IMG 20220801 WA0019

ಪಾವಗಡ:ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬನೆ ಯಾಗಬೇಕು….!

DISTRICT NEWS ತುಮಕೂರು

ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬನೆ ಯಾಗಬೇಕು. ಶಾಸಕ ವೆಂಕಟರಮಣಪ್ಪ.   

ಪಾವಗಡ : ಆಧುನಿಕ ಸಮಾಜದಲ್ಲಿ ಮಹಿಳೆಯರ ಪಾತ್ರ  ಪ್ರಮುಖವಾದದ್ದು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸ್ವ ಸಹಾಯ ಸಂಘಗಳಲ್ಲಿ ಗುರುತಿಸಿಕೊಂಡು  ಆದಾಯ ಗಳಿಸುವ ಮೂಲಕ ಕುಟುಂಬ ಪೋಷಣೆಯಲ್ಲಿ ಮಹಿಳೆಯರ ಪಾತ್ರ ಶ್ಲಾಘನೀಯವೆಂದು, ಶಿಶು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಪಿಎಲ್ಎಫ್ ಗಳ ಒಕ್ಕೂಟಗಳ ಸಹಯೋಗದಲ್ಲಿ   75ನೇ ಸ್ವಾತಂತ್ರೋತ್ಸವದ  ಅಮೃತ ಮಹೋತ್ಸವದ ಅಂಗವಾಗಿ ಪಟ್ಟಣದ ಗುರುಭವನದಲ್ಲಿ ಸೋಮವಾರ ಏರ್ಪಡಿಸಿದ್ದ      ವಿಶ್ವ ಸ್ತನ್ಯಪಾನ ಸಪ್ತಾಹ ಹಾಗೂ ಅಮೃತ ಸ್ವಸಹಾಯ ಕಿರಿಯ ಉದ್ದಿಮೆ ಯೋಜನೆ ಅಡಿ ಆಯ್ಕೆಯಾದ ಮಹಿಳೆಯರಿಗೆ ಚಕ್ ವಿತರಣಾ ಕಾರ್ಯಕ್ರಮದಲ್ಲಿ ಶಾಸಕ                          ವೆಂಕಟರಮಣಪ್ಪಮಾತಾಡಿದರು

ಮಹಿಳೆಯರು ಸ್ವ ಸಹಾಯ ಸಂಘಗಳಲ್ಲಿ ಸಾಲ ಪಡೆದ ನಂತರ ನಿಗದಿತ ಸಮಯಕ್ಕೆ ಮರುಪಾವತಿ ಮಾಡಬೇಕು ಎಂದು  ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಾರಾಯಣ  ತಿಳಿಸಿದರು.                                             ಕಾರ್ಯಕ್ರಮದಲ್ಲಿ ತಾಲೂಕು ಕಾರ್ಯನಿರ್ವಹಣಾಧಿಕಾರಿ ಶಿವರಾಜಯ್ಯ , ತಾಲ್ಲೂಕು ವೈದ್ಯಾಧಿಕಾರಿಗಳಾದ ತಿರುಪತಯ್ಯ,  ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅಶ್ವಥನಾರಾಯಣ, NRLM ಸಂಯೋಜಕ

ಕೃಷ್ಣ ಮೂರ್ತಿ , ಹಿರಿಯ ಮೇಲ್ವಿಚಾರಕರಾದ  ಸುಧಾ ಯಲಿಗಾರ್,ಮೇಲ್ವಿಚಾರಕಿರಾದ ಜಯಲಕ್ಷ್ಮೀ,ಭಾಗ್ಯಲಕ್ಷ್ಮೀ, ವಿಜಯಲಕ್ಷ್ಮೀ ಮಮತ .ಎ  . ಶ್ರೀ ಶಕ್ತಿ ಸಂಘದ ಪ್ರತಿನಿಧಿಗಳು ಸದಸ್ಯರುಗಳು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿ ಹಾಜರಿದ್ದರು

ವರದಿ: ಶ್ರೀನಿವಾಸಲು ಎ.