IMG 20220805 WA0031

ಆನೇಕಲ್:ಸಾಹಿತ್ಯ ಹಾಗೂ ಹಬ್ಬಗಳ ಮಹತ್ವ ಸಂವಾದ…!

DISTRICT NEWS ಬೆಂಗಳೂರು

ಆನೇಕಲ್: ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸಾಹಿತ್ಯ ಹಾಗೂ ಹಬ್ಬಗಳ ಮಹತ್ವ ಸಂವಾದ ಕಾರ್ಯಕ್ರಮವನ್ನು ಆನೇಕಲ್ ಪಟ್ಟಣದ ಕಂಬಿ ಮೂರ್ತಿರವರ ಮನೆಯಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ನಿವೃತ್ತ ಮುಖ್ಯೋಪಾಧ್ಯಾಯರಾದ ಕೆ. ಮಾದಯ್ಯ ರವರು ಉದ್ಘಾಟನೆ ಮಾಡಿದರು.
ಕಾರ್ಯಕ್ರಮದಲ್ಲಿ ವಿಶ್ವಚೇತನ ಕಾಲೇಜಿನ ಪ್ರಾಧ್ಯಾಪಕರಾದ ರವಿಕುಮಾರ್ ರವರು ಸಾಹಿತ್ಯ ಹಾಗೂ ಹಬ್ಬಗಳ ಮಹತ್ವ ದ ಬಗ್ಗೆ ವಿಚಾರ ಮಂಡಿಸಿ ಮಾತನಾಡಿದ ಅವರು ಹಬ್ಬಗಳು ವೈಜ್ಞಾನಿಕ ಹಾಗೂ ವೈಚಾರಿಕತೆಯಿಂದ ಕೂಡಿವೆ ನೋಡುವ ದೃಷ್ಟಿ ವಿಶಾಲವಾಗಿರಬೇಕು ಎಂದು ತಿಳಿಸಿದರು.

IMG 20220805 WA0030 1


ಹಬ್ಬ ಹರಿದಿನಗಳು ಮನುಷ್ಯ ಸಂಬಂಧಗಳನ್ನು ಹೆಚ್ಚಿಸುತ್ತದೆ, ಉತ್ತಮ ಆಹಾರ ಸಂಸ್ಕಾರ ಗಳನ್ನು ಸಮ್ಮಿಲನಗೊಳಿಸಿ ಆರೋಗ್ಯಕರ ಸಮಾಜ ನಿರ್ಮಾಣ ಮಾಡಲಿಕ್ಕೆ ಸಹಕಾರಿಯಾಗುತ್ತದೆ ಎಂದು ಹೇಳಿದರೆ.
ನಿವೃತ್ತ ಮುಖ್ಯೋಪಾಧ್ಯಾಯರಾದ ಕೆ ಮಾದಯ್ಯ ಮಾತನಾಡಿ ಪ್ರಕೃತಿಯ ಜೀವ ರಾಶಿಗಳನ್ನು ರಕ್ಷಿಸಿ ಉಳಿಸುವ ಕೆಲಸ ಪ್ರತಿಯೊಬ್ಬರು ಮಾಡಿದಾಗ ಭೂಮಿಯಲ್ಲಿ ಸಮತೋಲನೆ ಉಂಟಾಗುತ್ತದೆ ಆರೋಗ್ಯದ ದೃಷ್ಟಿಯಿಂದ ಹಲವಾರು ಪೌಷ್ಟಿಕ ಆಹಾರವನ್ನು ಒದಗಿಸಿಕೊಳ್ಳುವ ನೆಪದಲ್ಲಿ ಹಬ್ಬಗಳನ್ನ ಆಚರಿಸುತ್ತೇವೆ ಪೂರ್ವಜರು ಸೂಕ್ಷ್ಮವಾಗಿ ಇವುಗಳನ್ನೆಲ್ಲ ಅರಿತು ಧಾರ್ಮಿಕ ಸಾಮಾಜಿಕ ಕಾರಣಗಳಿಗಾಗಿ ಹಬ್ಬಗಳ ಹೆಸರನ್ನು ಹೆಸರಿಸಿದರು ಎಂದು ವಿಶ್ಲೇಷಿಸಿದರು
ಶಿಕ್ಷಕ ಬಸವರಾಜ್ ಬಾಳೆಕಾಯಿ ಮಾತನಾಡಿ ಹಲವಾರು ನೆಪಗಳಲ್ಲಿ ಮನುಷ್ಯ ಕೂಡಿ ಬಾಳುವ ಸನ್ನಿವೇಶವನ್ನ ನಿರ್ಮಾಣ ಮಾಡಿಕೊಡುವ ಕಾರ್ಯಕ್ರಮಗಳೇ ಹಬ್ಬ ಹರಿದಿನಗಳಾಗಿವೆ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಕಂಬಿ ಮೂರ್ತಿ ಅಮೃತ ಮುಕುಂದ ಪ್ರಸಾದ್ ಪದ್ಮಶ್ರೀ ಕವನ ರಕ್ಷಿತಾ ಮುನಿರಾಜು ಸಿ ಆರ್ ಪಿ ಅಂಜನಪ್ಪ ಚಂದ್ರಪ್ಪ ಪ್ರಭು ಶಂಕರ್ ಮುರಳಿ ಜಿ ಮಹೇಶ್ ರಮೇಶ್ ಆನಂದ್ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಆದೂರು ಪ್ರಕಾಶ್ ಗೌರವ ಕಾರ್ಯದರ್ಶಿ ಎಂ ಗೋವಿಂದರಾಜು ಹಾಜರಿದ್ದರು