Rathayathre 2 scaled

Karnataka : “ಅನುಭವ ಮಂಟಪ-ಬಸವಾದಿ ಶರಣರ ವೈಭವ” ರಥಯಾತ್ರೆಗೆಚಾಲನೆ….!

Genaral STATE

“ಅನುಭವ ಮಂಟಪ-ಬಸವಾದಿ ಶರಣರ ವೈಭವ” ರಥಯಾತ್ರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಚಾಲನೆ

ಬೆಂಗಳೂರು, ಏಪ್ರಿಲ್ 17 (ಕರ್ನಾಟಕ ವಾರ್ತೆ): ಕರ್ನಾಟಕ ಸಾಂಸ್ಕøತಿಕ ನಾಯಕರಾದ ವಿಶ್ವಗುರು ಬಸವಣ್ಣನವರ ಬದುಕು, ವಚನ ಸಾಹಿತ್ಯ, ಸಂದೇಶ ಮತ್ತು ಚಿಂತನೆಗಳನ್ನು ನಾಡಿನಾದ್ಯಂತ ಪರಿಚಯಿಸುವ ಉದ್ದೇಶದಿಂದ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ವತಿಯಿಂದ ಏಪ್ರಿಲ್ 29 ಮತ್ತು 30 ರಂದು ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ಹಮ್ಮಿಕೊಳ್ಳಲಾಗಿರುವ  “ಅನುಭವ ಮಂಟಪ-ಬಸವಾದಿ ಶರಣರ ವೈಭವ” ಕಾರ್ಯಕ್ರಮದ ಸಂಬಂಧ ಇಂದು ವಿಧಾನಸೌಧದ ಮುಂಭಾಗದಲ್ಲಿ ರಥಯಾತ್ರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿ, ಲಾಂಛನ ಬಿಡುಗಡೆ ಮಾಡಿದರು.

ನಂತರ ಮಾತನಾಡಿದ ಮುಖ್ಯಮಂತ್ರಿಗಳು, ಬಸವಣ್ಣ ಅವರನ್ನು ಸಾಂಸ್ಕøತಿಕ ನಾಯಕ ಎಂದು ನಮ್ಮ ಸರ್ಕಾರ ಘೋಷಣೆ ಮಾಡಿದ್ದು, ಸಾಂಸ್ಕøತಿಕ ನಾಯಕರನ್ನಾಗಿ ಒಪ್ಪಿಕೊಂಡು ನಾವು ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಸಾಮಾಜಿಕ ಕ್ರಾಂತಿ ಮಾಡಿರುವ ಬಸವಣ್ಣನವರು, ಸಮಾಜ ಸುಧಾರಣೆಯಲ್ಲಿ ನುಡಿದಂತೆ ನಡೆದುಕೊಂಡರು, ನಡೆದಂತೆ ನುಡಿದರು.  ಅವರಿಗೋಸ್ಕರ  ಜೀವಿಸಲಿಲ್ಲ.  ಸಮಾಜಕ್ಕಾಗಿ ಜೀವಿಸಿದವರು ಬಸವಣ್ಣನವರು ಎಂದರು.

ಬಸವಣ್ಣನವರ  ವಚನ ಸಾಹಿತ್ಯವನ್ನು, ಅವರ ವಿಚಾರವನ್ನು ನಾಡಿನಾದ್ಯಂತ ಪರಿಚಯಿಸಲು ರಥವು 15 ಜಿಲ್ಲೆಗಳಲ್ಲಿ ಸಂಚರಿಸಿ, ಬಾಗಲಕೋಟೆಯ 9 ತಾಲ್ಲೂಕುಗಳಲ್ಲಿ ಸಂಚರಿಸಿ, ಏಪ್ರಿಲ್ 29 ರಂದು ಕೂಡಲಸಂಗಮಕ್ಕೆ ತಲುಪಲಿದೆ. ಏಪ್ರಿಲ್ 29 ಮತ್ತು 30 ರಂದು ಬಸವ ಜಯಂತಿಯ ಅಂಗವಾಗಿ “ಅನುಭವ ಮಂಟಪ-ಬಸವಾದಿ ಶರಣರ ವೈಭವ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿರುವ  ಕಾರ್ಯಕ್ರಮದಲ್ಲಿ ನಾನು ಭಾಗವಹಿಸಲಿದ್ದೇನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬೈಲಹೊಂಗಲದ ನಿಜಗುಣನಂದ ಸ್ವಾಮೀಜಿ, ಕನ್ನಡ ಮತ್ತು ಸಂಸ್ಕøತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ, ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್, ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ, ಇಂಧನ ಸಚಿವ ಕೆ.ಜೆ.ಜಾರ್ಜ್, ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್, ಸಾಹಿತಿ ಹಂಪ ನಾಗರಾಜಯ್ಯ, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಹಾಗೂ ಇತರೆ ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *