IMG 20200918 WA0035

ಪಾವಗಡ: ವಾಲ್ಮೀಕಿ ಸಮುದಾಯಕ್ಕೆ 7.5 ರಷ್ಟು ಮೀಸಲಾತಿಗೆ ಒತ್ತಾಯ….!

DISTRICT NEWS ತುಮಕೂರು

ವಾಲ್ಮೀಕಿ ನಾಯಕ ಸಮಾಜದ ಪರಿಶಿಷ್ಟ ಪಂಗಡದವರಿಗೆ 7.5 ರಷ್ಟು ಮೀಸಲಾತಿ ನೀಡಬೇಕು

ಪಾವಗಡ: ಕರ್ನಾಟಕದ ವಾಲ್ಮೀಕಿ ನಾಯಕ ಸಮಾಜದ ಪರಿಶಿಷ್ಟ ಪಂಗಡದವರಿಗೆ 7.5 ರಷ್ಟು ಮೀಸಲಾತಿಯನ್ನು ಅಂಗೀಕರಿಸಬೇಕು ಮತ್ತು ಪ್ರತ್ಯೇಕ ಪರಿಶಿಷ್ಟ ಪಂಗಡ ಸಚಿವಾಲಯವನ್ನು ಸ್ಥಾಪಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿ ಪಾವಗಡ ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿಂದು ಪತ್ರಿಕಾಗೋಷ್ಠಿಯನ್ನ ನಡೆಸಲಾಯಿತು.

ಇದೇ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯನ್ನ ಉದ್ದೇಶಿಸಿ ಮಾತನಾಡಿದ ನಿಡಗಲ್ ವಾಲ್ಮೀಕಿ ಆಶ್ರಮದ ಪೀಠಾಧ್ಯಕ್ಷ ಶ್ರೀ ಸಂಜಯ್ ಕುಮಾರ ಸ್ವಾಮೀಜಿಯವರು ಮಾತನಾಡುತ್ತ
ಕಳೆದ 12 ವರ್ಷಗಳಿಂದ ನಾಯಕ ಸಮುದಾಯದ 7.5 ರಷ್ಟು ಮೀಸಲಾತಿ ನೀಡುವ ಸಲುವಾಗಿ ಉಗ್ರ ಹೋರಾಟಗಳನ್ನು ಮಾಡುತ್ತಿದ್ದೇವೆ.ಪರಿಣಾಮ ಸರ್ಕಾರ ಜನಸಂಖ್ಯಾ ಆಧಾರದ ಮೇಲೆ ವಸ್ತುಸ್ಥಿತಿ ವಾಸ್ತವ ಪರಿಸ್ಥಿತಿಯನ್ನ ಪರಿಶೀಲಿಸಿ ವರದಿ ನೀಡುವಂತೆ ನಾಗಮೋಹನ್ ದಾಸ್ ಅವರನ್ಜೊಳಗೊಂಡ ಸಮಿತಿ ರಚಿಸಲಾಯಿತು. ಅವರು ನೀಡಿದ ವರದಿಯನ್ನು ಸಚಿವ ಸಂಪುಟದಲ್ಲಿ ಅಂಗೀಕರಿಸಬೇಕಿದೆ ಎಂದು ಸರ್ಕಾರವನ್ನು ಒತ್ತಾಯಿಸಿದರು.

ಇದೇ ವೇಳೆ ವಾಲ್ಮೀಕಿ ಜಾಗೃತಿ ವೇದಿಕೆ ಅಧ್ಯಕ್ಷ ಲೋಕೇಶ್ ಪಾಳೆಗಾರ್ ಮಾತನಾಡಿ ನಾಯಕ ಸಮಾಜದ ಪರಿಶಿಷ್ಟ ಪಂಗಡದವರಿಗೆ 7.5 ರಷ್ಟು ಮೀಸಲಾತಿ ಕಲ್ಪಿಸಬೇಕು ಮತ್ತು ಪ್ರತ್ಯೇಕ ಸಚಿವಾಲಯವನ್ನು ಆರಂಭಿಸಬೇಕು ಇಲ್ಲವಾದಲ್ಲಿ 1857 ರಲ್ಲಿ ಬೇಡರು ಹಲಗಲಿಯಲ್ಲಿ ಬ್ರಿಟಿಷರ ವಿರುದ್ಧ ದಂಗೆ ಯೆದ್ದ ಹಾಗೆ ಸರ್ಕಾರ ವಿರುದ್ಧ ರಾಜ್ಯದಲ್ಲಿರುವ ಎಪ್ಪತ್ತು ಲಕ್ಷ ನಾಯಕ ಸಮಾಜದವರು ವಿಧಾನಸೌಧಕ್ಕೆ ಮುತ್ತಿಗೆ ಹಾಕ್ತೇವೆ ಎಂದು ಎಚ್ಚರಿಸಿದರು.

ಈ ವೇಳೆ ತಹಶೀಲ್ದಾರ್ ವರದರಾಜುರವರಿಗೆ ಮನವಿ ಪತ್ರ ನೀಡಲಾಯಿತು.

ಇದೇ ವೇಳೆ ತಾ.ಪಂ ಸದಸ್ಯ ನರಸಿಂಹಲು, ಮುಖಂಡ ಚಿತ್ತಗಾನಹಳ್ಳಿ ಚಂದ್ರು, ಓಂಕಾರ ನಾಯಕ, ಭಾಸ್ಕರ್ ನಾಯಕ, ಕನ್ನಮೇಡಿ ಸುರೇಶ್, ಬ್ಯಾಡನೂರು ಶಿವು, ಬೇಕರಿ ನಾಗರಾಜು, ಟೈಲರ್ ನಾರಾಯಣಪ್ಪ, ಕರವೇ ಲಕ್ಷ್ಮೀ ನಾರಾಯಣ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವರದಿ: ನವೀನ್ ಕಿಲಾರ್ಲಹಳ್ಳಿ