IMG 20211220 WA0021

ಪಾವಗಡ: ಅಂತಾರಾಷ್ಟ್ರೀಯ ಕರಾಟೆಯಲ್ಲಿ ದೇಶಕ್ಕೆ ಗೋಲ್ಡ್ ಮೆಡಲ್ ತಂದ ನಮ್ಮೂರ ಕುವರಿ…!

DISTRICT NEWS ತುಮಕೂರು

ಪಾವಗಡದ ಚಿನ್ನದ ಹುಡುಗಿ….
ದೆಹಲಿಯಲ್ಲಿ ನಡೆದಂತಹ ಅಂತಾರಾಷ್ಟ್ರೀಯ ಕರಾಟೆಯಲ್ಲಿ ಕೊರಿಯಾ ವಿರುದ್ಧ ಗೆದ್ದು ದೇಶಕ್ಕೆ ಗೋಲ್ಡ್ ಮೆಡಲ್ ಪಡೆದ ಪಾವಗಡದ ನಾಗಚಂದ್ರ ಅವರ ಪುತ್ರಿ ನಿಹಾರಿಕಾ ಜೈನ್ ಅವರಿಗೆ ಹೆಲ್ಪ್ ಸೊಸೈಟಿ ರೋಟರಿ ಸಂಸ್ಥೆ ಬ್ರೈಟ್ ಫ್ಯೂಚರ್ ಸ್ಕೌಟ್ಸ್&ಗೈಡ್ಸ್ ವತಿಯಿಂದ ಸನ್ಮಾನ..

ಇಂದು ಪಾವಗಡ ಪಟ್ಟಣದ ಬ್ರೈಟ್ ಫ್ಯೂಚರ್ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಪಾವಗಡದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದ ನಿಹಾರಿಕಾ ಅವರನ್ನ ಸಂಘ ಸಂಸ್ಥೆಗಳ ವತಿಯಿಂದ ಸತ್ಕರಿಸಿ ಸನ್ಮಾನಿಸಲಾಯಿತು.

ಇದೇ ವೇಳೆ ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸ್ಕೌಟ್ಸ್&ಗೈಡ್ಸ್ ನ ಮುಖ್ಯಸ್ಥರಾದ ಕಮಲ್ ಬಾಬು ಅವರು ನಿಹಾರಿಕಾ ಜೈನ್ ಅವರಂತಹ ಅದೆಷ್ಟೋ ಪ್ರತಿಭೆಗಳು ನಮ್ಮ ಪಾವಗಡ ತಾಲ್ಲೂಕಿನಲ್ಲಿ ಇದ್ದು ಇಂತಹ ಪ್ರತಿಭೆಗಳನ್ನು ಗುರುತಿಸಲು ಸರ್ಕಾರ ಮತ್ತು ಇಲ್ಲಿನ ಆಡಳಿತ ಮುಂದಾಗಬೇಕು ಎಂದು ಇದೇ ವೇಳೆ ಅವರು ತಿಳಿಸಿದರು..

ಇದೇ ವೇಳೆ ರೋಟರಿ ಮಾಜಿ ಅಧ್ಯಕ್ಷರಾದ ವಿಶ್ವನಾಥ್ ಅವರು ಮಾತನಾಡಿ ಇಂತಹ ಪ್ರತಿಭೆಗಳನ್ನು ಗುರುತಿಸಿ ಇವತ್ತು ಇಲ್ಲಿ ಸನ್ಮಾನ ಮಾಡುತ್ತಿರುವುದು ಶ್ಲಾಘನೀಯ ಮತ್ತು ಇಂತಹ ಪ್ರತಿಭೆಗಳನ್ನು ಗುರುತಿಸಿ ಪಾವಗಡ ತಾಲ್ಲೂಕಿನ ಜನತೆ ಮತ್ತು ಮಕ್ಕಳಿಗೆ ನಿಹಾರಿಕಾ ಸ್ಫೂರ್ತಿದಾಯಕ ಆಗಿರುತ್ತಾರೆ..

ಸನ್ ರೈಸ್ ಆಸ್ಪತ್ರೆಯ ಮುಖ್ಯಸ್ಥರಾದ ಡಾಕ್ಟರ್ ಶ್ರೀಕಾಂತ್ ಅವರು ಮಾತನಾಡಿ ಮಕ್ಕಳಲ್ಲಿ ಆರೋಗ್ಯ ಮತ್ತು ಕುಟುಂಬ ಕ್ಷೇಮವಾಗಿದ್ದರೆ ತಮ್ಮ ಮಕ್ಕಳನ್ನ ಎಷ್ಟು ಎತ್ತರಕ್ಕೆ ಬೇಕಾದರೂ ಕೊಂಡೊಯ್ಯಬಹುದು ಎಂದು ಅವರು ತಿಳಿಸಿದರು..

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು ಶ್ರೀಧರ್ ಗುಪ್ತಾ ಅವರು ಮಾತನಾಡಿ ಆಕಾಶದಲ್ಲಿ ಹಲವು ನಕ್ಷತ್ರಗಳಿರುತ್ತವೆ ಆದರೆ ಅದರಲ್ಲಿ ಕೆಲವು ನಕ್ಷತ್ರಗಳು ಮಾತ್ರ ಮಿನುಗುತ್ತವೆ ಅಂತಹ ಮಿನುಗುತಾರೆ ಯೇ ನಿಹಾರಿಕಾ ಜೈನ್ ಎಂದು ನಿಹಾರಿಕ ಜೈನ್ ಅವರನ್ನು ಹಾಡಿ ಹೊಗಳಿದ್ದಾರೆ.

ಇನ್ನೂ ಈ 1ಕಾರ್ಯಕ್ರಮದಲ್ಲಿ ಹೆಲ್ಪ್ ಸೊಸೈಟಿ ಅಧ್ಯಕ್ಷರಾದ ಮಾನಂಶಶಿಕಿರಣ್ ಬ್ರೈಟ್ ಫ್ಯೂಚರ್ ಮತ್ತು ರೋಟರಿ ಸಂಸ್ಥೆ ಅಧ್ಯಕ್ಷರಾದ ಜಿ ಶ್ರೀಧರ್ ಗುಪ್ತಾ ಸ್ಕೌಟ್ಸ್&ಗೈಡ್ಸ್ ನ ಅಧ್ಯಕ್ಷರಾದ ಕಮಲ್ ಬಾಬು ರೋಟರಿ ಮಾಜಿ ಅಧ್ಯಕ್ಷರುಗಳಾದ ವಿಶ್ವನಾಥ್ ಗುರ್ತಿ ನಾಗರಾಜು ಕನ್ನಮೇಡಿ ಲೋಕೇಶ್ ದಾಸಮ್ ಗೋಪಾಲಕೃಷ್ಣ ಮತ್ತು ನಿಹಾರಿಕ ಅವರ ತಂದೆ ನಾಗಚಂದ್ರ ಜೆ ತಾಯಿ ಜೈ ಪದ್ಮಾ ಜೈನ್ ಅವರು ಸೇರಿ ಮತ್ತು ಬ್ರೆಡ್ ಚೀಸನ್ನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಇದೇ ವೇಳೆ ಹಾಜರಿದ್ದರು.

ವರದಿ: ಶ್ರೀನಿವಾಸುಲು ಎ