IMG 20210513 WA0009

ಪಾವಗಡ: ಸಾಮಗ್ರಿಗಳ ಕಿಟ್ ವಿತರಣೆ….!

DISTRICT NEWS ತುಮಕೂರು

ನಮ್ಮ ಹಕ್ಕು ಸಂಘಟನೆ ಹಾಗೂ ಪಾವಗಡ ತಾಲ್ಲೂಕು ಸಮಗ್ರ ಸೇವಾ ಅಭಿವೃದ್ಧಿ ಟ್ರಸ್ಟ್ ಸಹಭಾಗಿತ್ವದಲ್ಲಿ ಗುರುವಾರ ತಾಲ್ಲೂಕಿನ ಕೋವಿಡ್ 19 ವಾರಿಯರ್ಸ್ ಗೆ ಮಾರ್ಗದರ್ಶಕರಾದ ಎಸ್.ಆರ್. ರಾಘವೇಂದ್ರ (ಪೊಲೀಸ್ ಇನ್ಸ್ಪೆಕ್ಟರ್ ಬೆಂಗಳೂರು) ಅವರ ಸಲಹೆಯಂತೆ ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಎಲ್ಲಾ ಸಿಬ್ಬಂದಿಗೆ ಪೌಷ್ಟಿಕ ಪಾನೀಯ, ಮಾಸ್ಕ್, ಸ್ಯಾನಿಟೈಸರ್, ಸಾಬೂನು ಇಎ ಸಾಮಗ್ರಿಗಳುಳ್ಳ ಕಿಟ್ ಅನ್ನು ಗೌರವಯುತವಾಗಿ ವಿತರಿಸಲಾಯಿತು.
ತಹಶೀಲ್ದಾರ್ ಕೆ.ಆರ್. ನಾಗರಾಜ್ ಅವರು ಮಾತನಾಡಿ, ನಮ್ಮ ಹಕ್ಕು ಸಂಘಟನೆ ಹಾಗೂ ಪಾವಗಡ ಸಮಗ್ರ ಸೇವಾ ಅಭಿವೃದ್ಧಿ ಟ್ರಸ್ಟ್ ಕೋವಿಡ್ 2 ನೇ ಅಲೆಯ ಸಂದಿಗ್ಧ ಸ್ಥಿತಿಯಲ್ಲಿ ವಿವಿಧ ವರ್ಗದವರಿಗೆ, ಕೊರೋನ ವಾರಿಯರ್ಸ್ ಗೆ, ಗ್ರಾಮ ಭಾಗದ ಜನತೆಗೆ ಅಗತ್ಯ ಸಹಾಯ ಸಹಕಾರ ನೀಡುತ್ತಿರುವುದು ಶ್ಲಾಘನೀಯ ಎಂದರು.

IMG 20210513 WA0010
ಆಸ್ಪತ್ರೆಗೆ ಆಮ್ಲಜನಕ ಪೂರೈಸಿ ನೂರಾರು ಸೋಂಕಿತರ ಪ್ರಾಣ ಉಳಿಸುವಲ್ಲಿ ಕಾರಣಕರ್ತರಾದ ರಾಘವೇಂದ್ರ ಅವರ ಕಾರ್ಯವನ್ನು ಮುಕ್ತ ಮನಸ್ಸಿನಿಂದ ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಮಾರ್ಗದರ್ಶಕರಾದ ಇನ್ ಸ್ಪೆಕ್ಟರ್ ಎಸ್.ಆರ್. ರಾಘವೇಂದ್ರ ಅವರು ವಾಟ್ಸಪ್ ವಾಯ್ಸ್ ಮೆಸೇಜ್ ಮುಖಾಂತರ ತಾಲ್ಲೂಕನ್ನು ಕೋವಿಡ್ ಮುಕ್ತವಾಗಿಸಲು ಹೋರಾಡುತ್ತಿದ್ದು, ನಮ್ಮ ಹಕ್ಕು ಸಂಘಟನೆ, ಪಾವಗಡ ತಾಲ್ಲೂಕು ಸಮಗ್ರ ಅಭಿವೃದ್ಧಿ ಟ್ರಸ್ಟ್ ಈ ನಿಟ್ಟಿನಲ್ಲಿ ಶ್ರಮಿಸುತ್ತಿವೆ. ಜನಗಳ ಸೇವೆ ಮಾಡುವ ಅವಕಾಶ ಸಿಕ್ಕಿರುವುದಕ್ಕೆ ನಾವೆಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದರು.
ನಮ್ಮ ಹಕ್ಕು ಸಂಸ್ಥೆಯ ಅಧ್ಯಕ್ಷ ಗಿರಿ ಫ್ಯಾಶನ್ ಗಿರೀಶ್, ಕೋವಿಡ್ ಸಂಕಷ್ಟ ಕಾಲದಲ್ಲಿ ಅಗತ್ಯವಿರುವ ಜನತೆಗೆ ಕೈಲಾದ ಸೇವೆ ಮಾಡಲಾಗುವುದು ಎಂದರು. ಕಳದ ವರ್ಷ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕೊರೋನ ಜಾಗೃತಿ ಕಾರ್ಯಕ್ರಮಗಳು ಮತ್ತು ಆಹಾರ ಕಿಟ್ ವಿತರಣಾ ಕಾರ್ಯಕ್ರಮಗಳ ನೆನಪುಗಳನ್ನು ಹಂಚಿಕೊಂಡರು.

ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಎಲ್ಲಾ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಹಾಗೂ ಪಾವಗಡ ಸರ್ಕಲ್ ಇನ್ಸ್ಪೆಕ್ಟರ್ ಹನುಮಂತಪ್ಪ ರವರು ಮತ್ತು ನಮ್ಮ ಹಕ್ಕು ಸಂಘಟನೆಯ ಉಪಾಧ್ಯಕ್ಷರು ವಿನಯ್ ಬಾಬು, ಸದಸ್ಯರಾದ ರಾಜು, ಭರತ್, ಮನೋಜ್, ಸಹರಾ ರವಿ, ನಂದೀಶ್, ಜಗದೀಶ್ ಹಾಗೂ ಸಮಗ್ರ ಸೇವಾ ಅಭಿವೃದ್ಧಿ ಟ್ರಸ್ಟ್ ನ ನಿರ್ದೇಶಕರಾದ ಶ್ರೀಧರ್ ಗುಪ್ತ, ಸದಸ್ಯರಾದ ರವಿ, ಶಶಾಂಕ್, ಗೋಪಾಲ್, ಬಜ್ಜಪ್ಪ, ಚಂದ್ರು, ಇತರರು ಭಾಗಿಯಾಗಿದ್ದರು.

ವರದಿ ಬುಲೆಟ್ ವೀರಸೇನಯಾದವ್