Screenshot 2022 08 01 22 27 47 850 com.google.android.apps .nbu .files

ಮಧುಗಿರಿ:ಧಾರಾಕಾರ ಸುರಿದ ಮಳೆಯಿಂದ ಜಲಾವೃತಗೊಂಡ ಡಾ. ಬಿಆರ್ ಅಂಬೇಡ್ಕರ್ ವಸತಿ ಶಾಲೆ …….

BUSINESS ತುಮಕೂರು

ಧಾರಾಕಾರ ಸುರಿದ ಮಳೆಯಿಂದ ಜಲಾವೃತಗೊಂಡ ಡಾ. ಬಿಆರ್ ಅಂಬೇಡ್ಕರ್ ವಸತಿ ಶಾಲೆ …….

ಮಧುಗಿರಿ ತಾಲೂಕಿನ ದೊಡ್ಡೇರಿ ಹೋಬಳಿಯ ಸೋದೆನಹಳ್ಳಿ ಗ್ರಾಮದಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಡಾ. ಬಿಆರ್ ಅಂಬೇಡ್ಕರ್ ವಸತಿ ಶಾಲೆಯ ಇತ್ತೀಚಿಗೆ ಧಾರಾಕಾರವಾಗಿ ಸುರಿದ ಮಳೆಯಿಂದ ಸಂಪೂರ್ಣವಾಗಿ ವಸತಿ ನಿಲಯ ಜಲಾವೃತಗೊಂಡು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಆ ನಿಲಯದಿಂದ ಹೊರಬರಲು ತುಂಬಾ ಅರಸಹಾಸ ಪಡಬೇಕಾಗುತ್ತದೆ

ಸ್ಥಳದಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಡಾ. ಬಿಆರ್ ಅಂಬೇಡ್ಕರ್ ವಸತಿ ಶಾಲೆ ಸೂಕ್ತವಾದ ಸ್ಥಳದಲ್ಲಿ ಕಟ್ಟಡಗಳನ್ನು ನಿರ್ಮಾಣ ಮಾಡದೆ ತಗ್ಗಾದ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ಮಾಡಿರುವುದರಿಂದ ಮಳೆ ಸುರಿದರೆ ಸಾಕು ವಸತಿ ನಿಲಯ ಶಾಲೆಯು ಸಂಪೂರ್ಣವಾಗಿ ನೀರಿನಿಂದ ತುಂಬಿರುತ್ತದೆ ಮತ್ತು ಯಾರು ಸಹ ಈ ಕಟ್ಟಡದಿಂದ ಹೊರಬರಲು ಸಾಧ್ಯವಾಗುವುದಿಲ್ಲ

ಆಕಸ್ಮಿಕವಾಗಿ ಬಂದರೆ ವಿದ್ಯಾರ್ಥಿಗಳು ಮುಳುಗುವ ಸಂಭವವು ಇರುತ್ತದೆ ಆದ್ದರಿಂದ ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕುವಿದ್ಯಾರ್ಥಿಗಳು ಭಯಭೀತರಾಗದೆ ನಿರ್ಭಯವಾಗಿ ವಿದ್ಯಾಭ್ಯಾಸ ಮಾಡಲು ಅನುಕೂಲ ಮಾಡಿಕೊಡುವರೇ ಎಂದು ಸಾರ್ವಜನಿಕರ ಹಾಗೂ ಪೋಷಕರ ಒತ್ತಾಯವಾಗಿದೆ

ಮಧುಗಿರಿ ತಾಲೂಕಿನ ಐಡಿ ಹಳ್ಳಿಹೋಬಳಿಯ ದೊಡ್ಡ ಎಲುಕೂರು ಇಂದಿರಾಗಾಂಧಿ ವಸತಿ ಶಾಲೆಯು ಮಳೆ ಬಂದರೆ ಜಲಾವೃತಗೊಳ್ಳುತ್ತದೆ ಈ ಹಿಂದೆ ಈಗಾಗಲೇ ತಹಸಿಲ್ದಾರ್ ಅವರು ಉಪ ವಿಭಾಗಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಇಂದಿರಾಗಾಂಧಿ ವಸತಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳನ್ನು ಬಸ್ಸುಗಳನ್ನು ಮಾಡಿ ಅವರವರ ಊರುಗಳಿಗೆ ಕಳಿಸಿಕೊಟ್ಟಿರುವುದು ಮರೆಯುವುದರ

ಒಳಗಾಗಿಯೇ ಇಂತಹ ಘಟನೆಗಳು ಮರುಕಳಿಸುತ್ತಿರುವುದು ಶೋಚನೀಯ ಸಂಗತಿ ಆದ್ದರಿಂದ ಈ ಕೂಡಲೇತುಮಕೂರು ಜಿಲ್ಲೆಯ ಸಮಾಜ ಕಲ್ಯಾಣ ಜಂಟಿ ನಿರ್ದೇಶಕರು ಸ್ಥಳ ಪರಿಶೀಲನೆ ಮಾಡಿ ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಅನಾಹುತಗಳು ಮತ್ತೆ ಮತ್ತೆ,,ಮರುಕಳಿಸದಂತೆ ಕ್ರಮವಹಿಸುವರೆ ಕಾದು ನೋಡಬೇಕಾಗಿದೆ………

ವಸತಿ ಶಾಲೆಯು ಜಲಾವೃತಗೊಂಡಿರುವುದನ್ನು
ಮೇಲಾಧಿಕಾರಿ ರವರ ಗಮನಕ್ಕೆ ತಂದಾಗ ಪ್ರಾಂಶುಪಾಲರು ಮೂರು ದಿನ ಗಳ ಕಾಲ ರಜೆ ಘೋಷಣೆ ಮಾಡುವಂತೆ ಆದೇಶಿಸಿದ್ದಾರೆಮೊನ್ನೆ ಸುರಿದಂತ ಮಳೆಗೆ ಅಂಬೇಡ್ಕರ್ ವಸತಿ ಶಾಲೆ ಸುತ್ತ ನೀರು ತುಂಬಿರುವುದನ್ನು ಗಮನಿಸಿದ ಚಂದ್ರಗಿರಿಯ ಪಂಚಾಯಿತಿ ಅಧ್ಯಕ್ಷರಾದ ಭಾಗ್ಯಮ್ಮ ತಿಮ್ಮಯ್ಯನವರು ಸ್ಥಳಕ್ಕೆ ಭೇಟಿ ನೀಡಿ ಜೆಸಿಬಿ ಮುಖಾಂತರ ನೀರು ಹೊರಗಡೆ ಹೋಗಲು ಕಾರ್ಯನಿರ್ವಹಿಸುತ್ತಾರೆ ಮತ್ತು ಪ್ರಾಂಶುಪಾಲರಾದ ರಾಜಶೇಖರ್ ರವರು ಮೇಲಿನ ಅಧಿಕಾರಿರವರ ಆದೇಶದಂತೆ ಮಕ್ಕಳಿಗೆ ಮೂರು ದಿನ ಶಾಲೆ,ರಜೆ ಘೋಷಿಸುತ್ತಾರೆ ಯಾವುದೇ ಪ್ರಾಣ ಅಪಾಯ ತೊಂದರೆ ಆಗಿರುವುದಿಲ್ಲ ಈ ಶಾಲೆಗೆ ತುಮಕೂರು ಜಿಲ್ಲೆಗೆ ಒಳಪಡುವ ಸುತ್ತಮುತ್ತಲಿನ ಗ್ರಾಮಗಳಿಂದ ವಿದ್ಯಾಭ್ಯಾಸಕ್ಕಾಗಿ ಬಂದಿರುತ್ತಾರೆ ಈ ಶಾಲೆಯಲ್ಲಿ ವಿದ್ಯುತ್ ಕಂಬಗಳು ಇದ್ದರೂ ಸಮೇತ ಯಾವುದೇ ಅನಾಹುತ ಸಂಭವಿಸುವುದಿಲ್ಲ ಮಕ್ಕಳ ಆರೋಗ್ಯದ ಬಗ್ಗೆ ಪರಿಣಾಮ ಬೀರಬಾರದೆಂದು ಶಾಲೆಯ ಸುತ್ತ ಮುತ್ತ ಸ್ವಚ್ಛತೆ ಕಾರ್ಯ ಕೂಡ ನಡೆದಿಮತ್ತೆ ಶಾಲೆ ಪ್ರಾರಂಭಿಸುವ ಮುನ್ನಶಾಲೆಗೆ ಹಾದು ಹೋಗುವ ದಾರಿಗೆ ನಾಮಫಲಕ ಅಳವಡಿಸಬೇಕೆಂದು ಪೋಷಕರಒತ್ತಾಸೆಮುಂದಿನ ದಿನಗಳಲ್ಲಿ ಈ ರೀತಿ ಜಲಾವೃತ ಆಗದಂತೆಮುನ್ನೆಚ್ಚರಿಕೆ ಕ್ರಮವಹಿಸಬೇಕೆಂದು ಊರಿನ ಗ್ರಾಮಸ್ಥರು ಹಾಗೂ ಪೋಷಕರುತಿಳಿಸಿರುತ್ತಾರೆ

ವರದಿ ಲಕ್ಷ್ಮಿಪತಿ ದೊಡ್ಡ ಎಲ್ಕೂರು