ಡಾಕ್ಟರ್, ನರ್ಸ್ ಗಳಿಗೆ ಒದಗಿಸುತ್ತಿರುವ ಪಿಪಿ ಕಿಟ್ ಸರಿಯಾಗಿಲ್ಲ- ಪಿ.ಎಂ.ನರೇಂದ್ರಸ್ವಾಮಿ

DISTRICT NEWS ಮಂಡ್ಯ

 ಮಂಡ್ಯ  ಏ ೨೬ : – ಮಳವಳ್ಳಿ ಪಟ್ಟಣ ಕೊರೋನಾ ಹಾಟ್ ಸ್ಪಾಟ್ ಆಗುತ್ತಿದೆ ಮಳವಳ್ಳಿಯಲ್ಲಿ   ಈದ್ಗಾ ಮೊಹಲ್ಲಾ ಸೂಕ್ಷ್ಮ ಪ್ರದೇಶವಾಗಿದೆ. ಮಂಡ್ಯದಲ್ಲಿ ಒಟ್ಟು ಪಾಸಿಟಿವ್ ಪ್ರಕರಣಗಳಲ್ಲಿ 14 ಪ್ರಕರಣ ಮಳವಳ್ಳಿಯದ್ದೆ ಆಗಿದೆ  ಇದರಲ್ಲಿ ನಾಲ್ಕು ಜನ ಕೊರೋನಾ  ವೈರಸ್ ನಿಂದ ಗುಣಮುಖರಾಗಿದ್ದಾರೆ  ಸೋಂಕು ತಡೆಯಲು ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದಾರೆ

   ಪಿಪಿ ಕಿಟ್ಟ್ ಕೊರತೆ ಇದೆ ಡಾಕ್ಟರ್, ನರ್ಸ್ ಗಳಿಗೆ  ಒದಗಿಸಬೇಕಾದ ಪಿಪಿ ಕಿಟ್ಟ್  ಸಮರ್ಪಕವಾಗಿಲ್ಲಾ  ಈ ಬಗ್ಗೆ ಜಿಲ್ಲಾಧಿಕಾರಿಗಳ ಜೋತೆ ಮಾತನಾಡಲಾಗಿದೆ  ತುರ್ತಾಗಿ  ಖರೀದಿ ಮಾಡಲಾಗುತ್ತಿದ್ದು, ಎರಡು ದಿನಗಳಲ್ಲಿ ವಿತರಿಸಲಾಗುವುದು ಎಂದು ಹೇಳಿದ್ದಾರೆ ವಿತರಿಸದಿದ್ದರೆನ ಸಾರ್ವಜನಿಕವಾಗಿ ಬೇರೆ ರೂಪದಲ್ಲಿ ನಾವು ಕ್ರಮ ಕೈಗೊಳ್ಳುತ್ತೇವೆ.

ಕೊರೋನಾ ವಿಶ್ವದಲ್ಲೇ ಹರಡಿರುವ ರೋಗ ಮಂಡ್ಯ ಮಳವಳ್ಳಿಯಲ್ಲಿ ಹೆಚ್ಚು ಪ್ರಕರಣ ದಾಖಲಾಗಿ. ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಜವಾಬ್ದಾರಿಯಿಂದ ಕೆಲಸ ಮಾಡ್ತಿದ್ದಾರೆ  ಎಂದು ತಿಳಿಸಿದರು