ಕೃಷಿಯಲ್ಲಿನ ಬೆಲೆ ಏರಿಳಿತಗಳಿಂದಾಗಿ ರೈತ ಆತ್ಮಹತ್ಯೆ..
ಪಾವಗಡ.. ದೇಶದ ಬೆನ್ನೆಲುಬು ಎಂದು ಕರೆಯಲ್ಪಡುವ ರೈತರ ಬದುಕು ಇಂದು ಶೋಚನೀಯವಾಗಿದ್ದು, ನಮ್ಮನ್ನು ಆಳುವ ಅದೆಷ್ಟು ಸರ್ಕಾರಗಳು ನಾವು ರೈತರ ಪರ ಎಂದು ಘೋಷಿಸಿಕೊಂಡು ಅಧಿಕಾರಕ್ಕೆ ಬಂದು, ರೈತರ ಬಗ್ಗೆ, ರೈತರ ಬೆಳೆಗಳ ಬಗ್ಗೆ ತೀರಾ ತತ್ಸಾರ ಮನೋಭಾವದಿಂದ ನಡೆದುಕೊಳ್ಳುವ ಪರಿಯಿಂದಾಗಿ ಅನೇಕ ರೈತರು ಆತ್ಮಹತ್ಯೆಗೆ ಶರಣಾಗುವ ದುಸ್ಥಿತಿ ಬಂದೊದಗಿದೆ.
ಸಾಲವಾದೆ ತಳಲಾರದೆ ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ನಾಗಲಮಡಿಕೆ ಹೋಬಳಿಯ ಶ್ರೀರಂಗಪುರ ತಾಂಡಾದಲ್ಲಿ ನಡೆದಿದೆ. ಮೃತ ರೈತ ರಾಮನಾಯ್ಕ(56)s/o ನರಸಿಂಗನಾಯ್ಕ ಶ್ರೀರಂಗಪುರ ತಾಂಡಾದ ನಿವಾಸಿಯಾಗಿದ್ದು, ಕೃಷಿ ಚಟುವಟಿಕೆಗಾಗಿ ಕಲ್ಪತರು ಗ್ರಾಮೀಣ ಬ್ಯಾಂಕ್ ನಲ್ಲಿ, ಹಾಗೂ ಕೈಸಾಲ ಮಾಡಿಕೊಂಡಿದ್ದ ರೈತ , ಕೃಷಿಯಿಂದ ನಿರೀಕ್ಷಿತ ಆದಾಯ ಬರದೆ ಸಾಲ ತೀರಿಸಲಾಗದೆ, ಮಾನಸಿಕವಾಗಿ ನೊಂದ ರೈತ ಸೋಮವಾರ. ವಿಷ ಕುಡಿದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ತಾಲೂಕು ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ರೈತ ಮೃತಪಟ್ಟಿದ್ದು. ತಿರುಮಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಸ್ ದಾಖಲಾಗಿದೆ.
ವರದಿ: ಶ್ರೀನಿವಾಸಲು ಎ