ಪಾವಗಡ. ಕ್ರಾಂತಿ ದಿವಸ ಆಚರಣೆ, ಬಿಜೆಪಿ
ಕಛೇರಿ ಎದುರು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪಾವಗಡ ತಾಲೂಕು ಘಟಕದಿಂದ ಪ್ರತಿಭಟನೆ. ಪಟ್ಟಣದ ಬಿಜೆಪಿ ಕಛೇರಿ ಬಳಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ಅಧ್ಯಕ್ಷ ಪೂಜಾರಪ್ಪ ನೇತೃತ್ವದಲ್ಲಿ ಪತ್ರಿಭಟನೆ ನಡೆಸಿ ನಂತರ ಕೃಷಿ ಕಾನೂನುಗಳ ಪ್ರತಿಗಳನ್ನು ಸುಟ್ಟರು.ನಂತರ ತಾಲೂಕು ಘಟಕದ ಅಧ್ಯಕ್ಷ ಪೂಜಾರಪ್ಪ ಮಾತನಾಡಿ 1974 ರಲ್ಲಿ ಜಯಪ್ರಕಾಶ್ ನಾರಾಯಣ್ ಅವರು ‘ಸಂಪೂರ್ಣ ಕ್ರಾಂತಿ’ ಎಂದು ಘೋಷಿಸಿ ಅಂದಿನ ಕೇಂದ್ರ ಸರ್ಕಾರದ ವಿರುದ್ಧ ಬೃಹತ್ ಆಂದೋಲನವನ್ನು ಪ್ರಾರಂಭಿಸಿದ್ದರು. ಅದೇ ನೆನಪಿನಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಹೊಸ ಕೃಷಿ ಕಾಯ್ದೆಗಳ ಪ್ರತಿಗಳನ್ನು ಸುಟ್ಟು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ 1974ರ ಜೂನ್ 5ರಂದು ಪಾಟ್ನಾದ ಗಾಂಧಿ ಮೈದಾನದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಜಯಪ್ರಕಾಶ್ ನಾರಾಯಣ್ ಅವರು ಬಿಹಾರದ ಜನರಿಗೆಸಂಪೂರ್ಣ ಕ್ರಾಂತಿ ದಿವಸ್’ ಎಂದು ಆಚರಿಸಿಲು ಕರೆ ನೀಡಿದ್ದರು. ಹೊಸ ಸಾಮಾಜಿಕ ವ್ಯವಸ್ಥೆ ರೂಪಿಸಲು ಪ್ರತಿ ಹಳ್ಳಿಯಲ್ಲೂ `ಜನತಾ ಸರ್ಕಾರ್’ ರಚಿಸಿದ್ದರು.ಇಂದುಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳು ರೈತರನ್ನು ಶೋಷಿಸಲಿವೆ. ಅಲ್ಲದೆ, ಈ ಮೂಲಕ ಖಾಸಗಿ ಕಂಪೆನಿಗಳು ಲಾಭ ಮಾಡಿಕೊಳ್ಳಲಿವೆ ರೈತರು ಕಳೆದ ಸೆಪ್ಟೆಂಬರ್ ತಿಂಗಳಿನಿಂದ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಅಲ್ಲದೆ, ಹರಿಯಾಣ, ಪಂಜಾಬ್ ರೈತರು ಸತತ ಒಂದು ಅನೇಕ ತಿಂಗಳಿನಿಂದ ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೆ, ಈ ಕಾಯ್ದೆಗಳನ್ನು ಕೂಡಲೆ ಹಿಂಪಡೆದು, ರೈತರಿಗೆ ಕನಿಷ್ಟ ಬೆಂಬಲ ಬೆಲೆ ಖಾತರಿ ನೀಡಿ ಎಂದು ಆಗ್ರಹಿಸುತ್ತಿದ್ದಾರೆ. ಆದರೆ, ಸರ್ಕಾರ ಈವರೆಗೆ ರೈತರ ಕೋರಿಕೆಗೆ ಕಿವಿಗೊಡುತ್ತಿಲ್ಲ. ಇದೇ ಕಾರಣಕ್ಕೆ ರೈತ ಮುಖಂಡರು ಜೂನ್ 5 ಅನ್ನು ಕ್ರಾಂತಿ ದಿವಸವನ್ನಾಗಿ ಆಚರಿಸಲು ಮುಂದಾಗಿವೆ ಎಂದು ಹೇಳಿದರು ಈ ಸಂದರ್ಭದಲ್ಲಿ ಅನ್ನಪೂರ್ಣಮ್ಮ. ಕಾರ್ಯದರ್ಶಿ:-ಕೆ.ಶಿವರಾಜು ಬಿ.ದೊಡ್ಡಹಟ್ಟಿ
ಸದಸ್ಯರು ಪೂಜಾರಿ ಚಿತ್ತಯ್ಯ ಕೃಷ್ಣಗಿರಿ, ವಿಜಯರಾಜು ಮುಗುದಾಳಬೆಟ್ಟ,ಪಾತಣ್ಣ,ನಿಡಗಲ್ ಹೋಬಳಿ ಅಧ್ಯಕ್ಷ ಮುದ್ದವೀರಪ್ಪ ಸಿದ್ದಪ್ಪ,ಜಂಪಯ್ಯ ಹಾಗೂ ಇನ್ನೂ ಮುಂತಾದವರು ಉಪಸ್ಥಿತರಿದ್ದರು
ವರದಿ: ಬುಲೆಟ್ ವೀರಸೇನಯಾದವ್