ಕ್ರೀಡಾಕೂಟ. ವಿಭಾಗೀಯ ಮತ್ತು ರಾಜ್ಯಮಟ್ಟಕ್ಕೆ ಆಯ್ಕೆ.
ಪಾವಗಡ : ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ 2023-24ನೇ ಸಾಲಿನ ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಏರ್ಪಡಿಸಲಾಗಿದ್ದು.
ಮಧುಗಿರಿ, ಕೊರಟಗೆರೆ, ಶಿರಾ, ಪಾವಗಡ ತಾಲ್ಲೂಕು ಗಳಿಂದ ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.
ಪಾವಗಡ ತಾಲ್ಲೂಕಿನ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ವಿಭಾಗಿಯ ಮಟ್ಟ ಮತ್ತು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ರಾಜ್ಯಮಟ್ಟಕ್ಕೆ ಆಯ್ಕೆ.
ತಾಲ್ಲೂಕಿನ ಕೃಷ್ಣಾಪುರದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಟೇಬಲ್ ಟೆನ್ನಿಸ್ ಕ್ರೀಡೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಸಾಧನೆ ಮಾಡಿದ ವಿದ್ಯಾರ್ಥಿನಿಯರಾದ ಗಂಗೋತ್ರಿ, ಶಾರದಾ, ದುರ್ಗಾ, ಬಿಂದು, ಮಾದವಿ ,ಗೌತಮಿ ಹಾಗೂ ದೈಹಿಕ ಶಿಕ್ಷಕರಾದ ನರಸಿಂಹಮೂರ್ತಿಯವರನ್ನು ಶಾಲೆಯ
ಮುಖ್ಯ ಶಿಕ್ಷಕಿ ಲಕ್ಷ್ಮೀ ನರಸಮ್ಮ ಹಾಗೂ ಶಿಕ್ಷಕರು ಅಭಿನಂದಿಸಿದರು.
ವಿಭಾಗೀಯ ಮಟ್ಟಕ್ಕೆ ಆಯ್ಕೆ.
ಪಾವಗಡ ತಾಲ್ಲೂಕಿನ ಕೆ.ಟಿ ಹಳ್ಳಿಯ ಶ್ರೀರಾಮ ಗ್ರಾಮಾಂತರ ಪ್ರೌಢ ಶಾಲೆಯ ವಿದ್ಯಾರ್ಥಿನಿಯರು ಹೆಣ್ಣು ಮಕ್ಕಳ ಕಬಡ್ಡಿ ಪಂದ್ಯದಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ವಿಭಾಗಿಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಸಾಧನೆ ಮಾಡಿದ ವಿದ್ಯಾರ್ಥಿನಿಯರಾದ ತನುಜ, ಭೂಮಿಕ, ಶಾಂತಿ, ಲಕ್ಷ್ಮಿ ,ಪಲ್ಲವಿ ,ಲಾವಣ್ಯ, ರಾಧಿಕಾ ರವರನ್ನು ಮತ್ತು ದೈಹಿಕ ಶಿಕ್ಷಕರಾದ ಮಂಜುನಾಥ್ ರವರನ್ನು ಮುಖ್ಯ ಶಿಕ್ಷಕ ನಾಗರಾಜು ಟಿ ಮತ್ತು ಸಹ ಶಿಕ್ಷಕರು ಅಭಿನಂದಿಸಿದರು.
ಎಂ.ಜಿ.ಎಂ ಅರಸೀಕೆರೆ ಪ್ರೌಢಶಾಲೆ.
ತಾಲ್ಲೂಕಿನ ಎಂ. ಜಿ .ಎಂ ಅರಸೀಕೆರೆಯ ಪ್ರೌಢ ಶಾಲೆಯ ವಿದ್ಯಾರ್ಥಿನಿಯರು ಹೆಣ್ಣು ಮಕ್ಕಳ ಕೋಕೋ ಪಂದ್ಯದಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಸಾಧನೆ ಮಾಡಿದ ವಿದ್ಯಾರ್ಥಿನಿಯರಾದ ರಮ್ಯ, ನೇತ್ರಾವತಿ, ಶಾಲಿನಿ, ರಕ್ಷಿತಾ ,ನಾಗಲಕ್ಷ್ಮಿ ,ಅಮೂಲ್ಯ, ಅನಿತಾ ಲಕ್ಷ್ಮಿ, ಶಿವಮ್ಮ ,ಶಿಲ್ಪ ರವರನ್ನು ಮತ್ತು ದೈಹಿಕ ಶಿಕ್ಷಕರಾದ ಪ್ರಕಾಶ್ ಚಾರ್ ರವರನ್ನು ಮುಖ್ಯ ಶಿಕ್ಷಕರಾದ ಹನುಮಂತರಾಯಪ್ಪ ಮತ್ತು ಸಹ
ಶಿಕ್ಷಕರು ಅಭಿನಂದಿಸಿದರು.
ಕರ್ನಾಟಕ ಪಬ್ಲಿಕ್ ಶಾಲೆ ತಿರುಮಣಿ.
ಪಾವಗಡ ತಾಲ್ಲೂಕಿನ ತಿರುಮಣಿಯ ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಬಾಲಕರ ಶಟಲ್ ವಿಭಾಗದಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಸಾಧನೆ ಮಾಡಿದ ವಿದ್ಯಾರ್ಥಿಗಳಾದ ಶಶಾಂಕ್, ಮನೋಹರ್ ರೆಡ್ಡಿ ,ವಂಶಿಕೃಷ್ಣ ,ಗೌತಮ್ ಮತ್ತು
ದೈಹಿಕ ಶಿಕ್ಷಕಿ ಸರೋಜಮ್ಮ ರವರನ್ನು ಶಾಲೆಯ ಮುಖ್ಯ ಶಿಕ್ಷಕ ಮಾದವರೆಡ್ಡಿ ಮತ್ತು ಸಹ ಶಿಕ್ಷಕರು ಅಭಿನಂದಿಸಿದರು.
ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಜಯಗಳಿಸಿ ತಾಲ್ಲೂಕಿನ ಕೀರ್ತಿಪತಾಕೆಯನ್ನು ಹಾರಿಸಿದ ಶಾಲೆಗಳ ಮುಖ್ಯ ಶಿಕ್ಷಕರಿಗೆ ಹಾಗೂ ದೈಹಿಕ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅಶ್ವಥ್ ನಾರಾಯಣ ಮತ್ತು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಬಸವರಾಜು ರವರು ಅಭಿನಂದನೆ ತಿಳಿಸಿದ್ದಾರೆ..
ವರದಿ. ಶ್ರೀನಿವಾಸಲು.ಎ