ವಿಧಾನ ಪರಿಷತ್ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿ..
ಪಾವಗಡ ಡಿ 14: – ತುಮಕೂರು ಕ್ಷೇತ್ರದ ವಿಧಾನಪರಿಷತ್ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು. ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಕಾಂಗ್ರೆಸ್ ನ ಅಭ್ಯರ್ಥಿ ರಾಜೇಂದ್ರ ರಾಜಣ್ಣ 2250 ವೋಟುಗಳನ್ನು ಗಳಿಸುವ ಮೂಲಕ ಜಯಶೀಲರಾಗಿದ್ದಾರೆ. ಬಿಜೆಪಿ ಅಭ್ಯರ್ಥಿಯಾದ ಲೋಕೇಶ್ ಗೌಡ 1757 ಮತಗಳನ್ನು ಪಡೆದಿದ್ದಾರೆ. ಹಾಗೂ ಜೆಡಿಎಸ್ ಅಭ್ಯರ್ಥಿಯ ಅನಿಲ್ ಕುಮಾರ್ ಆರ್ 1296 ಮತಗಳನ್ನು ಗಳಿಸಿದ್ದಾರೆ ಎಂದು ರಿಟರ್ನಿಂಗ್ ಆಫೀಸರ್ Y.S ಪಾಟೀಲ್ ರವರು ಫಲಿತಾಂಶ ಘೋಷಿಸಿದ್ದಾರೆ.
ಫಲಿತಾಂಶದ ನಂತರ ವಿಧಾನಪರಿಷತ್ ಕಾಂಗ್ರೆಸ್ ಅಭ್ಯರ್ಥಿಯಾದ ರಾಜೇಂದ್ರ ರಾಜಣ್ಣ ಮಾತನಾಡುತ್ತಾ. ತನ್ನ ಈ ಗೆಲುವಿಗೆ ಕಾರಣರಾದ ತುಮಕೂರಿನ ಎಲ್ಲಾ ಕಾಂಗ್ರೆಸ್ ಶಾಸಕರಿಗೆ. ಹಾಗೂ ಎಲ್ಲಾ ಗ್ರಾಮ ಪಂಚಾಯಿತಿ ಸದಸ್ಯರಿಗೆ ಮತ್ತು ಪುರಸಭಾ ಸದಸ್ಯರಿಗೆ.ಮುಖ್ಯವಾಗಿ ಪಾವಗಡ ತಾಲೂಕಿನ ಶಾಸಕರಾದ ವೆಂಕಟರವಣಪ್ಪ ಹೆಚ್. ವಿ .ವೆಂಕಟೇಶ್ ಹಾಗೂ ಪಾವಗಡ ತಾಲೂಕಿನ ಎಲ್ಲಾ ಕಾಂಗ್ರೆಸ್ ಮುಖಂಡರಿಗೆ ಹೃತ್ಪೂರ್ವಕವಾದ ಧನ್ಯವಾದಗಳನ್ನು ತಿಳಿಸಿದರು.
ಇದು ನನ್ನ ಗೆಲುವಲ್ಲ ಕಾಂಗ್ರೆಸ್ ಕಾರ್ಯಕರ್ತರ ಎಲ್ಲರ ಗೆಲುವು ಎಂದರು ರಾಜೇಂದ್ರ
ತುಮಕೂರು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷರಾದ ಷಾ ಬಾಬು ರವರು ಮಾತನಾಡುತ್ತಾ… ತುಮಕೂರು ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸುತ್ತದೆ ಎಂದು. 10/12/21 ರಂದು ಚುನಾವಣೆಯ ದಿನವೇ ಸಪ್ತಸ್ವರ ಪತ್ರಿಕೆಗೆ ಮಾಹಿತಿ ನೀಡಿದ್ದು ಇಂದು ಅದು ನಿಜವಾಗಿದೆ ಎಂದು ನುಡಿದರು. ಈ ಫಲಿತಾಂಶವುಕಾಂಗ್ರೆಸ್ ಪಕ್ಷಕ್ಕೆ ಹಾಗೂ ಕಾರ್ಯಕರ್ತರಿಗೆ ಹೆಚ್ಚಿನ ಉತ್ಸಾಹ ನೀಡಿದೆ ಎಂದರು.
ವರದಿ: ಶ್ರೀನಿವಾಸುಲು ಎ