ಹೆಣ್ಣು ಸ್ವಾವಲಂಬಿಯಾಗಿ ಬದುಕಲು ಆಕೆಗೆ ಆತ್ಮಸ್ಥೈರ್ಯ ತುಂಬಿ. ಕ್ಷೇತ್ರ ಶಿಕ್ಷಣಾಧಿಕಾರಿ ಇಂದ್ರಾಣಿ.
ಪಾವಗಡ : ಸಮಾಜದಲ್ಲಿ ಹೆಂಡತಿಗೆ ಆತ್ಮಸ್ಥೈರ್ಯವನ್ನು ತುಂಬವ ಕೆಲಸ ಗಂಡನ ದಾಗಿರುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಇಂದ್ರಾಣಿ ತಿಳಿಸಿದರು.
ಪಟ್ಟಣದ ಗುರುಭವನದಲ್ಲಿ ತಾಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘ ಏರ್ಪಡಿಸಿದ್ದ ಸಂತಾಪ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಮಹಿಳೆಯು ಯಾವುದೇ ಸಮಸ್ಯೆ ಬಂದರೂ ಸದೃಢವಾಗಿ ತನ್ನ ಜೀವನ ತಾನು ನಡೆಸಲು ಆಕೆಗೆ ಧೈರ್ಯ ಮತ್ತು ಆತ್ಮಸ್ಥೈರ್ಯ ತುಂಬ ಕೆಲಸ ಪತಿಯದಾಗಿರುತ್ತದೆ ಎಂದು ಮೃತ ಮುಖ್ಯ ಶಿಕ್ಷಕ ಧನಂಜಯ ಮತ್ತು ಶಿಕ್ಷಕ ಶ್ರೀ ಕೃಷ್ಣ ಕುಟುಂಬದವರ ಪತ್ನಿ ಮತ್ತು ಮಕ್ಕಳನ್ನು ನೆನೆದು ಕ್ಷೇತ್ರ ಶಿಕ್ಷಣಾಧಿಕಾರಿ ಇಂದ್ರಾಣಿ ಕಣ್ಣೀರಿಟ್ಟರು.
ಪ್ರತಿಯೊಬ್ಬ ಶಿಕ್ಷಕನ ಮೇಲೆ ತನ್ನ ಕುಟುಂಬವು ಅವಲಂಬಿತವಾಗಿರುತ್ತದೆ ದಯಮಾಡಿ ಪ್ರತಿಯೊಬ್ಬ ಶಿಕ್ಷಕ ತನ್ನ ಪತ್ನಿಗೆ ಏನೇ ಸಮಸ್ಯೆ ಬಂದರೂ ಧೈರ್ಯವಾಗಿ ಎದುರಿಸುವ ಆತ್ಮಸ್ಥೈರ್ಯವನ್ನು ನೀಡಬೇಕೆಂದು ಪ್ರಾರ್ಥಿಸಿದರು.
ಸಂತಾಪ ಸಭೆಯಲ್ಲಿ ಅನುದಾನಿತ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣಪ್ಪ, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಕಾರ್ಯದರ್ಶಿ, ಕಟ್ಟಾ ನರಸಿಂಹಮೂರ್ತಿ, ಬಡ್ತಿ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಜಿ ವೆಂಕಟೇಶ್, ತಾಲೂಕು ಸಹ ಶಿಕ್ಷಕರ ಸಂಘದ ಕಾರ್ಯದರ್ಶಿ ರಾಜ ಬಾಬು, ತಾಲೂಕು ಸಹ ಶಿಕ್ಷಕರ ಸಂಘದ ಉಪಾಧ್ಯಕ್ಷ ರಾಜಗೋಪಾಲ್, ಜಿಲ್ಲಾ ವೃತ್ತಿ ಶಿಕ್ಷಕರ ಸಂಘದ ಅಧ್ಯಕ್ಷ ತಿಮ್ಮಾಭೋವಿ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಕರಿಯಣ್ಣ, ಈರಣ್ಣ, ಮೈಲಾರರೆಡ್ಡಿ, ಮುಖ್ಯ ಶಿಕ್ಷಕಿ ಲಕ್ಷ್ಮಿ ನರಸಮ್ಮ, ಹಾಗೂ ತಾಲೂಕಿನ ಎಲ್ಲಾ ಸಹ ಶಿಕ್ಷಕರು ಮುಖ್ಯ ಶಿಕ್ಷಕರು, ದೈಹಿಕ ಶಿಕ್ಷಕರು ಪಾಲ್ಗೊಂಡಿದ್ದರು.
ವರದಿ. ಶ್ರೀನಿವಾಸಲು. A