ಮಧುಗಿರಿ: ಸರ್ಕಾರದ ಆದೇಶದಂತೆ ಕಂದಾಯ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಗಳಿಂದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಗಳ ಕುಂದು ಕೊರತೆಯ ಸಭೆಯು ದಲಿತ ಸಂಘಟನೆಗಳ ಮುಖಂಡರುಗಳಿಂದ ಬಹಿಷ್ಕಾರ…
ಮಧುಗಿರಿ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ದಿನಾಂಕ 5.12.2022 ರಂದು ಸರ್ಕಾರದ ಆದೇಶದಂತೆ ಕಂದಾಯ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಗಳಿಂದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಕುಂದು ಕೊರತೆಗಳ ಸಭೆ ಕರೆಯಲಾಗಿತ್ತು.
ಸಭೆಯು ಆರಂಭವಾಗುವ ಮುನ್ನ ಇಂದಿನ ಸಭೆಯ ನಡುವಳಿಯಲ್ಲಿ ಚರ್ಚೆ ಮಾಡಿರುವ ವಿಷಯಗಳ ಬಗ್ಗೆ ಮಾತನಾಡಬೇಕಾದರೆ ಮೊದಲನೆಯದಾಗಿ ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದಾರೆಯೇ ಎಂದು ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಸಂಚಾಲಕರಾದ ದೊಡ್ಡೇರಿ ಕಣಿಮಯ್ಯನವರು ಮಾತನಾಡಿ ಸಭಾಧ್ಯಕ್ಷರಾದ ತಹಶೀಲ್ದಾರ್ ಟಿ ಜಿ ಸುರೇಶ ಚಾರ್ ರವರನ್ನು ಕೇಳಿದಾಗ ಅವರು ಕಾರ್ಯನಿರ್ವಹಣಾಧಿಕಾರಿಗಳು ತುರ್ತು ಕೆಲಸ ಇರುವುದರಿಂದ ನಾನು ಸಭೆಗೆ ಬರುವುದಕ್ಕೆ ಆಗುವುದಿಲ್ಲ ಆದ್ದರಿಂದ ತಾವುಗಳು ಅನುಮತಿ ನೀಡಬೇಕೆಂದು ನನಗೆ ಪತ್ರ ಬರೆದು ಕೊಟ್ಟಿರುತ್ತಾರೆ ಅದೇ ರೀತಿಯಾಗಿ ಅಬಕಾರಿ ಅಧಿಕಾರಿರಾಮೂ ಮೂರ್ತಿಯವರು ಸಹ ಪತ್ರ ಬರೆದು ಕೊಟ್ಟು ಹೋಗಿದ್ದಾರೆ ಇನ್ನು ಎಲ್ಲಾ ಇಲಾಖೆ ಅಧಿಕಾರಿಗಳು ಹಾಜರಿದ್ದಾರೆ ಎಂದು ತಿಳಿಸಿದರು.
ಹಿಂದೆ ನಡೆದಂತಹ ಸಭೆಯ ಚರ್ಚೆಯಲ್ಲಿ ಪ್ರಮುಖವಾದ ವಿಚಾರ ಪುರಸಭೆಯ ಮುಖ್ಯ ಅಧಿಕಾರಿ ಫಿರೋಜ್ ರವರಿಗೆ ಪಟ್ಟಣದ ಕರಡಿಪುರದಲ್ಲಿ 450 ಮನೆಗಳ ವಿಚಾರವಾಗಿ ಹಾಗೂ ಪುರಸಭೆಯ ವ್ಯಾಪ್ತಿಗೆ ಒಳಪಡುವ ಅಂಗಡಿ ಮಳಿಗೆಗಳ ಹರಾಜು ವಿಚಾರವಾಗಿ ಎಂ ವೈ ಶಿವಕುಮಾರ್ ರವರು ಕೇಳಿದಾಗ ಅಂಗಡಿಗಳ ಹರಾಜು ವಿಚಾರವಾಗಿ ಈಗಾಗಲೇ ಹೈಕೋರ್ಟಿನಲ್ಲಿ ಕೇಸ್ ನಡೆಯುತ್ತಿದೆ ಆದ್ದರಿಂದ ಹರಾಜು ಮಾಡಲು ಆಗುತ್ತಿಲ್ಲ ಎಂದು ಉತ್ತರಿಸಿದರು. ಇದಕ್ಕೆ ಸುಮ್ಮನಾದ ಎಂ ವೈ ಶಿವಕುಮಾರ್ ರವರು ಕೂಡಲೇ ಮುಖ್ಯ ಅಧಿಕಾರಿಯ ಮೇಲೆ ಅಂಗಡಿ ಮಳಿಗೆಗಳ ಹರಾಜು ವಿಚಾರವಾಗಿ ಉದಾಸೀನ ಉತ್ತರ ನೀಡುತ್ತಿರುವುದರಿಂದ ಕೂಡಲೇ ಪುರಸಭೆ ಮುಖ್ಯ ಅಧಿಕಾರಿ ಮೇಲೆ ಪ್ರಕರಣ ದಾಖಲು ಮಾಡಬೇಕು ಎಂದು ಪಟ್ಟು ಹಿಡಿದರು.
ಇದಕ್ಕೆ ಸುಮ್ಮನಾಗದ ದಲಿತ ಮುಖಂಡರುಗಳು ನಮಗೆ ಸಮಂಜಸವಾದ ಉತ್ತರ ನೀಡುವವರೆಗೂ ನಾವು ಸಭೆಯಲ್ಲಿ ಭಾಗವಹಿಸುವುದಿಲ್ಲ ಸಭೆಯನ್ನು ಬಹಿಷ್ಕರಿಸುತ್ತೇವೆ ಎಂದು. ಹೊರ ನಡೆದರು.
ಇಷ್ಟಕ್ಕೆ ಸುಮ್ಮನಾಗದ ದಲಿತ ಮುಖಂಡರುಗಳು ಮೊನ್ನೆ ನಡೆದಂತಹ ಪುರುಷೋತ್ತಮ್ ಪ್ರಸಾದ್ ಕೊಲೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಬೇಜವಾಬ್ದಾರಿತನ ಉದಾಸೀನ ಮನೋಭಾವ ಹಾಗೂ ನೊಂದಕುಟುಂಬಕ್ಕೆ ಪರಿಹಾರ ನೀಡಲು ಮೀನಾ ಮೇಷ ಎಣಿಸುತ್ತಿರುವುದನ್ನು ನಾವು ಸಹಿಸುವುದಿಲ್ಲ ಎಂದು ಡಿ. ಟಿ .ಸಂಜೀವ ಮೂರ್ತಿಯವರು ಆಕ್ರೋಶ ವ್ಯಕ್ತಪಡಿಸಿ. ಕೂಡಲೇ ನೀವು ಜಿಲ್ಲಾ ಜಂಟಿ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಅವರಿಗೆ ಮಾತನಾಡಿ ಸೂಕ್ತ ಪರಿಹಾರ ನೀಡಬೇಕು ಇಲ್ಲವಾದಲ್ಲಿ ನಾವು ಉಗ್ರ ಹೋರಾಟ ಮಾಡುತ್ತೇವೆ ಎಂದರು.
ಎಲ್ಲರೂ ಕೂಡ ಸಭೆಯನ್ನು ಬಹಿಷ್ಕಾರ ಮಾಡಿ ತಾಲೂಕು ಪಂಚಾಯಿತಿ ಕಚೇರಿಮುಂಭಾಗ ಧರಣಿ ಕುಳಿತು. ಅಧಿಕಾರಿಗಳ ವಿರುದ್ಧ ಧಿಕ್ಕಾರಗಳನ್ನು ಕೂಗುತ್ತಾ ಏನು ನಮ್ಮ ಬೇಡಿಕೆಗಳಿದ್ದಾವೆ ಅವುಗಳನ್ನು ಬಗೆಹರಿಸುವವರೆಗೂ ನಾವುಗಳು.ಧರಣಿ ಮುಂದುವರಿಸುತ್ತೇವೆ ಎಂದಾಗ.
ತಹಶೀಲ್ದಾರ್ ಟಿ.ಜಿ .ಸುರೇಶ ಆಚಾರ್. ಹಾಗೂ ವೃತ್ತ ನಿರೀಕ್ಷಕರಾದ ಎಂ.ಎಸ್. ಸರ್ದಾರ್ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಕುಂದು ಕೊರತೆ ಸಭೆಯು ಬಹಿಷ್ಕಾರ ಬೇಡ ಸಭೆಯಲ್ಲಿ ಭಾಗವಹಿಸಿ ಎಂದು ಮನವಿ ಮಾಡಿದರು .
ಆದರೆ ದಲಿತ ಮುಖಂಡರ ಯಾರು ಕೂಡ ಸ್ಪಂದಿಸಲಿಲ್ಲ ನಮ್ಮ ಮೂರು ಬೇಡಿಕೆಗಳು ಏನಿದ್ದಾವೆ ಅವುಗಳನ್ನು ನೀವು ಈ ಸ್ಥಳದಲ್ಲಿಯೇ ಬಗೆ ಹರಿಸಿಕೊಟ್ಟರೆ ಮಾತ್ರ ನಾವು ಧರಣಿ ಮಾಡುವುದನ್ನು ನಿಲ್ಲಿಸುತ್ತೇವೆ ಎಂದು. ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಸಂಚಾಲಕರಾದ ದೊಡ್ಡೇರಿ ಕಣಿ ಮಯ್ಯ ಮಾತನಾಡಿ ಶಿರಾ ತಾಲೂಕಿನ ಪದ್ಮಾಪುರ ಕಿರಿಯ ಪ್ರಾಥಮಿಕ ಪಾಠಶಾಲೆಯ ಸಹ ಶಿಕ್ಷಕನಾದ ಕೆ .ಸಿ .ಜೀವನ್ ಪ್ರಕಾಶ್ ಎಂಬುವನು ಜಾತಿ ನಿಂದನೆ ಮಾಡಿ ಮೊಬೈಲ್ ನಲ್ಲಿ ಹೀನಮಾನವಾಗಿ ಜಾತಿಯನ್ನ ಇಡಿದುಬೈದಿರುತ್ತಾನೆ. ಅದರಿಂದ ಇಡೀ ಜಿಲ್ಲೆಯಲ್ಲಿ ಇರತಕ್ಕಂತಹ ದಲಿತ ಜನಾಂಗಕ್ಕೆ ಅವಮಾನ ಮಾಡಿದ್ದಾನೆ . ಆತನ ಮೇಲೆ ಈಗಾಗಲೇ ಜಾತಿ ನಿಂದನೆ ಪ್ರಕರಣ ದಾಖಲಾಗಿದ್ದರು ಕೂಡ ಆತನನ್ನು ಬಂಧಿಸಿಲ್ಲ ಮತ್ತು ಸಂಬಂಧಪಟ್ಟ ಮದುಗಿರಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕರಾದ ಕೆ ಜಿ ರಂಗಯ್ಯರವರು ಕೂಡ ಆ ಶಿಕ್ಷಕನನ್ನು ಇಲ್ಲಿಯವರೆಗೂ ಕೂಡ ಅವಮಾನತ್ತು ಮಾಡಿಲ್ಲ. ಇದರ ಉದ್ದೇಶವಾದರೂ ಏನು ಈ ಕೂಡಲೇ ಈ ಕ್ಷಣದಲ್ಲಿಯೇ ಆತನನ್ನು ಅವಮಾನತ್ತು ಮಾಡಿ ಆದೇಶ ಪತ್ರವನ್ನು ಕೊಟ್ಟರೆ ಮಾತ್ರ ನಾವುಗಳು ಈ ಧರಣಿಯನ್ನು ಕೈಬಿಡುತ್ತೇವೆ ಎಂದು ಹೇಳಿದಾಗ ಕೂಡಲೇ ಕಾರ್ಯ ಪ್ರವೃತ್ತರಾದ ಡಿ ಡಿ. ಪಿ. ಐ. ಕೆ.ಜಿ .ರಂಗಯ್ಯನವರು ಸಂಬಂಧಪಟ್ಟ ಶಿಕ್ಷಕನನ್ನು ಅವಮಾನತ್ತು ಮಾಡಿ ಆದೇಶ ಪತ್ರವನ್ನು ಸಭೆಯ ಸಭಾಧ್ಯಕ್ಷರಾದ ಟಿ. ಜಿ .ಸುರೇಶ ಆಚಾರ್ ಅವರಿಗೆ ನೀಡಿದರು ಆದೇಶ ಪತ್ರವನ್ನು ಓದಿ ವಿಚಾರವನ್ನು ತಿಳಿಸಿರುತ್ತಾರೆ. ಮುಂದುವರೆದಂತೆ
ಐ.ಡಿ .ಹಳ್ಳಿ ದಲಿತ ಕುಟುಂಬಕ್ಕೆ ಸೇರಿದ ಯುವಕ ಪುರುಷೋತ್ತಮ್ ಪ್ರಸಾದ್ ಕೊಲೆಯಾಗಿ ಎಸ್ಪಿ ಅವರು ಬಂದುಕೊಡಿಗೆನಹಳ್ಳಿ ಪೊಲೀಸ್ ಠಾಣೆಯಲ್ಲಿ . ಜಾತಿ ನಿಂದನೆ ಕೇಸು ದಾಖಲು ಮಾಡಿದ್ದಾರೆ. ಆದರೆ ಮದುಗಿರಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಮನಸೋ ಇಚ್ಛೆಯಂತೆ ಜಂಟಿ ನಿರ್ದೇಶಕರು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಕಚೇರಿಗೆ ತಪ್ಪು ಮಾಹಿತಿಯನ್ನು ನೀಡಿರುವುದರಿಂದ ಇಲ್ಲಿಯವರೆಗೂ ಕೂಡ ನೊಂದ ಕುಟುಂಬಕ್ಕೆ ಪರಿಹಾರ ಕೊಡಿಸುವಲ್ಲಿ ತುಂಬಾ ಕರ್ತವ್ಯ ಲೋಪಯಸಿಗಿರುವುದು. ಅಧಿಕಾರಿಗಳ ಕರ್ತವ್ಯ ಲೋಪ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ ಎಂದು ವಕೀಲರಾದ ನರಸಿಂಹಮೂರ್ತಿರವರು. ಸಮಾಜ ಕಲ್ಯಾಣ ಅಧಿಕಾರಿಗಳ ಕರ್ತವ್ಯ ಲೋಪವನ್ನು ಖಂಡಿಸಿದರು.ಕೂಡಲೇ ತಹಶೀಲ್ದಾರ್ ಅವರು ಹಾಗೂ ಸಮಾಜ ಕಲ್ಯಾಣ ಅಧಿಕಾರಿಗಳು ನಮಗೆ ಪರಿಹಾರ ಕೊಡಿಸಿದರೆ ಮಾತ್ರ ನಾವು ಈ ಬಹಿಷ್ಕಾರವನ್ನು ಕೈ ಬಿಡುತ್ತೇವೆ ಎಂದಾಗ . ತಹಸೀಲ್ದಾರ್ ರವರು ಹಾಗೂ ಸಮಾಜ ಕಲ್ಯಾಣ ಅಧಿಕಾರಿಗಳು ಜಿಲ್ಲಾ ಸಮಾಜ ಕಲ್ಯಾಣ ಜಂಟಿ ನಿರ್ದೇಶಕರಿಗೆ ಫೋನ್ ಮೂಲಕ ಕರೆ ಮಾಡಿ ಈ ಸಭೆಯ ಉದ್ದೇಶದ ಬಗ್ಗೆ ಕುಲಂಕೋಶವಾಗಿ ತಿಳಿಸಿದಾಗ ಅವರು ಇನ್ನೂ ಒಂದು ವಾರದ ಒಳಗಾಗಿ ಆ. ನೊಂದ ಕುಟುಂಬಕ್ಕೆ ಐವತ್ತು ಸಾವಿರ ಪರಿಹಾರ ಕೊಡುವುದಾಗಿ ಹೇಳಿದ್ದಾರೆಂದು ಭರವಸೆ ನೀಡಿದಾಗ. ದಲಿತ ಸಂಘಟನೆಯ ಮುಖಂಡರುಗಳೆಲ್ಲರೂ ಇದಕ್ಕೆ ಒಪ್ಪಿಗೆ ಸೂಚಿಸಿದರು.
ತದನಂತರ ಮಾತನಾಡಿದ ದಲಿತ ಡಾಕ್ಟರಮಹಾರಾಜುಸಾರ್ವಜನಿಕ ಆಸ್ಪತ್ರೆಯ ಆಡಳಿತ ಅಧಿಕಾರಿ ಡಾಕ್ಟರ.ಮಹೇಶ್ ರವರನ್ನು ನೀವುಗಳು ನಿನ್ನೆ ಪತ್ರಿಕೆಗೋಷ್ಠಿ ಮಾಡಿರುವುದು ಸಮಂಜಸವಲ್ಲ. ಏಕೆಂದರೆ ಒಬ್ಬ ದಲಿತ ಮಹಿಳಾ ಡಾಕ್ಟರ್ ಹೇಮಾವತಿ ತುಂಬಾ ಚೆನ್ನಾಗಿ ಹೆರಿಗೆ ಮಾಡಿಕೊಂಡು ಬರುತ್ತಿದ್ದಾರೆ ಯಾವುದೇ ವಿಧವಾದ ಆಮಿಷಗಳಿಗೆ ಹಾಗೂ ಬಡವರಿಗೆ ಸಾರ್ವಜನಿಕವಾಗಿ ತೊಂದರೆಯಾಗದಂತೆ ಕರ್ತವ್ಯವನ್ನು ನಿರ್ವಹಿಸುತ್ತಿರುತ್ತಾರೆ. ಯಾರೋ ಕೆಲವು ವ್ಯಕ್ತಿಗಳು ಸಾರ್ವಜನಿಕ ಆಸ್ಪತ್ರೆಯಲ್ಲಿ ವಿನಾಕಾರಣ ಅವರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ ಬರುತ್ತಿರುತ್ತಾರೆ. ಅವುಗಳನ್ನು ನಾವು ಸಹಿಸಲು ಆಗುವುದಿಲ್ಲ ನೀವು ಕೂಡ ಸಾರ್ವಜನಿಕ ಆಸ್ಪತ್ರೆಯಲ್ಲಿ ವಾಸ್ತವವಾಗಿರಬೇಕು ಆದರೆ ನೀವು ಬರುವುದು ಬೆಂಗಳೂರಿನಿಂದ ನಿಮ್ಮ ಕರ್ತವ್ಯ ಲೋಪವೂ ಕೂಡ ಇದೆ ಎಂದು ಕೇಳಿದಾಗ. ನಾನು ಇಲ್ಲೇ ಇರುತ್ತೇನೆ ನಾನು ಅಂತಹ ಉದ್ದೇಶ ಏನು ಇಟ್ಟುಕೊಂಡಿಲ್ಲ ಸಾಮಾಜಿಕ ಜಾಲತಾಣದಲ್ಲಿ ಬಂದಿರುವ ವಿಚಾರದ ಬಗ್ಗೆ ಮಾತನಾಡಿದ್ದೇನೆ ಎಂದು ತಿಳಿಸಿದರು. ಇದಕ್ಕೆ ಸುಮ್ಮನಾಗದ ದಲಿತ ಮುಖಂಡರುಗಳು ನೀವು ವಿನಾಕಾರಣ ಏನಾದರು ಆ ದಲಿತ ಹೆಣ್ಣು ಮಗಳ ಅಧಿಕಾರಿಗೆ ತೊಂದರೆ ಕೊಟ್ಟರೆ ನಾವು ಸುಮ್ಮನಿರುವುದಿಲ್ಲ. ಪ್ರತ್ಯೇಕವಾಗಿ ಇದೇ ವಿಚಾರವಾಗಿ ತಹಸೀಲ್ದಾರ್ ವೃತ್ತ ನಿರೀಕ್ಷಕರು ಸಾರ್ವಜನಿಕ ಆಸ್ಪತ್ರೆ ಆಡಳಿತ
ಅಧಿಕಾರಿ ಕೆಲವು ಪ್ರಮುಖ ದಲಿತ ಮುಖಂಡರುಗಳು ಸೇರಿ ಒಂದು ಸಭೆ ನಡೆಸಬೇಕಾಗುತ್ತದೆ ಎಂದು ತಿಳಿಸಿದಾಗ ಇದಕ್ಕೆ ಎಲ್ಲರೂ ಸಮ್ಮತಿಸಿದರು.
ಕೊನೆಯದಾಗಿ ದಲಿತ ಮುಖಂಡರು ಈ ಸಭೆಯನ್ನು ಇಲ್ಲಿಗೆ ಮುಕ್ತಾಯ ಮಾಡಿ ಮುಂದಿನ ಸಭೆಯ ದಿನಾಂಕವನ್ನು ತಿಳಿಸಿಕೊಡಬೇಕು ಎಂದು ತಹಶೀಲ್ದಾರ್ ರವರನ್ನು ಕೇಳಿದಾಗ ಡಿಸೆಂಬರ್ 2ನೇ ತಾರೀಕು ಮುಂದಿನ ಸಭೆಯನ್ನು ನಡೆಸುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದಾಗ.. ಸಭೆಯನ್ನು ಮುಕ್ತಾಯಗೊಳಿಸಲಾಯಿತು.
ಈ ದಲಿತ ಮುಖಂಡರುಗಳಾದ ದೊಡ್ಡೇರಿ ಕಣಿಮಯ್ಯ.ವಕೀಲರಾದ ನರಸಿಂಹಮೂರ್ತಿ. ತೊಂಡೂಟಿ.ರಾಮಾಂಜನೇಯ . ಡಿ ಟಿ ಸಂಜೀವ ಮೂರ್ತಿ. ಎಂ ವೈ ಶಿವಕುಮಾರ್. ಬಿಎಸ್ಪಿ ತಾಲೂಕ್ ಅಧ್ಯಕ್ಷ ಗೋಪಾಲ್. ನರಸಿಂಹಮೂರ್ತಿ ಲಕ್ಷ್ಮಿಪತಿ ದೊಡ್ಡ ಯಲ್ಕೂರು. ಜೀವಿಕ ಸಂಚಾಲಕ ಮಂಜುನಾಥ್. ದೊಡ್ಡೇರಿ ಮಹಾಲಿಂಗಯ್ಯ. ಐ. ಡಿ. ಹಳ್ಳಿ ಬಾಲಕೃಷ್ಣ. ಸಿದ್ದಾಪುರದ ರಂಗಾಮಯ್ಯ. ಸಿದ್ದಾಪುರ ಸಂಜೀವಯ್ಯ. ರಾಮಯ್ಯ. ಜೀವಿಕ ಅಂಜಿನಪ್ಪ ಬೆಲ್ಲದಮಡಗು ಭರತ್ ಕುಮಾರ್.ನೇರಳೆ ಕೆರೆ ರಂಗನಾಥ್. ವಕೀಲರಾದ ಶಿವಣ್ಣ. ಕೋಟೆ ಕಲ್ಲಪ್ಪ .ಮೈಲಾರಪ್ಪ. ಸುನಿಲ್.ಶ್ರೀನಿವಾಸ್. ಕಾಕಪ್ಪ ಇನ್ನು ಮುಂತಾದವರು ಸಭೆಯಲ್ಲಿ ಹಾಜರಿದ್ದರು..
ವರದಿ .ಲಕ್ಷ್ಮಿಪತಿ ದೊಡ್ಡ ಯಲ್ಕೂರು