ಇಂದು ಪಾವಗಡ ತಾಲೂಕಿನಾದ್ಯಂತ ಸುರಿದ ಮಳೆಯ ಪರಿಣಾಮ ಕೆರೆ-ಕುಂಟೆಗಳು ನೀರಿನಿಂದ ತುಂಬಿದ್ದು ತಾಲೂಕಿನಲ್ಲಿ ಮಲೆನಾಡಿನ ವಾತಾವರಣ ಸೃಷ್ಟಿಯಾಗಿತ್ತು. ವೆಂಕಟಾಪುರ —-ಹಲವಾರು ವರ್ಷಗಳಿಂದ ನೀರಿಲ್ಲದೆ ಬತ್ತಿ ಹೋಗಿದ್ದ ಮಣಿ ಮುಕ್ತಾವತಿ ನದಿಯು ಇಂದು ಸುರಿದ ಮಳೆಯ ಪರಿಣಾಮದಿಂದಾಗಿ ಮಣಿ ಮುಕ್ತಾವತಿ ನದಿಯು ಪ್ರವಾಹದಂತೆ ಹರಿಯಿತು ಪರಿಣಾಮ ಬತ್ತಿಹೋದಂತಹ ಬೋರ್ವೆಲ್ ಗಳಿಗೆ ಮರು ಜೀವ ಬಂದಂತಾಯಿತು ಎಂದು ವೆಂಕಟಾಪುರದ ಸತ್ಯಪ್ರಕಾಶ್ ತಿಳಿಸಿದರು.
ಬಾಲಮ್ಮ ನಹಳ್ಳಿ ——. ಇಂದು ಸುರಿದ ಮಳೆಯ ಪರಿಣಾಮ ಗುಂಡಾರ್ಲಹಳ್ಳಿಯ ಕೆರೆ ತುಂಬಿ ಹರಿಯಿತು ಪರಿಣಾಮವಾಗಿ ಬಾಲಮ್ಮ ನಹಳ್ಳಿ ಮತ್ತು ಗುಂಡಾರ್ಲಹಳ್ಳಿಯ ಮುಖ್ಯ ರಸ್ತೆ ಸಂಪೂರ್ಣ ಜಲಮಯವಾಗಿ ಸಂಚಾರಕ್ಕೆ ಅಡಚಣೆ ಉಂಟಾಯಿತು.
ನಾಗಲಮಡಿಕೆ– ನಾಗಲಮಡಿಕೆಯ ಉತ್ತರ ಪಿನಾಕಿನಿ ತುಂಬಿ ಹರಿಯಿತು. ಉತ್ತರ ಪಿನಾಕಿನಿ ನೀರು ತುಂಬಿ ಹರಿದ ಕಾರಣ ನಾಗಲಮಡಿಕೆ ಹೋಬಳಿಯಲ್ಲಿ ಅಂತರ್ಜಲದ ಮಟ್ಟ ಹೆಚ್ಚಳಕ್ಕೆ ಕಾರಣವಾಯಿತು. ಪಾವಗಡ ಟೌನ್ —. ಸುರಿದ ಮಳೆಯಿಂದಾಗಿ ಪಾವಗಡ ಟೌನಿನ ಅಗಸರ ಕುಂಟೆಗೆ ಕೋಡಿ ಬಿದ್ದ ಪರಿಣಾಮ ಅಗಸರ ಕುಂಟೆಯ ನೀರು ವಿವೇಕಾನಂದ ಕಾಲೇಜಿನ ಮುಖ್ಯ ರಸ್ತೆಗೆ ಹರಿದು. ರಸ್ತೆಯು ಸಂಪೂರ್ಣವಾಗಿ ಜಲ ಮಾಯವಾಯಿತು.ಅಗಸರ ಕುಂಟೆಗೆ ಕೋಡಿ ಬಿದ್ದ ಪರಿಣಾಮ ನೀರನ್ನು ನೋಡಲು ಜನಸಾಗರವೇ ಹರಿದು ಬಂದಿತ್ತು
ಹಲವಾರು ಜನ ಮಕ್ಕಳು ಹಾಗೂ ಯುವಕರು ನೀರಿನಲ್ಲಿ ಈಜಾಡಿ ಸಂತೋಷ ವ್ಯಕ್ತಪಡಿಸಿದರು. ಪಟ್ಟಣದ ಪುರಸಭೆ ಅಧಿಕಾರಿಗಳು ಮುಂಜಾಗ್ರತ ಕ್ರಮವಾಗಿ ಅಗಸರ ಕುಂಟೆಯ ಸುತ್ತಲೂ ಬ್ಯಾರಿಕೇಡ್ ಗಳನ್ನು ಅಳವಡಿಸಿದ್ದರು. ಏನೇ ಇರಲಿ ಪಾವಗಡ ಜನರು ಟೌನಿನ ಜನರು ಅಗಸರ ಕುಂಟೆಗೆ ಕೋಡಿ ಬಿದ್ದಿದ್ದರಿಂದ ನೀರಿನಲ್ಲಿ ಮಿಂದು ಸಂತೋಷ ವ್ಯಕ್ತಪಡಿಸಿದರು
ವರದಿ: ಶ್ರೀನಿವಾಸುಲು ಎ