ವೆಂಕಟಾಪುರ ಗ್ರಾ.ಪಂ. ಅಧ್ಯಕ್ಷರ ಅವಿರೋಧ ಆಯ್ಕೆ
ಪಾವಗಡ : ತಾಲ್ಲೂಕಿನ ಕಸಬಾ ಹೋಬಳಿಯ ವೆಂಕಟಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ವೆಂಕಟಾಪುರ ಗ್ರಾಮದ ವೆಂಕಟರಮಣಪ್ಪ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ಹಿಂದಿನ ಅಧ್ಯಕ್ಷರಾಧ ರಾಧಮ್ಮ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಗೆ ವೆಂಕಟಾಪುರ ಗ್ರಾಮದ ವೆಂಕಟರಮಣಪ್ಪ ಮಾತ್ರ ನಾಮ ಪತ್ರ ಸಲ್ಲಿಸಿದ್ದರು.
ಬೇರೆ ನಾಮಪತ್ರಗಳು ಸಲ್ಲಿಕೆಯಾಗದ ಕಾರಣ ಗ್ರೇಡ್ 2 ತಹಶೀಲ್ದಾರ್ ಚಂದ್ರಶೇಖರ್. ಜಿ.ಆರ್
ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಿ ಅವಿರೋಧ ಆಯ್ಕೆ ಪ್ರಕಟಿಸಿ ವೆಂಕಟರಮಣಪ್ಪ ನವರಿಗೆ ಅಧಿಕಾರ ವಹಿಸಿಕೊಟ್ಟರು
ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 12 ಜನ ಸದಸ್ಯರಿದ್ದು. ಕಾಂಗ್ರೆಸ್ ಬೆಂಬಲಿತ 07. ಜೆಡಿಎಸ್ 01 ಸದಸ್ಯರು. ಒಮ್ಮತದಿಂದ ಆಯ್ಕೆ ಮಾಡಿದರು.
ಉಪಾಧ್ಯಕ್ಷರಾದ ವರಲಕ್ಷ್ಮಿ ಸೇರಿ ಒಟ್ಟು 08 ಸದಸ್ಯರು. ಹಾಜರಿದ್ದು, ಮಂಜುಳಾ, ಕಲಾವತಿ, ಬಾನುಬಿ, ಅರುಣಾದೇವಿ.ಗೈರು ಹಾಜರಾಗಿದ್ದರು.
ಈ ಸಂದರ್ಭದಲ್ಲಿ ಪಿಡಿಒ ಹನುಮಂತರಾಜು, ಸದಸ್ಯರಾದ ಲಕ್ಷ್ಮಿ ನಾರಾಯಣ,, ಲಕ್ಷ್ಮಣ,
ವೆಂಕಟ ನಾಯ್ಡು, ಆಂಜನೇಯಲು,
ಲಕ್ಷ್ಮಿ ನಾರಾಯಣಪ್ಪ, ಹಿರಿಯ ಮುಖಂಡ ವೆಂಕಟೇಶಪ್ಪ, ಎಲ್ಐಸಿ ನಾರಾಯಣಪ್ಪ, ಪ್ರಕಾಶ್. ಅನುಪಮ, ಮುಂತಾದವರು ಹಾಜರಿದ್ದರು.