ಅಕ್ರಮ ಮಣ್ಣು ಸಾಗಾಣಿಕೆ ತಡೆಯುವಂತೆ ಆಗ್ರಹ…
ಪಾವಗಡ…. ತಾಲೂಕಿನಾದ್ಯಂತ ಕೆರೆಗಳಿಂದ ಅಕ್ರಮವಾಗಿ ಮಣ್ಣು ತೆಗೆದು ಮಾರಾಟ ಮಾಡುವ ಜಾಲವನ್ನು ಬಂದಿಸಿ ಕೆರೆಗಳನ್ನು ರಕ್ಷಣೆ ಮಾಡಬೇಕೆಂದು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘದ ಪದಾಧಿಕಾರಿಗಳು ತಹಶೀಲ್ದಾರ್ ಕಚೇರಿ ಮುಂಂದೆ ಪ್ರತಿಭಟನೆ ನಡೆಸಿದರು. ತಾಲೂಕಿನ ಗುಂಡ್ಲಹಳ್ಳಿಕೆರೆ ಸೇರಿದಂತೆ ವಿವಿಧ ಕೆರೆಗಳಿಂದ ಜೆಸಿಬಿ, ಟ್ರಾಕ್ಟರ್, ಟಿಪ್ಪರ್ ಬಳಸಿ ಮಣ್ಣನ್ನು ಅಕ್ರಮವಾಗಿ ಸಾಗಿಸುವಂತಹವರ ಹೋರಾಟ ಮಾಡುವುದಾಗಿ ರೈತ ಸಂಘದ ಪೂಜಾರಪ್ಪಪ ತಿಳಿಸಿದರು. ಈ ರೀತಿ ಅಕ್ರಮವಾಗಿ ಕೆರೆಗಳಲ್ಲಿ ಮಣ್ಣು ತೆಗೆಯುವರಿಂದ ಬೃಹತ್ ಗಾತ್ರದ ಕಂದಕಗಳು ಏರ್ಪಾಟು, ಅದೇ ಗುಂಡಿಗಳಿಗೆ ಕಾಲು ಜಾರಿ ಬಿದ್ದು ಮರಣ ಹೊಂದಿದ ಘಟನೆಗಳು ತಾಲೂಕಿನಲ್ಲಿ ನಡೆದಿದೆ ಎಂದು. ಹೆಚ್ಚಿಗೆ ಮಳೆ ಬಂದರೂ ಕೆರೆಗಳಲ್ಲಿ ನೀರು ಸಂಗ್ರಹವಾಗದೆ ನೀರಿನ ಮಟ್ಟ ಕುಸಿಯುತ್ತದೆ ಎಂದರು. ಭದ್ರಾ ಮೇಲ್ದಂಡೆ ಯೋಜನೆಯ ನೀರನ್ನು ಕೆರೆಗಳಿಗೆ ತುಂಬಿಸುವ ಯೋಜನೆ ಪ್ರಗತಿಯಲ್ಲಿದ್ದು, ಕೆರೆಗಳು ಹಾಳಾದಲ್ಲಿ ಕೆರೆ ತುಂಬಿಸುವುದೂ ಕಷ್ಟಸಾಧ್ಯವಾಗುತ್ತದೆ. ಕೆರೆಯಲ್ಲಿ ಅವೈಜ್ಞಾನಕವಾಗಿ, ಮಣ್ಣು, ಮರಳನ್ನು ಸಾಗಿಸುವುದನ್ನು ನಿಯಂತ್ರಿಸದಿದ್ದಲ್ಲಿ ಪರಿಸರ ಅಸಮತೋಲನ ಉಂಟಾಗುತ್ತದೆ ಎಂದು ಆರೊಪಿಸಿದರು.ಕರ್ನಾಟ ರಾಜ್ಯ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಪುಜಾರಪ್ಪ, ಪದಾಧಿಕಾರಿಗಳಾದ ಪೆದ್ದಪ್ಪ, ನರಸಣ್ಣ, ಪೂಜಾರಿ ಚಿತ್ತಯ್ಯ ಉಪಸ್ಥಿತರಿದ್ದರು.
ವರದಿ: ಶ್ರೀನಿವಶಸಲು ಎ