IMG 20230824 WA0002 1

ಮಧುಗಿರಿ‌: ಸರ್ಕಾರಿ ಸವಲತ್ತುಗಳನ್ನುತಲುಪಿಸುವುದೇ ನಮ್ಮ ಗುರಿ…!

DISTRICT NEWS ತುಮಕೂರು

ನಮ್ಮ ಸರ್ಕಾರ ಸಾರ್ವಜನಿಕರಿಗೆ ಸರ್ಕಾರದ ಸದುದ್ದೇಶ ಸರ್ಕಾರದ ಸೌಲತ್ತುಗಳನ್ನು ಅರ್ಹರನ್ನು ಗುರುತಿಸಿ ಜಾತ್ಯಾತೀತವಾಗಿ ಪಕ್ಷಾತೀತವಾಗಿ ಬಡವರಿಗೆ ಸರ್ಕಾರಿ ಸವಲತ್ತುಗಳನ್ನುತಲುಪಿಸುವುದೇ ನಮ್ಮ ಗುರಿ ಎಂದ ಸಚಿವ ಕೆ. ಎನ್ ರಾಜಣ್ಣನವರು

ಮಧುಗಿರಿ ತಾಲೂಕು ಐಡಿ ಹಳ್ಳಿ ಹೋಬಳಿಯ ದೊಡ್ಡದಾಳುವಾಟ ಗ್ರಾಮದಲ್ಲಿ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ತದನಂತರ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಆಯೋಜನೆ ಮಾಡಿದ್ದ ಮನೆಮನೆಗೆ ನಲ್ಲಿ ಸಂಪರ್ಕ 266 ಮನೆಗಳ ನಲ್ಲಿ ಸಂಪರ್ಕ ಯೋಜನೆಗೆ ಸಹಕಾರಿ ಸಚಿವ ಕೆ. ಎನ್. ರಾಜಣ್ಣನವರು ಹಾಗೂ ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಶಾಂತಲಾ ರಾಜಣ್ಣನವರು ಸಹಾಯಕ ಪಾಲಕ ಇಂಜಿನಿಯರ್ ಲೋಕೇಶ್ವರ್ ಮುಖಂಡರಾದ ಚಿನ್ನಪ್ಪಯ್ಯ ಮಾಜಿ ಅಧ್ಯಕ್ಷರಾದ ಪ್ರಜ್ವಲ್ ಶಂಕರ್ ವೆಂಕಟೇಶ್ ರೆಡ್ಡಿ ಶಂಕುಸ್ಥಾಪನೆ ಮಾಡಿದರು. ತದನಂತರಐ.ಡಿ.ಹಳ್ಳಿಯಲ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಣ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮೊಟ್ಟೆ ಮತ್ತು ಬಾಳೆಹಣ್ಣು ಚಕ್ಕೆ ವಿತರಿಸಿ ಮಾತನಾಡಿದ ಸಚಿವ ಕೆ .ಎನ್ .ರಾಜಣ್ಣ ನವರು ಈಗ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ತುಂಬಾ ಅದೃಷ್ಟವಂತರು ಸರ್ಕಾರಿನಿಂದ ಅವರಿಗೆ ಏನೆಲ್ಲಾ ಸೋಲತ್ತುಗಳು ಅವರಿಗೆ ತಲುಪುತ್ತೇವೆ ಅವರ ಉತ್ತಮ ವಿದ್ಯಾಭ್ಯಾಸ ಮಾಡಿದ್ದೆ ಆದಲ್ಲಿ ಅವರ ತಂದೆ ತಾಯಿಗಳಿಗೆ ಹಾಗೂ ಗುರುಗಳಿಗೆ ಒಳ್ಳೆಯ ಕೀರ್ತಿ ಬರುತ್ತದೆ ನಾವು ಓದಬೇಕಾದಂತಹ ಸಂದರ್ಭದಲ್ಲಿ ಇಂತಹ ಸವಲತ್ತುಗಳು ಯಾವುವು ಸಹ ನಮಗೆ ದೊರಕಿರುವುದಿಲ್ಲ ನಾವು ಬರೆಯಬೇಕಾದರೆ ಬರೆದಿರುವುದನ್ನು ಅಳಿಸಬೇಕಾದರೆ ತೊಂಡೆ ಸೊಪ್ಪಿನಿಂದ ಅಳಿಸಬೇಕಾಯಿತು ನಮಗೆ ಯಾವುದೇ ಶೋಗಳು ಕಾಲಿಗೆ ಚಪ್ಪಲಿ ಸಹ ಇರುತ್ತಿರಲಿಲ್ಲ ಅಂತದ್ರಲ್ಲಿ ನಾವು ವಿದ್ಯಾಭ್ಯಾಸ ಮಾಡಿಕೊಂಡು ಈ ಮಟ್ಟಕ್ಕೆ ಬಂದಿದ್ದೇವೆ ಇದೇ ಶಾಲೆಯಲ್ಲಿ ಓದಿದಂತಹ ರಾಮದಾಸ್ರವರು ಕೂಡ ರಾಜ್ಯದ ಅಧಿಕಾರಿಯಾಗಿ ಅಧಿಕಾರ ಅನುಭವಿಸಿದ್ದಾರೆ ಮತ್ತು ಸುರೇಶ್ ರೆಡ್ಡಿ ಅವರು ಕೂಡ ಇದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಕಾರ್ಯ ಪಾಲಕ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಅವರಂತೆ ಕೂಡ ತಾವುಗಳು ಸಹ ಹೆಚ್ಚಿನ ವಿದ್ಯಾಭ್ಯಾಸ ಮಾಡಿ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕೆಂದು ಈ ಸಂದರ್ಭದಲ್ಲಿ ಆಶಿಸುತ್ತೇನೆ ಎಂದರು.

IMG 20230824 WA0001

ಕರ್ನಾಟಕ ಸರ್ಕಾರದ ಆದೇಶದಂತೆ ಜಿಲ್ಲಾ ಆಡಳಿತ ಹಾಗೂ ತಾಲೂಕ್ ಆಡಳಿತ ವತಿಯಿಂದ ದಿನಾಂಕ 23.08.2023 ರಂದು ಐ.ಡಿ ಹಳ್ಳಿ ಹೋಬಳಿಯ ಐ.ಡಿ.ಹಳ್ಳಿ ಗ್ರಾಮದಲ್ಲಿ ಜನಸಂಪರ್ಕ ಸಭೆಯನ್ನು ಏರ್ಪಡಿಸಲಾಗಿತ್ತು. ಜನಸಂಪರ್ಕ ಸಭೆಯಲ್ಲಿ ಭಾಗವಹಿಸಿ ಪ್ರಸ್ತಾವಿಕ ನುಡಿಗಳ ನಾಡಿದ ಜಿಲ್ಲಾಧಿಕಾರಿ ಕೆ ಶ್ರೀನಿವಾಸರವರು ಇಂದು ನಡೆಯುತ್ತಿರುವ ಜನ ಸಂಪರ್ಕ ಸಭೆ ಎಲ್ಲಾ ಹೋಬಳಿಗಳ ಮಟ್ಟದಲ್ಲಿ ತಾಲೂಕು ಮಟ್ಟದಲ್ಲಿ ಜಿಲ್ಲಾ ಮಟ್ಟದಲ್ಲಿ ನಡೆಸಬೇಕು ಒಂದೇ ವೇದಿಕೆಯಲ್ಲಿ ಅರ್ಜಿ ಸ್ವೀಕರಿಸಿ ಅಲ್ಲಿಯೇ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹಾರ ಮಾಡಬೇಕು ಮತ್ತು ಕುಂದು ಕೊರತೆಗಳನ್ನು ಸಭೆಗಳಲ್ಲಿ ಇತ್ಯರ್ಥ ಮಾಡಿದರೆ ನಮಗೆ ಯಶಸ್ವಿ ದೊರೆಯಲಿದೆ ವಿವಿಧ ಇಲಾಖೆಗಳಿಂದ ನಿಗಮಗಳಿಂದ ಸವಲತ್ತುಗಳು ಸಕಾಲಕ್ಕೆ ಸಿಗದೇ ತೊಂದರೆಯಾಗದಂತೆ ಸೌಲಭ್ಯಗಳನ್ನು ಸಾರ್ವಜನಿಕರಿಗೆ ತಲುಪಿಸಬೇಕು ಇದು ನಮ್ಮ ಸದುದ್ದೇಶ ಎಂದು ತಿಳಿಸಿದರು.

ಜನ ಸಂಪರ್ಕ ಸಭೆಯ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿ ಮಾತನಾಡಿದ ಸಹಕಾರ ಸಚಿವ ಕೆ ಎನ್ ರಾಜಣ್ಣನವರು ಪ್ರಪ್ರಥಮ ಜನ ಸಂಪರ್ಕ ಸಭೆಯನ್ನು ಯಾಕೆ ಐಡಿ ಹಳ್ಳಿ ಹೋಬಳಿ ಗ್ರಾಮದಲ್ಲಿಯೇ ಜನಸಂಪರ್ಕ ಸಭೆಮಾಡುತ್ತಿದ್ದೇವೆ ಎಂದರೆ ಗಡಿಭಾಗಕ್ಕೆ ಸೇರಿರುವುದರಿಂದ ಸತತವಾಗಿ ಬರಗಾಲಕ್ಕೆ ತುತ್ತಾಗಿರುವುದರಿಂದ ಪ್ರಥಮ ಜನ ಸಂಪರ್ಕ ಸಭೆಯನ್ನು ಮಾಡುತ್ತಿದ್ದೇವೆ ಎಂದರು. ನನಗೆ ಈ ಸಭೆಯಿಂದ ಈ ದಿನ ಬಹಳ ಸಂತೋಷವಾಗಿದೆ ಎಲ್ಲ ಜಿಲ್ಲಾಡಳಿತದ ಅಧಿಕಾರಿಗಳು ತಾಲ್ಲೂಕ್ ಮಟ್ಟದ ಅಧಿಕಾರಿಗಳು ಹಾಜರಿದ್ದು ಜನರಿಗೆ ಮನಮುಟ್ಟು ವಂತಹ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಮಾನಗಳಲ್ಲಿಯೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನಸಂಪರ್ಕ ಸಭೆ ಮಾಡುತ್ತೇವೆ ಗ್ರಾಮ ಪಂಚಾಯತಿಯಲ್ಲಿನ ಸಮಸ್ಯೆಗಳ ನರಿತು ಪ್ರಯತ್ನ ಜವಾಬ್ದಾರಿ ಕರ್ತವ್ಯ ನಿರಂತರವಾಗಿ ನನಗೆ ತೃಪ್ತಿ ಆಗುವ ರೀತಿಯಲ್ಲಿ ಸಮಸ್ಯೆಗಳು ಪರಿಹಾರ ಮಾಡಲು ಆಗಿರುವುದಿಲ್ಲ ಎಂಬುದು ನನ್ನ ಅನಿಸಿಕೆ. ಜಿಲ್ಲಾಡಳಿತ ಕೆಲವು ಕಾರ್ಯಕ್ರಮಗಳು ರೂಪಿಸಿದೆ ಮನೆ ಇಲ್ಲದವರಿಗೆ ಮನೆ ಮಂಜೂರು ಮಾಡಿಸುವುದು ಅಂಗನವಾಡಿಗಳನ್ನು ಮಂಜೂರು ಮಾಡಿಸುವುದು ಶಾಲಾ ಕೊಠಡಿಗಳನ್ನು ಮಂಜೂರು ಮಾಡಿಸುವುದು ಶೌಚಾಲಯಗಳನ್ನು ಕಟ್ಟಿಸುವುದು ಮತ್ತು ಗ್ರಾಮಗಳಲ್ಲಿ ಸಾರ್ವಜನಿಕರಿಗೆ ಸ್ಮಶಾನವಿಲ್ಲದ ಕಡೆ ಸ್ಮಶಾನ ಜಾಗ ಮಂಜೂರು ಮಾಡಿಸುವುದು ಸರ್ವೇಸಾಮಾನ್ಯವಾಗಿದೆ. ಎಂದರೆ

ಕಳೆದ ಐದು ವರ್ಷಗಳಲ್ಲಿ ಯಾರಿಗೂ ಕೂಡ ಒಂದೇ ಒಂದು ಮನೆ ಕಟ್ಟಲು ಆಗಿರುವುದಿಲ್ಲ ನಾನು ಶಾಸಕನಿದ್ದ ಸಂದರ್ಭದಲ್ಲಿ ಸರ್ಕಾರದ ವತಿಯಿಂದ 16,400 ಮನೆಗಳನ್ನು ಮಂಜೂರುಮಾಡಿಸಿ ಗುಡಿಸಲು ಮುಕ್ತ ತಾಲೂಕನ್ನಾಗಿ ಮಾಡಿದ್ದೇನೆ. ಮತ್ತು ಯಾರಿಗೆ ಮನೆ ಇಲ್ಲ ಅವರಿಗೆ ಮನೆ ಮಂಜೂರು ಮಾಡಿಸುತ್ತೇನೆ ಯಾರು ಪಾಯ ಹಾಕಿ ಬಿಲ್ಲ ಆಗಿಲ್ಲ ಅವರಿಗೆ ಬಿಲ್ ಮಾಡಿಸುತ್ತೇನೆ ಯಾರಿಗೆ ಮನೆ ಮಂಜೂರಾತಿ ನೀಡಿದ್ದರು ಕೂಡ ಮನೆ ಪ್ರಾರಂಭ ಮಾಡಿಲ್ಲ ಅವರು ಪ್ರಾರಂಭ ಮಾಡಿದರೆ ಅವರಿಗೂ ಬಿಲ್ ಕೊಡಿಸುತ್ತೇನೆ ಎಂದು ತಿಳಿಸಿದರು.

IMG 20230824 WA0000

ಈಗಾಗಲೇ ಇಲಾಖೆಗಳಿಗೆ ಸಂಬಂಧಿಸಿದಂತೆ ಜನ ಸಂಪರ್ಕ ಸಭೆಯಲ್ಲಿ 56 ಅರ್ಜಿಗಳು ಸ್ವೀಕೃತ ಹಾಗಿದೆ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ 12 ಅರ್ಜಿಗಳು ಉಳಿದಂತಹ ಅರ್ಜಿಗಳು ಗ್ರಾಮೀಣ ಅಭಿವೃದ್ಧಿ ಇಲಾಖೆಗೆ ಸಂಬಂಧಿಸಿದವು. ಸರ್ಕಾರದ ಆದೇಶದಂತೆ ಯಾರು ಅರ್ಹರಲ್ಲಅವರ ಕಾರ್ಡು ರದ್ದುಪಡಿಸುತ್ತೇವೆ ಇದು ಸರ್ಕಾರದ ನಿಯಮ ಯಾರು ಅರ್ಹರಿದ್ದಾರೆ ಅವರ ಕಾರ್ಡ್ ರದ್ದುಪಡಿಸುವುದಿಲ್ಲ ನಮ್ಮ ಸರ್ಕಾರ ಸಾರ್ವಜನಿಕರು ಹಾಗೂ ಹಳ್ಳಿ ಜನರಿಗೆ ಸರ್ಕಾರದ ಸದುದ್ದೇಶ ಸರ್ಕಾರದ ಸೌಲಭ್ಯಗಳು ಅರ್ಹರನ್ನು ಗುರುತಿಸಿ ಜಾತ್ಯತೀತವಾಗಿ ಪಕ್ಷಾತೀತವಾಗಿ ಬಡವರಿಗೆ ತಲುಪಿಸುತ್ತೇವೆ ನಮ್ಮ ಸರ್ಕಾರ ನುಡಿದಂತೆ ನಡೆಯುತ್ತಿದ್ದೇವೆ.ನಾವು ಚುನಾವಣಾ ಪೂರ್ವದಲ್ಲಿ ಘೋಷಣೆ ಮಾಡಿರುವ ಐದು ಗ್ಯಾರಂಟಿಗಳಲ್ಲಿ ನಾಲ್ಕು ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ ಇನ್ನು ಉಳಿದಂತಹ ಗ್ಯಾರೆಂಟಿಗಳನ್ನು ಸಹ ಸದ್ಯದಲ್ಲೇ ಜಾರಿಗೊಳಿಸುತ್ತೇವೆ ಎಂದು ತಿಳಿಸುತ್ತಾ. ಇದೇ ತಿಂಗಳ 30. 8.2023 ರಂದು ಸಂಜೆಯ ಒಳಗಾಗಿ ಎಲ್ಲಾ ಮಹಿಳೆಯರಿಗೂ ಗೃಹಲಕ್ಷ್ಮಿ ಯೋಜನೆಯ ಹಣ ಅವರ ಖಾತೆಗೆ ತಲುಪಲಿದೆ ಅವರು ಬ್ಯಾಂಕಿಗೆ ಹೋಗಿ ಡ್ರಾ ಮಾಡಿಕೊಳ್ಳಬಹುದು ಎಂದು ತಿಳಿಸಿದರು.

ನಮಗೆ ಜನರು ಆಶೀರ್ವಾದ ಮಾಡಿರುವುದರಿಂದ ನಾವು ಅಧಿಕಾರಕ್ಕೆ ಬಂದಿದ್ದೇವೆ ಎಂದರು. ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳು. NREG ಕ್ರಿಯಾಯೋಜನೆಗಳ ಕಾಮಗಾರಿಗಳು ಅನುಮೋದನೆಗೊಂಡಿದ್ದು ಆದಷ್ಟು ಬೇಗನೆ ಕೆಲಸಗಳನ್ನು ಪ್ರಾರಂಭಿಸಬೇಕೆಂದು ತಿಳಿಸುತ್ತಾ.ಎಲ್ಲಾ ಅರ್ಹ ಫಲಾನುಭವಿಗೆ ಸಂಬಂಧಪಟ್ಟ ಅಧಿಕಾರಿಗಳು ಪಿಂಚಣಿ ಮಂಜೂರಾತಿ ಆದೇಶ ಪತ್ರಗಳನ್ನು ಸಾರ್ವಜನಿಕರಿಗೆ ತಲುಪಿಸಬೇಕು ಕುಡಿಯುವ ನೀರಿಗೆ ಸಮಸ್ಯೆ ಆದರೆ ಬೋರ್ ವೆಲ್ ಕೊರೆಸಿ ಜನರಿಗೆ ನೀರು ಕೊಡಿ ಎಂದು ಸೂಚನೆ ಕೊಟ್ಟಿದ್ದೇನೆ. ಮತ್ತು ದನಕರುಗಳಿಗೆ ಮೇವು ಕೊರತೆಯಾದರೆ ಗೋಶಾಲೆಗಳನ್ನು ತೆರೆದು ಮೇವನ್ನು ಸಹ ಒದಗಿಸಿಕೊಡುತ್ತೇವೆ ಮತ್ತು ಗೋಶಾಲೆಗಳಿಗೆ ದ ನಕರುಗಳನ್ನು ಹೊಡೆದುಕೊಂಡು ಬರುವ ರೈತರಿಗೆ ಮಧ್ಯಾಹ್ನದ ಊಟವನ್ನು ಸಹ ನಮ್ಮ ಡಿಸಿಸಿ ಬ್ಯಾಂಕ್ ನ ವತಿಯಿಂದ ಏರ್ಪಟು ಮಾಡುತ್ತೇವೆ ಜಮೀನು ಇಲ್ಲದವರಿಗೆ ಹೈನುಗಾರಿಕೆ ಮಾಡಲು ಹಸು ಸಾಲವನ್ನು ಸಹ ಬ್ಯಾಂಕಿನಿಂದ ಮಂಜೂರು ಮಾಡಿಸಿಕೊಡುತ್ತೇವೆ ಮತ್ತು 20 ಕುರಿಗಳನ್ನು ಸಹ ಸಾಕಾಣಿಕೆ ಮಾಡಲು ಶೂನ್ಯ ಬಡ್ಡಿ ದರದಲ್ಲಿ ಸಾಲವನ್ನು ಸಹ ಮಂಜೂರು ಮಾಡಿಸಿಕೊಡುತ್ತೇವೆ ಎಂದು ತಿಳಿಸಿದರು.
ಮುಂದಿನ ತಿಂಗಳು 06.9. 2023 ರಂದು ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಮಧುಗಿರಿ ತಾಲೂಕಿನಲ್ಲಿ ಕರ್ನಾಟಕ ರಾಜ್ಯ ಹಾಲು ಒಕ್ಕೂಟ ಮಹಾಮಂಡಳಿಯಿಂದ ದಶಮಾನೋತ್ಸವ ಕಾರ್ಯಕ್ರಮವನ್ನು ಸಹ ಹಮ್ಮಿಕೊಂಡಿದ್ದೇವೆ ತಾವೆಲ್ಲರೂ ಸಹ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಡಬೇಕೆಂದು ತಿಳಿಸಿದರು.IMG 20230824 WA0003

ಕಾರ್ಯಕ್ರಮದಲ್ಲಿ ಸಹಕಾರಿ ಸಚಿವರಾದ ಕೆಎನ್ ರಾಜಣ್ಣನವರು ಜಿಲ್ಲಾಧಿಕಾರಿ ಕೆ ಶ್ರೀನಿವಾಸ್ ರವರು ಜಿಲ್ಲಾ ಪಂಚಾಯತ್ ಆಡಳಿತ ಅಧಿಕಾರಿ ನರಸಿಂಹಮೂರ್ತಿ ರವರು ತಹಶೀಲ್ದಾರ್ ಸಿಗಬತ್ ಹುಲ್ಲ ಕಾರ್ಯನಿರ್ವಹಣಾಧಿಕಾರಿಯದ ಬಿ .ಎಸ್ .ಲಕ್ಷ್ಮಣ್ ಯೋಜನಾಧಿಕಾರಿ ಮಧುಸೂದನ್ ಮುಖಂಡರಾದ ರಾಮದಾಸ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗೋಪಾಲಯ್ಯ ಐ.ಡಿ
ಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಭಾಗ್ಯಮ್ಮ ಸದಾಶಿವ ರೆಡ್ಡಿ ಉಪಾಧ್ಯಕ್ಷರಾದ ಲಕ್ಷ್ಮಮ್ಮ ಅಂಜಿನಪ್ಪ ಇಂದಿರಾ ದೇನಾಯ ನಾಯಕ್ ಚಿಕ್ಕದಾಳ ವಟ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಲಲಿತಮ್ಮ ಉಪಾಧ್ಯಕ್ಷರಾದ ಆಶಾರಾಣಿ ದೊಡ್ಡ ಯ ಲ್ಕೂರುಗ್ರಾಮ್ ಪಂಚಾಯ್ತಿ ಅಧ್ಯಕ್ಷರಾದ ಅಶ್ವ ತಮ್ಮ ಸುಬ್ಬರಾಯಪ್ಪ ಉಪಾಧ್ಯಕ್ಷರಾದ ರವಿಕುಮಾರ್ ಗರ ಣಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಹನುಮಪ್ಪ ರಾಜು ಉಪಾಧ್ಯಕ್ಷರಾದ ಶಿಲ್ಪ ಬ್ರಹ್ಮಸಮುದ್ರ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಬಾಲಕ್ಕ ಬಳಗೇರಪ್ಪ ಉಪಾಧ್ಯಕ್ಷರಾದ ಡಿ.ಕೆ . ಚಿತ್ತಯ್ಯ ಪಿ.ಟಿ
ಗೋವಿಂದಪ್ಪ ಶನಿವಾರರೆಡ್ಡಿ ಶ್ರೀನಿವಾಸ ರೆಡ್ಡಿ ರಾಜಮೋಹನ್ ಶ್ರೀಧರ್ ರೆಡ್ಡಿ ಮಾಜಿ ತಾಲ್ಲೂಕ್ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ರಾಜು.ನರಸಿಂಹ ರೆಡ್ಡಿ ಕಾಮೇಗೌಡನಹಳ್ಳಿ ನಾಗರಾಜು ಸುರೇಂದ್ರ. ವಕೀಲರಾದ ನರಸಿಂಹಮೂರ್ತಿ.ತಾಡಿ ಶ್ರೀ ರಾಮಯ್ಯ.ಕಾರ್ಮಿಕ ಯುವಘಟಕದ ಅಧ್ಯಕ್ಷರಾದ ನಾಗೇಶ. ಐ.ಡಿ .ಹಳ್ಳಿ.ಸಿದ್ದಲಿಂಗಪ್ಪ .ಮೆಡಿಕಲ್ ಬಾಬು. ಸದಾಶಿವಯ್ಯ ಗರಣಿ ವೆಂಕಟರ ಣಪ್ಪ ಮಾಜಿ ಅಧ್ಯಕ್ಷರಾದ ಸುರೇಶ್. ಜಿಲಾನ್
. ನರಸಿಂಹಮೂರ್ತಿ. ಬಾಬು ವಿಎಸ್ಎಸ್ಏನ್ ಅಧ್ಯಕ್ಷರಾದ ರಾಮಾಂಜಿ.ಕಂದಾಯ ತನಿಖಾಧಿಕಾರಿಗಳಾದ ಚಿಕ್ಕರಾಜು ಐ.ಡಿ.ಹಳ್ಳಿ ಹೋಬಳಿಯ ಗ್ರಾಮ ಪಂಚಾಯಿತಿಪಿ.ಡಿ.ಒ. ಗಳಾದ ನವೀನ್ ಕುಮಾರ್ ಎ.ಪಿ ಪ್ರಕಾಶ್ ಬಿ.ಎಸ್ ರಂಗನಾಥ್ ಶಿವಾನಂದಯ್ಯ. ಬೋರಣ್ಣ ಗ್ರಾಮ ಲೆಕ್ಕಾಧಿಕಾರಿಗಳಾದ ರವಿಕುಮಾರ್. ಜಗದೀಶ್. ತನುಜ ಕಿರಣ್ ಕುಮಾರ್. ಎಲ್ಲಾ ಗ್ರಾಮ ಪಂಚಾಯಿತಿಗಳ ಸದಸ್ಯರು ವಿ ಎಸ್ ಎಸ್ ಏನ್ ನ ಸದಸ್ಯರುಗಳು ಎಲ್ಲಾ ಇಲಾಖೆ ಅಧಿಕಾರಿಗಳು ಹಾಗೂ ಡಿಸಿಸಿ ಬ್ಯಾಂಕಿನ ಎಲ್ಲಾ ನೌಕರವರ್ಗದವರು ಹಾಗೂ ಸಾರ್ವಜನಿಕರು ಹಾಗೂ ಗ್ರಾಮ ಪಂಚಾಯತಿಯ ಎಲ್ಲಾ ನೌಕರರು ಹಾಗೂ ಗ್ರಾಮ ಸಹಾಯಕರಗಳು ಸಭೆಯಲ್ಲಿ ಹಾಜರಿದ್ದರು.
ವರದಿ ಲಕ್ಷ್ಮಿಪತಿ ದೊಡ್ಡ ಯ ಲ್ಕೂರು.