ಬೆಂಗಳೂರು ಏ ೨೬:- ಬಸವೇಶ್ವರ ಜಯಂತಿ ಅಂಗವಾಗಿ ಬಸವ ಸಮಿತಿ ವತಿಯಿಂದ ಬಸವೇಶ್ವರ ವೃತ್ತದ ಬಳಿಯ ಬಸವ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ರೀ ಜಗಜ್ಯೋತಿ ಬಸವೇಶ್ವರರ ಪುತ್ಥಳಿಗೆ ಸನ್ಮಾನ್ಯ ಮುಖ್ಯಮಂತ್ರಿಗಳು ಶ್ರೀ ಬಿ.ಎಸ್.ಯಡಿಯೂರಪ್ಪ ರವರು, ಪೂಜ್ಯ ಮಹಾಪೌರರು ಮಾಲಾರ್ಪಣೆ ಮಾಡಿ ಪುಷ್ಪನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಡಿಸಿಎಂ ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಯಿ, ಚಿತ್ರದುರ್ಗ ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾ ರಾಜೇಂದ್ರ ಸ್ವಾಮೀಜಿಗಳು, ಬೇಲಿಮಠದ ಶ್ರೀ ಶಿವರುದ್ರ ಸ್ವಾಮೀಜಿಗಳು ಭಾಗವಹಿಸಿದ್ದರು
ಮಾಲಾರ್ಪಣೆ ನಂತರ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿಎಸ್ ವೈ ಕೊರೋನಾ ಸೋಕಿನಿಂದ ದೊಟ್ಟ ಮಟ್ಟದಲ್ಲಿ ಕಾರ್ಯಕ್ರಮ ಮಾಡಲು ಆಗಿಲ್ಲ ಎಂದರು, ಲಿಂಗ, ಜಾತಿ ಬೇದವಿಲ್ಲದ ನವ ಸಮಾಜದ ಕನಸನ್ನು ೧೨ ಶತಮಾನದಲ್ಲೆ ಬಿತ್ತಿದವರು ಬಸವಣ್ಣನವರು,ಕಾಯಕವೇ ಕೈಲಾಸ ಎಂದು ದುಡಿಮೆಯ ಮಹತ್ವವನ್ನು ಸಾರಿದರು. ತಮ್ಮ ಸರಳ ವಚನದ ಮೂಲಕ ಸಮಾನತೆ,ದಾಸೋಹ ತತ್ವಗಳನ್ನು ಸಾರಿದವರು, ಅವರು,ಸ್ಥಾಪಿಸಿದ್ದ ಅನುಭವ ಮಂಟಪ ಸಂಸದೀಯ ವ್ಯವಸ್ಥೆಗೆ ಮೂಲ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ ‘ಸರ್ವರಿಗೂ ಬಸವ ಜಯಂತಿ ಶುಭಾಶಯಗಳು. ಬಸವಣ್ಣನವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆಯುತ್ತಾ, ಅವರ ನೀತಿ, ವಚನಗಳನ್ನು ನಾವು ಉಸಿರಾಡುತ್ತಿದ್ದೇವೆ. ಅವರ ನಾಡಿನಲ್ಲಿ ಹುಟ್ಟಿರೋದು ನಮ್ಮ ಭಾಗ್ಯ’ ಎಂದುರು
’12 ನೇ ಶತಮಾನದಲ್ಲಿ ಅನುಭವ ಮಂಟಪವನ್ನು ಸ್ಥಾಪಿಸಿ, ಪ್ರಜಾಪ್ರಭುತ್ವದಲ್ಲಿ ಸಂಸತ್ತಿನ ಪರಿಕಲ್ಪನೆಗೆ ಅಡಿಪಾಯ ಹಾಕಿಕೊಟ್ಟವರು ಬಸವಣ್ಣನವರು. ಅದೇ ಸಂಸತ್ ವ್ಯವಸ್ಥೆಯಲ್ಲಿ ನಾವೀಗ ಕೆಲಸ ಮಾಡುತ್ತಾ ಪ್ರಜಾಪ್ರಭುತ್ವವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ’ ಎಂದರು.
ಇದೇ ವೇಳೆ ಕೋವಿಡ್-19 ಸೋಂಕು ಹರಡುವುದನ್ನು ತಡೆಯಲು ಬಸವ ಸಮಿತಿ ವತಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 2.51 ಲಕ್ಷ ಚೆಕ್ ಅನ್ನು ಮುಖ್ಯಮಂತ್ರಿಗಳಿಗೆ ನೀಡಿದರು.
.