ಮಧುಗಿರಿ : ತಾಲೂಕಿನ ಪುರವರ ಹೋಬಳಿ ಪುರವರ ಗ್ರಾ.ಪಂ.ಗೆ
ವಿಜಯಲಕ್ಷ್ಮೀಯವರು ಅಧ್ಯಕ್ಷೆಯಾಗಿ
ಆಯ್ಕೆಯಾಗಿದ್ದಾರೆಂದು ತಹಶೀಲ್ದಾರ್ ಹಾಗೂ ಚುನಾವಣಾಧಿಕಾರಿ ಸಿಗಬತ್ ವುಲ್ಲಾ ತಿಳಿಸಿದರು.
ತಾಲೂಕಿನ ಪುರವರ ಗ್ರಾ.ಪಂ.ನಲ್ಲಿ ನಡೆದ
ಚುನಾವಣೆಯಲ್ಲಿ ಭಾಗವಹಿಸಿದ 15 ಜನಸದಸ್ಯ ಬಲದ. ಪುರವರ ಗ್ರಾಮ ಪಂಚಾಯಿತಿಯಅಧ್ಯಕ್ಷ ಸ್ಥಾನದ ಚುನಾವಣೆ ಪ್ರಕ್ರಿಯೆ ನಡೆಸಿ ಮಾತನಾಡಿದ ಅವರು ಎರಡನೇ ಅವಧಿಗೆ ಅಧ್ಯಕ್ಷರ ಚುನಾವಣೆ ಘೋಷಣೆಯಾದ ಹಿನ್ನಲೆಯಲ್ಲಿ ಅಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳಾ ಸ್ಥಾನಕ್ಕೆ ಮೀಸಲಾಗಿದ್ದು. ನಾಗಮ್ಮ , ವಿಜಯಲಕ್ಷ್ಮೀ ಹಾಗೂ ಅಂಬಿಕಾರವರುಗಳು ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದ್ದರು.
ಅಧ್ಯಕ್ಷ ಸ್ಥಾನದ ಮೂವರು ಆಕ್ಷಾಂಕ್ಷಿಗಳು ತಮ್ಮ ಉಮೇದುವಾರಿಕೆಯನ್ನು ವಾಪಸ್ ಪಡೆಯದ ಹಿನ್ನೆಲೆಯಲ್ಲಿ ಸದಸ್ಯರಿಗೆ ಮತದಾನಕ್ಕೆ ಅವಕಾಶ ನೀಡಲಾಯಿತು. ನಂತರ ನಡೆದ ಚುನಾವಣೆಯಲ್ಲಿ ಸದಸ್ಯ ರಾಧಾ.ಗೈರು ಹಾಜರಾಗಿದ್ದರು, ಪ್ರತಿಸ್ಪರ್ಧಿಗಳು ಕ್ರಮವಾಗಿ 5 ಹಾಗು 2 ಮತಗಳನ್ನು ಗಳಿಸಿದ್ದು 7 ಮತಗಳನ್ನು ಪಡೆದ ತಗ್ಗೀಹಳ್ಳಿ ಕ್ಷೇತ್ರದ ಸದಸ್ಯೆಯಾದವಿಜಯಲಕ್ಷ್ಮೀ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.
ಮುಂದಿನ ಅವರ ಅಧಿಕಾರಾವಧಿಯಲ್ಲಿ ಜನಸಾಮಾನ್ಯರ ಸಮಸ್ಯೆಗೆ ಸೂಕ್ತ ಪರಿಹಾರ ಕಲ್ಪಿಸಿ ಸಂವಿಧಾನ ಬದ್ಧವಾಗಿ ಆಡಳಿತ ನಡೆಸಲಿ ಎಂದು ಶುಭ ಹಾರೈಸಿದರು.
ಅಧ್ಯಕ್ಷೆ ವಿಜಯಲಕ್ಷ್ಮೀ ಮಾತನಾಡಿ, ನನ್ನನ್ನು ಆಯ್ಕೆ ಮಾಡಿ
ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು. ಗ್ರಾ.ಪಂ.
ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳ
ಅನುಷ್ಠಾನವಾಗಬೇಕಿದೆ. ಕನಿಷ್ಟ ಸೌಲಭ್ಯಗಳಾದ
ಸ್ವಚ್ಛತೆ, ನೀರು, ಬೀದಿ ದೀಪ, ಮನೆ ಹಾಗೂ ನಿವೇಶನಗಳ ಹಂಚಿಕೆ ಸೇರಿದಂತೆ. ನರೇಗಾದಲ್ಲಿ ಹೆಚ್ಚಿನ ಉದ್ಯೋಗ ಕಲ್ಪಿಸಲು ಕ್ರಮವಹಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಪಿಡಿಓ ಧನಂಜಯ್, ಸದಸ್ಯರಾದ ಹರಿಪ್ರಸಾದ್, ದಿಲೀಪ್, ನಾರಾಯಣಗೌಡ , ಲಿಂಗರಾಜು, ನರಸಿಂಹಮೂರ್ತಿ, ಅಂಬಿಕಾ, ಜ್ಯೋತಿ, ನಾಗಮ್ಮ,
ರಾಜಕುಮಾರ್, ಕಮಲಮ್ಮ ಮುಖಂಡರಾದ ಸತೀಶ್ , ಮಂಜುನಾಥ್ , ಪುರುಷೋತ್ತಮ್, ಸಿದ್ದರಾಜು, ಪುಟ್ಟಕಾಮಣ್ಣ , ವೇಣು ಹಾಗೂ ಇತರರು ಹಾಜರಿದ್ದರು.
ವರದಿ ಲಕ್ಷ್ಮಿಪತಿ ದೊಡ್ಡ ಯ ಲ್ಕೂರ್