾ ಅಧಿಕಾರಿ ಬಿ.ಇ.ಓ ಇಂದ್ರಾಣಮ್ಮ.

ಪಾವಗಡ: ಸಮಾಜದಲ್ಲಿ ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು, ಇಂಥ ವೃತ್ತಿಯಲ್ಲಿ ಶಿಕ್ಷಣ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಸುಮಾರು ವರ್ಷಗಳ ಕಾಲ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಇಂದ್ರಾಣಮ್ಮ ಸೋಮವಾರ ವಯೋಸಹಜ ನಿವೃತ್ತಿ ಹೊಂದುತ್ತಿದ್ದು, ಅವರಿಗೆ ದೇವರು ಉತ್ತಮ ಆರೋಗ್ಯ ಐಶ್ವರ್ಯ ನೀಡಲಿ ಎಂದು ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಾಧವ ರೆಡ್ಡಿ ತಿಳಿಸಿದರು.

ಪಟ್ಟಣದ ಗುರುಭವನದಲ್ಲಿ ಸೋಮವಾರ ತಾಲ್ಲೂಕಿನ ಪ್ರೌಢಶಾಲಾ ಬಡ್ತಿ ಮುಖ್ಯ ಶಿಕ್ಷಕರ ಸಂಘ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪಾವಗಡ ಘಟಕದ ವತಿಯಿಂದ
ವಯೋಸಹಜ ನಿವೃತ್ತಿ ಹೊಂದುತ್ತಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಇಂದ್ರಾಣಮ್ಮನವರಿಗೆ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಇಂದ್ರಾಣಮ್ಮನವರು ತಾಲ್ಲೂಕಿಗೆ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ನೇಮಕವಾದ ನಂತರ ತಾಲೂಕಿನ ಶೈಕ್ಷಣಿಕ ಸುಧಾರಣೆಗೆ ಹೆಚ್ಚಿನ ಒತ್ತನ್ನು ನೀಡಿದ್ದಾರೆ ಎಂದರು.

ಸಕಾಲಕ್ಕೆ ಇಲಾಖೆಯಿಂದ ಯಾವುದೇ ವಾಹನ ಸೌಲಭ್ಯ ಇಲ್ಲದಿದ್ದರೂ ಸಹ ತಾಲೂಕಿನಿಂದ ಸುಮಾರು 40 ಕಿಲೋಮೀಟರ್ ವರೆಗೂ ಇತರೆ ಸಹೋದ್ಯೋಗಿಗಳ ಸಹಾಯ ಪಡೆದು ಬೈಕ್ ನಲ್ಲಿ ಯೇ ಓಡಾಡಿ ಗಡಿನಾಡಿನ ಪ್ರಾರ್ಥಮಿಕ, ಮತ್ತು ಪ್ರೌಢಶಾಲೆಗಳ ಶೈಕ್ಷಣಿಕ ಪ್ರಗತಿಗೆ ದುಡಿದಿದ್ದಾರೆ, ಇಲಾಖೆಯ ಮಾರ್ಗದರ್ಶನದಂತೆ ಎಸ್ ಎಸ್ ಎಲ್ ಸಿ ಎಲ್ ಫಲಿತಾಂಶ ಸುಧಾರಿಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು ಎಂದರು.

ಕಾರ್ಯಕ್ರಮ ಉದ್ದೇಶಿಸಿ ಪ್ರಾರ್ಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀನಿವಾಸಲು ಎ ಮಾತನಾಡಿ,
ಪಾವಗಡ ತಾಲೂಕಿನ ಪ್ರಪ್ರಥಮ ಮಹಿಳಾ ಕ್ಷೇತ್ರ ಶಿಕ್ಷಣಾಧಿಕಾರಿ ಕೆಲಸ ನಿರ್ವಹಿಸಿದ ಇಂದ್ರಾಣಮ್ಮ ನವರು, ಸರಳ ಜೀವಿಗಳು,ಸ್ನೇಹಜೀವಿಗಳು ಹಾಗೂ ಪರೀಕ್ಷೆಗಳನ್ನು ಕಟ್ಟು ನಿಟ್ಟಾಗಿ ನಿರ್ವಹಿಸಿ
ಒಂದು ಕಡೆ ಶೈಕ್ಷಣಿಕ ಆಡಳಿತ ಮತ್ತೊಂದು ಕಡೆ ಶಿಕ್ಷಣದ ಗುಣಮಟ್ಟದ ಹೆಚ್ಚಳಕ್ಕೆ ಶ್ರಮಿಸಿ ತಾಲೂಕಿನ ಮನೆ ಮಾತಾಗಿದ್ದರು ಎಂದರು.
ತಾಲೂಕಿನ ಪ್ರಾಥಮಿಕ ಶಾಲೆಗಳ ಹಾಗೂ ಪ್ರೌಢ ಶಾಲೆಗಳ ಮಕ್ಕಳ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಶ್ರೀಮತಿ ಇಂದ್ರಾಣಮ್ಮ ಅವರ ಪಾತ್ರ ಅಮೋಘವೆಂದರು.

ಕಾರ್ಯಕ್ರಮದಲ್ಲಿ ಪ್ರಭಾರ ಬಿ.ಇ.ಒ ವೆಂಕಟೇಶ್ ಜಿ, ಎ ಡಿ ಎಂ ಎಂ ಶಂಕರಪ್ಪ, ಇ ಸಿ ಓ. ವೇಣು ಗೋಪಾಲ್ ರೆಡ್ಡಿ ತಾಲ್ಲೂಕಿನ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರುಗಳಾದ, ಬಾಲಾಜಿ, ಓಂಕಾರಪ್ಪ, ತಿಮ್ಮೇಶಪ್ಪ, ಲಕ್ಷ್ಮನಾಯ್ಕ, ಯರ್ರಿ ಸ್ವಾಮಿ, ರಾಮಚಂದ್ರಪ್ಪ, ರಾಜ ಬಾಬು, ಕಟ್ಟಾ ನರಸಿಂಹಮೂರ್ತಿ, ರಾಜಣ್ಣ, ರಾಜ ಬಾಬು, ಲತಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷ ನಾರಾಯಣಪ್ಪ ಜಿಲ್ಲಾ ಉಪಾಧ್ಯಕ್ಷರಾದ ಸಾವಿತ್ರಮ್ಮ. ಪ್ರಧಾನ ಕಾರ್ಯದರ್ಶಿ ಶ್ರೀ ನಾಗೇಂದ್ರ ಎನ್. ಖಜಾಂಚಿ ಚಂದ್ರಶೇಖರ ಕೆಎಸ್ ಉಪಾಧ್ಯಕ್ಷರಾದ ಲಕ್ಕಮ್ಮ ಹಾಗೂ ರಿಜಾನ್ ಬಾಷಾ ಸಹಕಾರಿದರ್ಶಿಗಳಾದ
ಪಿ ಎನ್ ನಾಗವೇಣ, ಸಂಘಟನಾ ಕಾರ್ಯದರ್ಶಿಗಳಾದ ಲಕ್ಷ್ಮಿದೇವಮ್ಮ ಹಾಗೂ ಮಂಜುನಾಥ ಮತ್ತು ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಭೀಮಪ್ಪ ಮತ್ತು ರಾಮಾಂಜನೇಯ ಅಪಾರ ಸಂಖ್ಯೆಯಲ್ಲಿ ಶಿಕ್ಷಕರು , ಶಿಕ್ಷಕಿಯರು ಹಾಜರಿದ್ದರು.

ವರದಿ : ಶ್ರೀನಿವಾಸಲು ಎ