ಮಧ್ಯಪಾನ ಮುಕ್ತ ಗ್ರಾಮದಲ್ಲಿ ಮದ್ಯ ಮಾರಾಟ…!
ಪಾವಗಡ: ಚಿಕ್ಕ ತಿಮ್ಮನಹಟ್ಟಿ ಗ್ರಾಮವು ಮಧ್ಯಪಾನ ಮುಕ್ತ ಗ್ರಾಮ ಎಂದು ಘೋಷಣೆಯಾಗಿದ್ದು ಆದರೂ ಸಹ ಕೆಲ ದುಷ್ಕರ್ಮಿಗಳು ಹಳ್ಳಿಯ ಜನರಿಗೆ ಮಧ್ಯ ಕುಡಿಸಿ ಗಲಾಟಿ ಮಾಡಿಸುತ್ತಾರೆ, ಮದ್ಯಪಾನ ಗ್ರಾಮ ಮುಕ್ತ ಆದರೂನು ಸಹ ಮಧ್ಯಪಾನ ಮಾರಾಟ ನಿಂತಿಲ್ಲ ದಯಮಾಡಿ ಮಧ್ಯ ಮಾರಾಟ ಮಾಡುವವರ ವಿರುದ್ಧ ಕಡಿವಾಣ ಹಾಕಬೇಕು ಎಂದರು.
ನಿಡಗಲ್ ಹೋಬಳಿಯ ಅರಸೀಕೆರೆ ಪೊಲೀಸ್ ಠಾಣೆಯ ಆವರಣದಲ್ಲಿ ಏರ್ಪಡಿಸಿದ್ದ ಎಸ್ ಸಿ ಎಸ್ ಟಿ ಕುಂದು ಕೊರತೆ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮರಳು ಟ್ರ್ಯಾಕ್ಟರ್ ಮೂಲಕ ರಾತ್ರಿ ವೇಳೆ ರಾಜಾರೋಷವಾಗಿ ದಂದೆ ಮಾಡುತ್ತಿದ್ದಾರೆ ಅಂತಹವರನ್ನು ತಡೆಹಿಡಿಯಬೇಕು ಎಂದರು.
ಜೆಡಿಎಸ್ ಮುಖಂಡ ಮಂಜುನಾಥ್ ಮಾತನಾಡಿ,
ಮಂಗಳವಾಡ ಗ್ರಾಮದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ನರ್ಸ್ ನನ್ನು ನೇಮಕ ಮಾಡಿಕೊಡಬೇಕೆಂದರು.
ನ್ಯಾಯದಗುಂಟೆಯ ದುರ್ಗಣ್ಣ ಮಾತನಾಡಿ ಕೊಡಿಗೆಹಳ್ಳಿಯಿಂದ ನ್ಯಾಯದಗುಂಟೆ ಹೋಗಲು ಬಸ್ ಸೌಲಭ್ಯ ಇರುವುದಿಲ್ಲ ಎಂದರು.
ಮದ್ದೆ ಗ್ರಾಮದ ಕೆಲವು ಮುಖಂಡರು 14ನೇ ತಾರೀಕು ಸ್ವಾರಮ್ಮನ ಜಾತ್ರೆ ಪ್ರಯುಕ್ತ ಇರುವುದರಿಂದ ಗ್ರಾಮದಲ್ಲಿ ಮತ್ತು ಜಾತ್ರೆಯಲ್ಲಿ ಮದ್ಯಪಾನ ಮತ್ತು ಇತರ ಚಟುವಟಿಕೆಗಳನ್ನು ನಿಲ್ಲಿಸಬೇಕು ಎಂದು ಮನವಿ ಮಾಡಿಕೊಂಡರು
ಕುಂದು ಕೊರತೆ ಸಭೆಯನ್ನು ಉದ್ದೇಶಿಸಿ,ಸಿ ಪಿ ಐ ಗಿರೀಶ್ ಮಾತನಾಡಿ,ಅರಸೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಗಳಲ್ಲಿ ಧ್ವನಿವರ್ಧಕ ಮೂಲಕ ನಮ್ಮ ಸಿಬ್ಬಂದಿ ವಾಹನದ ಮೂಲಕ ಮೈಕ್ ಮುಖಾಂತರ ಇಸ್ಪೀಟು ಮಟ್ಕಾ ಮೀಟರ್ ಬಡ್ಡಿ ಅಕ್ರಮ ಚಟುವಟಿಕೆಗಳ ಬಗ್ಗೆ ಮಾತಿ ನೀಡುತ್ತೇವೆ.
ಈ ಹಿಂದೆಗಿಂತ ಈಗ ಹೆಚ್ಚಿನ ಬದಲಾವಣೆ ಆಗಿದೆ ಎಂದರು.
ಈ ಸಂದರ್ಭದಲ್ಲಿ ಸಬ್ ಇನ್ಸ್ಪೆಕ್ಟರ್ ತಾರಾಸಿಂಗ್, ಚೌಕತ್ ಆಲಿ, ಸುದರ್ಶನ್, ಏ. ಎಸ್ ಐ ಗೋಕರ್ಣ , ಚಾಂದ್ ಪಾಷಾ, ಕರಿಬಸವ ಕೊತ್ತೂರು, ಹನುಮಂತರಾಯ ದೇವಲಕೆರೆ, ತಿಪ್ಪೇಸ್ವಾಮಿ, ಇನ್ನು ಅನೇಕ ಡಿಎಸ್ಎಸ್ ಮುಖಂಡರು ಈ ಸಭೆಗೆ ಭಾಗವಹಿಸಿದ್ದರು,
ವರದಿ ; ಶ್ರೀನಿವಾಸಲು ಎ