ಉತ್ತಮ ಗುಣಮಟ್ಟದ ಬಿತ್ತನೆ ಬೀಜ ಶಾಸಕ ವೆಂಕಟರಮಣಪ್ಪ
ಪಾವಗಡ : ಮುಂಗಾರು ಹಂಗಾಮು ಪ್ರಾರಂಭವಾಗಿದ್ದು, ರೈತರಿಗೆ ಉತ್ತಮ ಗುಣಮಟ್ಟದ ಶೇಂಗಾ ಬಿತ್ತನೆ ಬೀಜ ಉತ್ತಮ ಬೆಳೆ ಬೆಳೆಯಿರಿ ಶಾಸಕ ವೆಂಕಟರಮಣಪ್ಪ. ರೈತರಿಗೆ ಬಿತ್ತನೆ ಬೀಜ ವಿತರಣೆ ಮಾಡುವ ಮುನ್ನ ಬಿತ್ತನೆ ಬೀಜ ಪರೀಕ್ಷಿಸಿ ನಂತರ ವಿತರಣೆ ಕಾರ್ಯಕ್ರಮ ನಡೆಯಿತು ಈ ಸಂದರ್ಭದಲ್ಲಿ ಮಾತನಾಡಿದ ಅವರು ಉತ್ತಮ ಬಿತ್ತನೆ ಬೀಜ ರೈತರು ತೆಗೆದುಕೊಂಡು ಹೋಗಿ ಉತ್ತಮ ಬೆಳೆ ಬೆಳೆಯಿರಿ
ಒಂದು ವೇಳೆ ಕಳಪೆಯಾಗಿದ್ದರೆ ಅವುಗಳನ್ನು ತಿರಸ್ಕರಿಸಿ. ರೈತರಿಗೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜ ನಾನು ಪರೀಕ್ಷೆ ನಡೆಸಿದ್ದೇನೆ ನಿಮಗೆ ಇಷ್ಟವಾದ ನಂತರ ತೆಗೆದುಕೊಂಡು ಹೋಗಿ
ಪಟ್ಟಣದ ಎ.ಪಿ.ಎಂ.ಸಿ ಮಾರುಕಟ್ಟೆ ಆವರಣದಲ್ಲಿ ಇಂದು ಶೇಂಗಾ ಬೀಜ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕರಾದ ವೆಂಕಟರಮಣಪ್ಪ ನವರು ಶೇಂಗಾವನ್ನು ಕೆ-6 ಮತ್ತು
tmv -2 ಮಾದರಿ ಶೇಂಗಾವನ್ನು ಪರಿಶೀಲನೆ ಮಾಡಿ ನಾನು ಒಬ್ಬ ರೈತನ ಮಗನಾಗಿ ಶೇಂಗಾ ಬೀಜ ವಿತರಣೆ ಪರಿಕ್ಷೆ ಮಾಡಿ ನಂತರ ವಿತರಣೆ ಕಾರ್ಯಕ್ರಮ ಮಾಡುತ್ತೇನೆ
, ಈ ಶೇಂಗಾದಲ್ಲಿ ಉತ್ತಮವಾಗಿದ್ದು ಹಾಗೂ ಮಾರುಕಟ್ಟೆ ಸಿಗುವ ಬೆಲೆಗಿಂತಲೂ ಹೆಚ್ಚಿನ ಬೆಲೆಯಾಗಿದ್ದು.ಮಾರುಕಟ್ಟೆಯಲ್ಲಿ ಒಂದು ಕ್ವಿಂಟಲ್ 6500 ರೂ ಗೆ ಸಿಗುತ್ತದೆ ಸರ್ಕಾರ ವತಿಯಿಂದ ಬಂದ ಸಬ್ಸಿಡಿಯಿಂದಲೂ 6800 ರೂ ಗಳು ಆಗುತ್ತದೆ ಈತರಹದ ಶೇಂಗಾವನ್ನು ರೈತರಿಗೆ ಚೀಲದಲ್ಲಿ ಶೇಂಗಾ ತೋರಿಸಿ ನಂತರ ರೈತರಿಗೆ ಇಷ್ಟವಾದರೆ ಕೊಡಿ ಎಂದು ಕೃಷಿ ಅಧಿಕಾರಿಗಳಿಗೆ ತಿಳಿಸಿದರು. ಈ ಸಂದರ್ಭದಲ್ಲಿ ,ರೈತ ಸಂಘದ ಅಧ್ಯಕ್ಷರಾದ ಪೂಜಾರಪ್ಪ ನರಸಿಂಹ ರೆಡ್ಡಿ. ಕೃಷ್ಣ ರಾವ್. ಹಾಗೂ ಪದಾಧಿಕಾರಿಗಳು ಪುರಸಭಾ ಸದಸ್ಯರಾದ ಬಾಲ ಸುಬ್ರಹ್ಮಣ್ಯಂ. ರವಿ ಸುದೇಶ್ ಬಾಬು ರಾಜೇಶ್ ಎಪಿಎಂಸಿ ಮಾಜಿ ಉಪಾಧ್ಯಕ್ಷರಾದ ಶಿವಮೂರ್ತಿ ನಾಗಭೂಷಣ್, ರಮೇಶ್ ರೈತ ಸಂಘದ ಪದಾಧಿಕಾರಿಗಳು ರೈತರು ಕೃಷಿ ಇಲಾಖೆ ಸಿಬ್ಬಂದಿ ಹಾಜರಿದ್ದರು